RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಮಾರ್ಚ 1 ರಿಂದ 4 ರವರೆಗೆ 19ನೇ ಶರಣ ಸಂಸ್ಕೃತಿ ಉತ್ಸವ : ಸಂತೋಷ ಸೋನವಾಲಕರ ಮಾಹಿತಿ

ಗೋಕಾಕ:ಮಾರ್ಚ 1 ರಿಂದ 4 ರವರೆಗೆ 19ನೇ ಶರಣ ಸಂಸ್ಕೃತಿ ಉತ್ಸವ : ಸಂತೋಷ ಸೋನವಾಲಕರ ಮಾಹಿತಿ 

ಮಾರ್ಚ 1 ರಿಂದ 4 ರವರೆಗೆ 19ನೇ ಶರಣ ಸಂಸ್ಕೃತಿ ಉತ್ಸವ : ಸಂತೋಷ ಸೋನವಾಲಕರ ಮಾಹಿತಿ

ಗೋಕಾಕ ಫೆ 27 : 19ನೇ ಶರಣ ಸಂಸ್ಕೃತಿ ಉತ್ಸವ ಮಾರ್ಚ 1 ರಿಂದ 4 ರವರೆಗೆ ನಗರದ ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಜರುಗಲಿದ್ದು, ಮಾರ್ಚ್ 1 ರಂದು ಜರುಗುವ ಬಸವಧರ್ಮ ಸಮಾವೇಶದಲ್ಲಿ ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ ಅವರಿಗೆ ಕಾಯಕಶ್ರೀ ಪ್ರಶಸ್ತಿ ಜೊತೆಗೆ 1 ಲಕ್ಷ ರೂ ನಗದು ನೀಡಿ ಗೌರವಿಸಲಾಗುವುದು ಎಂದು ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷ ಸಂತೋಷ ಸೋನವಾಲಕರ ಹೇಳಿದರು.

ಮಂಗಳವಾರದಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಾರ್ಚ್ 1 ಶುಕ್ರವಾರದಂದು ಮುಂಜಾನೆ 8 ಘಂಟೆಗೆ ನಗರದ ಶಾಲಾ ವಿದ್ಯಾರ್ಥಿಗಳಿಂದ ಅರಿವು, ಅಕ್ಷರ, ಆರೋಗ್ಯ ಕಲ್ನಾಡಿಗೆ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ನಡೆಯುವುದು. ಬೆಳಿಗ್ಗೆ 8:30ಕ್ಕೆ ಷಟಸ್ಥಲ ಧ್ವಜಾರೋಹಣ ಜರುಗುವದು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಡಿವಿಸಿದ್ಧರಾಮ ಮಹಾಸ್ವಾಮಿಗಳು, ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಧ್ವಜಾರೋಹಣವನ್ನು ತಹಶೀಲ್ದಾರ ಡಾ.ಮೋಹನ ಭಸ್ಮೆ ನೆರವೆರಿಸುವರು. 10:30ಕ್ಕೆ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಪದವಿ ಸೇರಿದಂತೆ ಇತರ ಕೋರ್ಸಗಳನ್ನು ಮಾಡಿದ ವಿದ್ಯಾರ್ಥಿಗಳಿಗೆ ಬೃಹತ್ ಉದ್ಯೋಗ ಮೇಳ ಮತ್ತು ಸ್ವಪ್ನಾ ಬುಕ್ಕ್ ಹೌಸ ಅವರಿಂದ ಪುಸ್ತಕ ಮೇಳವನ್ನು ಏರ್ಪಡಿಸಲಾಗಿದೆ. ಉದ್ಯೋಗ ಮೇಳದಲ್ಲಿ ಸುಮಾರು 30 ಕ್ಕೂ ಹೆಚ್ಚು ಉದ್ಯೋಗ ಸಮುಹಗಳು ಭಾಗವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಆನಲೈನ ಮೂಲಕ ತಮ್ಮ ಹೆಸರುಗಳನ್ನು HTTPS://tinyurl.com/yne4jm54 ಗೆ ಸಂಪರ್ಕಿಸಿ ನೋಂದಾಯಿಸಿಕೊಂಡು ಮೇಳದಲ್ಲಿ ಭಾಗವಹಿಸಿ ಬಹುದು.
ಸಾಯಂಕಾಲ 6 ಘಂಟೆಗೆ ಬಸವಧರ್ಮ ಸಮಾವೇಶ ಮತ್ತು ಕಾಯಕಶ್ರೀ ಪ್ರಶಸ್ತಿ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತರಳಬಾಳು ಜಗದ್ಗುರು ಶಾಖಾಮಠದ ಸಾಣೆಹಳ್ಳಿಯ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಘಟಪ್ರಭಾದ ಕೆಂಪಯ್ಯಸ್ವಾಮಿಮಠ ಗುಬ್ಬಲಗುಡ್ಡದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸುವರು. ಇದೇ ದಿನ ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ ಅವರಿಗೆ ಕಾಯಕಶ್ರೀ ಪ್ರಶಸ್ತಿ ನೀಡಿ ಗಣ್ಯರು ಗೌರವಿಸುವರು.
ಮಾಜಿ ಸಚಿವ ಶಾಸಕ ರಮೇಶ ಜಾರಕಿಹೊಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಡಾ.ಜೆ.ಎಸ್.ಪಾಟೀಲ, ಮಹಾಂತೇಶ ಕವಟಗಿಮಠ, ಶಂಕರಗೌಡ ಪಾಟೀಲ, ಎ.ಬಿ.ಪಾಟೀಲ ಸೇರಿದಂತೆ ಅನೇಕ ಗಣ್ಯರು ಬಾಗವಹಿಸುವರು.

ಶನಿವಾರ ದಿನಾಂಕ 2 ರಂದು ಸಾಯಂಕಾಲ 6 ಘಂಟೆಗೆ ಪತ್ರಕರ್ತರ ಸಮಾವೇಶ ಜರುಗಲಿದ್ದು, ಈ ಸಮಾವೇಶದ ದಿವ್ಯ ಸಾನ್ನಿಧ್ಯವನ್ನು ಅರಭಾವಿ ದುರದುಂಡೀಶ್ವರ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು ವಹಿಸುವರು. ಕಾರ್ಯಕ್ರಮವನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸುವರ್ಣ ನ್ಯೂಸ್ ಸಂಪಾದಕ ಅಜೀತ ಹಣಮಕ್ಕನವರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಡಾ.ಭೀಮಶಿ ಜಾರಕಿಹೊಳಿ, ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಜಿಲ್ಲಾಧ್ಯಕ್ಷ ದಿಲೀಪ್ ಕುರಂದವಾಡೆ, ವಾರ್ತಾ ಇಲಾಖೆಯ ಉಪನಿರ್ದೇಶಕ ಗುರುನಾಥ್ ಕಡಬೂರ, ಬಿ.ಯು.ಚನ್ನಬಸಪ್ಪ ಭಾಗವಹಿಸುವರು.
ರವಿವಾರ ದಿನಾಂಕ 3 ರಂದು ಸಾಯಂಕಾಲ 6 ಘಂಟೆಗೆ ಮಹಿಳಾ ಸಮಾವೇಶ ಜರುಗಲಿದ್ದು, ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಂಕಲಗಿಯ ಶ್ರೀ ಅರಮಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ನವದೆಹಲಿಯಲ್ಲಿ ತಾಥಾಸ್ತು ಐಎಎಸ್.ತರಬೇತಿ ಸಂಸ್ಥೆಯ ಡಾ.ತನು ಜೈನ್ ಕಾರ್ಯಕ್ರಮ ಉದ್ಘಾಟಿಸುವರು.
ಮುಖ್ಯ ಅಥಿತಿಗಳಾಗಿ ಅಕೈಯ್ ಪದ್ಮಶಾಲಿ, ವೀಣಾ ಕಾಶಪ್ಪನವರ, ಎಂ.ಪಿ.ಓಂಕಾರೇಶ್ವರಿ, ಅನಿತಾ ನಿಂಬರಗಿ, ಡಾ.ನಿರ್ಮಲಾ ಭಟ್ಟಲ್, ಮಂಗಲಾ ಸನದಿ, ರಾಜೇಶ್ವರಿ ಈರನಟ್ಟಿ, ಪ್ರಭಾವತಿ ಹಳ್ಳೂರ, ಡಾ.ರಾಧಾ ಮುನಿರಾಜು ಆಗಮಿಸಲಿದ್ದಾರೆ.
ದಿನಾಂಕ 4 ಸೋಮವಾದಮರದಂದು ಮುಂಜಾನೆ ಶ್ರೀಮಠದ ಕರ್ತೃ ಗದುಗೆಗೆ ಬಿಲವಾರ್ಚಣೆ ಮುತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಉತ್ಸವವು ಜರುಗುವದು.
ಸಾಯಂಕಾಲ 6 ಘಂಟೆಗೆ ನಡೆಯಲಿರುವ ಯುವ ಸಮಾವೇಶದ ದಿವ್ಯ ಸಾನಿಧ್ಯವನ್ನು ತುಮಕೂರಿನ ರಾಮಕೃಷ್ಣ. ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವಿರೇಶಾನಂದ ಸರಸ್ವತಿ ವಹಿಸುವರು, ಸಾನಿಧ್ಯವನ್ನು ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು ಮತ್ತು ಹುಲಿಕಟ್ಟಿಯ ಕುಮಾರ್ ಮಹಾಸ್ವಾಮಿಗಳು ವಹಿಸುವರು. ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಪ್ರಕಾಶ ಬೆಳವಡಿ, ಕಿರಣ ಸಾಧುನವರ, ಅರವಿಂದ್ ದಳವಾಯಿ, ಚಿದಾನಂದ ಸವದಿ, ಮಹಾಂತೇಶ ಕಡಾಡಿ, ಬಸವರಾಜ ಕೋಟಗಿ ಆಗಮಿಸುವರು.
ಪ್ರತಿದಿನ ಸಂಜೆ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶರಣರಿಗೆ ಗೌರವ ಸನ್ಮಾನ ನೆರವೇರುವುದು. ಸಾರ್ವಜನಿಕರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಉತ್ಸವ ಸಮಿತಿ ಅಧ್ಯಕ್ಷ ಸಂತೋಷ ಸೋನವಾಲಕರ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಶರಣ ಸಂಸ್ಕೃತಿ ಉತ್ಸವದ ಕಾರ್ಯದರ್ಶಿ ಮಂಜುನಾಥ್ ಸಣ್ಣಕ್ಕಿ, ರಾಜು ಬೈರುಗೋಳ , ಡಾ.ಸಿ.ಕೆ.ನಾವಲಗಿ , ಆರ್.ಎಲ್.ಮಿರ್ಜಿ ಉಪಸ್ಥಿತರಿದ್ದರು.

Related posts: