ಯಮಕನಮರಡಿ:ಸತೀಶ ಪ್ರತಿಭಾ ಪುರಸ್ಕಾರ : ವಿವಿಧ ಸ್ವರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಸತೀಶ ಪ್ರತಿಭಾ ಪುರಸ್ಕಾರ : ವಿವಿಧ ಸ್ವರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಯಮಕನಮರಡಿ ನ 27 : ರವಿವಾರದಂದು ಗ್ರಾಮದ ಎನ್.ಎಸ್.ಎಫ್ ಶಾಲಾ ಆವರಣದಲ್ಲಿ ನಡೆದ 10ನೇ ಸತೀಶ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 2ನೇ ದಿನ ಕಾಲೇಜು ವಿಭಾಗದ ಜಾನಪದ ಗಾಯನ, ಪ್ರೌಢಶಾಲೆ ವಿಭಾಗದ ಗಾಯನ , ಪ್ರಾಥಮಿಕ ಶಾಲಾ ವಿಭಾಗದ ಜಾನಪದ ನೃತ್ಯ, ಪ್ರೌಢಶಾಲೆ ವಿಭಾಗದ ಸಮೂಹ ನೃತ್ಯ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯ ಸ್ವರ್ಧೆ ಏರ್ಪಡಿಸಲಾಗಿತ್ತು , ಎಲ್ಲಾ ವಿಭಾಗದಲ್ಲಿ ಭಾಗವಹಿಸಿ ಬಹುಮಾನ ವಿಜೇತರಿಗೆ ಸಚಿವ ಸತೀಶ ಜಾರಕಿಹೊಳಿ, ಯುವ ನಾಯಕ ರಾಹುಲ್ ಜಾರಕಿಹೊಳಿ ಸೇರಿದಂತೆ ಅನೇಕ ಗಣ್ಯರು ಬಹುಮಾನಗಳನ್ನು ವಿತರಿಸ ಶುಭ ಹಾರೈಸಿದರು.
ಕಾಲೇಜು ವಿಭಾಗ ಜಾನಪದ ಗಾಯನ : ಕುಮಾರಿ ಅಂಕಿತಾ ಕುಗಟೋಳಿ ಎಸ್.ಎಸ್ ಎನ್ ಕಲಾ ವಾಣಿಜ್ಯ ಮಹಾವಿದ್ಯಾಲಯ ಹುಕ್ಕೇರಿ, ಪ್ರಥಮ ಸ್ಥಾನ ನಗದು 15 ಸಾವಿರ, ಕುಮಾರ ಪ್ರಸನ್ ಹಣಗಡಕರ ಎಸ್ ಜೆ ಪಿ ಎಸ್ ಪದವಿಪೂರ್ವ ಕಾಲೇಜು ನಿಡಶೋಸಿ, ದ್ವಿತೀಯ ಸ್ಥಾನ ನಗದು 10 ಸಾವಿರ ಹಾಗೂ ಕುಮಾರಿ ಪ್ರೇಮಾ ವಾಗನ್ನವರ ಸರಕಾರಿ ಪ್ರಥಮ ದರ್ಜೆ ಕಾಲೇಜು ಪಾಶ್ಚಾಪುರ, ನಗದು 7 ಸಾವಿರ ಹಾಗೂ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು.
ಪ್ರೌಢಶಾಲಾ ವಿಭಾಗ ಗಾಯನ ಸ್ವರ್ಧೆ : ಕುಮಾರಿ ಭೂಮಿಕಾ ಬಂಡಿವಡ್ಡರ ಮುದಿ ಬಾಳಯ್ಯಾ ಸ್ವಾಮಿ ಪ್ರೌಢಶಾಲೆ ಘೋಡಗೇರಿ ಪ್ರಥಮ ಸ್ಥಾನ ನಗದು 15 ಸಾವಿರ , ಕುಮಾರ್ ಪ್ರಮೋದ್ ಹಾರುಗೇರಿ ಎಸ್ ಎಸ್.ಪಾಟೀಲ ಮಾಧ್ಯಮ ಪ್ರೌಢಶಾಲೆ ಸಂಕೇಶ್ವರ ದ್ವಿತೀಯ ಸ್ಥಾನ ನಗದು 10 ಸಾವಿರ ಹಾಗೂ ಕುಮಾರ್ ಸಂಗಮ ಹಿತ್ತಲಮನಿ ವ್ಹಿ.ಎಮ್ ಕತ್ತಿ ಪ್ರೌಢಶಾಲೆ ಬಾಗೇವಾಡಿ ತೃತೀಯ ಸ್ಥಾನ ಹಾಗೂ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು
ಪ್ರಾಥಮಿಕ ವಿಭಾಗದ ಜಾನಪದ ನೃತ್ಯ : ಶ್ರೀದೇವಿ ಜ್ಯೋತಿಬಾ ಕಮತೆ ಹಾಗೂ ಸಂಗಡಿಗರು ಗೋಟೂರ ಪ್ರಮಥ ಸ್ಥಾನ ನಗದು 50 ಸಾವಿರ, ಕೀರ್ತಿ ಚೆನ್ನವರ ಹಾಗೂ ಸಂಗಡಿಗರು ದ್ವಿತೀಯ ಸ್ಥಾನ ನಗದು 40 ಸಾವಿರ, ಸೃಷ್ಟಿ ಶಿರಗಾಂವಿ ತೃತೀಯ ಸ್ಥಾನ ನಗದು 30 ಸಾವಿರ ಹಾಗೂ ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು.
ಪ್ರೌಢಶಾಲೆ ವಿಭಾಗ ಸಮೂಹ ನೃತ್ಯ : ಸ್ಪೂರ್ತಿ ಪತ್ತಾರ ಹಾಗೂ ಸಂಗಡಿಗರು ಶಿರಢಾಣ ಪ್ರಥಮ ಸ್ಥಾನ ನಗದು 5೦ ಸಾವಿರ , ಬಸವರಾಜ ಕರಿಗಾಥ ಹಾಗೂ ಸಂಗಡಿಗರು ದ್ವಿತೀಯ ಸ್ಥಾನ ನಗದು 40 ಸಾವಿರ , ಅಕ್ಷತಾ ಕರನಿಂಗ ಹಾಗೂ ಸಂಗಡಿಗರು ತೃತೀಯ ಸ್ಥಾನ ನಗದು 30 ಸಾವಿರ ಹಾಗೂ ಆಕರ್ಷಕ ಟ್ರೋಪಿ
ಕಾಲೇಜು ವಿಭಾಗದ ಸಮೂಹ ನೃತ್ಯ : ಅಶ್ವಿನಿ ಗೌಂಡ ಮತ್ತು ಸಂಗಡಿಗರು ಸಂಕೇಶ್ವರ ಪ್ರಥಮ ಸ್ಥಾನ 50 ಸಾವಿರ, ಶ್ರೀನಿಧಿ ಮಡಿವಾಳರ ಮತ್ತು ಸಂಗಡಿಗರು ದ್ವಿತೀಯ ಸ್ಥಾನ ನಗದು 40 ಸಾವಿರ , ಸಾಕ್ಷಿ ಮಲಗರೆ ಮತ್ತು ಸಂಗಡಿಗರು ತೃತೀಯ ಸ್ಥಾನ ನಗದು 30 ಸಾವಿರ ಹಾಗೂ ಆಕರ್ಷಕ ಟ್ರೋಪಿ ನೀಡಿ ಎಲ್ಲಾ ಸ್ವರ್ಧಾಳುಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಯಮಕನಮರಡಿ ಮತಕ್ಷೇತ್ರದ ಮುಖಂಡರು, ರಾಜಕೀಯ ಧುರೀಣರು ಉಪಸ್ಥಿತರಿದ್ದರು