RNI NO. KARKAN/2006/27779|Tuesday, August 5, 2025
You are here: Home » breaking news » ಗೋಕಾಕ:ಬಣ್ಣದಲ್ಲಿ ಮಿಂದೆದ್ದು ಸಂಭ್ರಮದಲ್ಲಿ ತೇಲಿದ ಗೋಕಾಕ ಜನತೆ

ಗೋಕಾಕ:ಬಣ್ಣದಲ್ಲಿ ಮಿಂದೆದ್ದು ಸಂಭ್ರಮದಲ್ಲಿ ತೇಲಿದ ಗೋಕಾಕ ಜನತೆ 

ಬಣ್ಣದಲ್ಲಿ ಮಿಂದೆದ್ದು ಸಂಭ್ರಮದಲ್ಲಿ ತೇಲಿದ ಗೋಕಾಕ ಜನತೆ

ಗೋಕಾಕ 27 : ನಗರದಾದ್ಯಂತ ಮಂಗಳವಾರ ಹಾಗೂ ಬುಧವಾರ ದಂದು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸೋಮವಾರ ರಾತ್ರಿ ಕಾಮನದಹನ ಮಾಡಿ , ಉರುವಲು ಸುಟ್ಟು ಯುವಕರು ಸಂಭ್ರಮಿಸಿದರು. ಮಧ್ಯರಾತ್ರಿವರೆಗೆ ಬೊಬ್ಬೆ ಹೊಡೆಯುತ್ತ ಕಾಮದಹನ ಮಾಡಿದರು. ಎರಡು ದಿನವೂ ಮಧ್ಯಾಹ್ನ 1 ಗಂಟೆವರೆಗೆ ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವ ಸಮೂಹ ನಂತರ ನದಿ, ಕೆರೆಗಳಲ್ಲಿ ಸ್ನಾನ ಮಾಡಿದರು. ಯುವಕರು, ಮಕ್ಕಳು ತಮ್ಮ ತಮ್ಮ , ಬಡಾವಣೆಗಳಲ್ಲಿ ಬಣ್ಣದಾಟವಾಡಿದರೆ ಮಹಿಳೆಯರು ಅಕ್ಕಪಕ್ಕದವರೊಂದಿಗೆ ಸೇರಿ ಪರಸ್ಪರ ಬಣ್ಣ ಬಳಿದುಕೊಂಡು ಸಂಭ್ರಮಿಸಿದರು.

Related posts: