RNI NO. KARKAN/2006/27779|Thursday, October 16, 2025
You are here: Home » breaking news » ಯಮಕನಮರಡಿ : ಮಕ್ಕಳ ಪ್ರತಿಭೆಗಳನ್ನು ಅರಳಿಸಲು ಸತೀಶ್ ಪ್ರತಿಭಾ ಪುರಸ್ಕಾರ ಬಹುದೊಡ್ಡ ವೇದಿಕೆಯಾಗಿದೆ : ಸಮೃದ್ಧಿ ಪವಾರ

ಯಮಕನಮರಡಿ : ಮಕ್ಕಳ ಪ್ರತಿಭೆಗಳನ್ನು ಅರಳಿಸಲು ಸತೀಶ್ ಪ್ರತಿಭಾ ಪುರಸ್ಕಾರ ಬಹುದೊಡ್ಡ ವೇದಿಕೆಯಾಗಿದೆ : ಸಮೃದ್ಧಿ ಪವಾರ 

ಮಕ್ಕಳ ಪ್ರತಿಭೆಗಳನ್ನು ಅರಳಿಸಲು ಸತೀಶ್ ಪ್ರತಿಭಾ ಪುರಸ್ಕಾರ ಬಹುದೊಡ್ಡ ವೇದಿಕೆಯಾಗಿದೆ : ಸಮೃದ್ಧಿ ಪವಾರ

 

ಯಮಕನಮರಡಿ ನ 25: ಮಕ್ಕಳ ಪ್ರತಿಭೆಗಳನ್ನು ಅರಳಿಸಲು ಸತೀಶ್ ಪ್ರತಿಭಾ ಪುರಸ್ಕಾರ ಬಹುದೊಡ್ಡ ವೇದಿಕೆಯಾಗಿದೆ ಎಂದು ಎನ್.ಎಸ್.ಎಫ್ ನ ಹತ್ತನೆ ತರಗತಿ ವಿದ್ಯಾರ್ಥಿನಿ ಕುಮಾರಿ ಸಮೃದ್ಧಿ ಪವಾರ ಹೇಳಿದರು.
ಶನಿವಾರದಂದು ಗ್ರಾಮದ ನಾಯಕ ಸ್ಟುಡೆಂಟ್ ಫೆಡರೇಷನ್ ಶಾಲಾ ಆವರಣದಲ್ಲಿ ನಡೆದ 10ನೇ ಸತೀಶ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವಳು ಮಾತನಾಡಿದರು.
ಸತೀಶ ಜಾರಕಿಹೊಳಿ ಅವರ ಪ್ರಯತ್ನದಿಂದ ಎಷ್ಟೋ ಜನ ಪ್ರತಿಭೆ ಗಳನ್ನು ರೂಪಿಸಲು ಸಾಧ್ಯ ವಾಗಿದೆ. ಮಕ್ಕಳಿಗೆ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿ ಮಾಡಿ ಎಂದ ಮಹಾನ ನಾಯಕ ಸಚಿವ ಸತೀಶ ಜಾರಕಿಹೊಳಿ.ನೋಡಿ ಕಲಿಯಲು, ಮೈಗೂಡಿಸಿಕೊಳ್ಳಲು ಈ ವೇದಿಕೆ ಸಹಕಾರಿಯಾಗಿದೆ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಸತೀಶ್ ಪ್ರತಿಭಾ ಪುರಸ್ಕಾರ ದಶಮಾನೋತ್ಸವ ಕಾರ್ಯಕ್ರಮ ಇಡೀ ರಾಜ್ಯಕ್ಕೆಶ ಮಾದರಿಯಾಗಿದೆ.ಭಕ್ತಿಯ ವಾತಾವರಣ ಜಾನಪದ ಸೋಡಗಿನಲ್ಲಿದೆ. ಇಂದಿನ ಯುಗದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವುದು ವಿರಳ ಆದರೆ ಸತೀಶ ಜಾರಕಿಹೊಳಿ ಅವರು ಇಂತಹ ಕಾರ್ಯಕ್ರಮ ಮಾಡುತ್ತಿರುವುದು ನಮ್ಮ ಪುನ್ಯ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಲು ಈ ವೇದಿಕೆ ರಹದಾರಿಯಾಗಿದೆ. ಇದು ರಾಜ್ಯ , ರಾಷ್ಟ್ರ ಅಷ್ಟೇ ಅಲ್ಲಾ ಇಡೀ ಜಗತ್ತಿನಲ್ಲಿ ಪಾರಸಾರವಾಗುತ್ತಿರುವುದು ಸಹ ಈ ಕಾರ್ಯಕ್ರಮದ ಹೆಮ್ಮೆ ಎಂದು ಹೇಳಿದರು.
ಉಳ್ಳಾಗಡ್ಡಿ – ಖಾನಾಪುರ ಬ್ರಹ್ನಮಠದ ಶ್ರೀ ಷಟಸ್ಥಳ ಮಹಾಸ್ವಾಮಿಗಳು, ಸುಕ್ಷೇತ್ರ ಹುಣಸಿಕೊಳ್ಳಮಠದ ಶ್ರೀ ಗುರುರಾಚೋಟಿ ಮಹಾಸ್ವಾಮಿಗಳು, ಸುಕ್ಷೇತ್ರ ಕಾರಿಮಠದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ವಿಭಾಗದ ಭಾಷಣ ಸ್ವರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಭಾರತಿ ಹೀರೆಹೊಳಿ ಗೆ ನಗದು 10 ಸಾವಿರ , ದ್ವಿತೀಯ ಸ್ಥಾನ ಪಡೆದ ಸನಂದಾ ಸುತಾರ
ಗೆ ನಗದು 7 ಸಾವಿರ, ತೃತೀಯ ಸ್ಥಾನ ಪಡೆದ ಶ್ರೇಯಾ ಗಾಟಿಕೆ ಮತ್ತು ವಿದ್ಯಾಶ್ರೀ ಮಾಳಗಿ ಗೆ ಜಂಟಿಯಾಗಿ ನಗದು 5 ಸಾವಿರ ಹಾಗೂ ಟ್ರೋಪಿ ವಿತರಿಸಲಾಯಿತು.
ಪ್ರೌಢಶಾಲೆ ವಿಭಾಗದ ಸ್ವರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಸಂದ್ಯಾ ಪಾಟೀಲ ಗೆ ನಗದು 15 ಸಾವಿರ, ದ್ವಿತೀಯ ಸ್ಥಾನ ಪಡೆದ ಲಕ್ಷ್ಮೀ ವಾಳಕೆ ಗೆ ನಗದು 10 ಸಾವಿರ , ತೃತೀಯ ಸ್ಥಾನ ಪಡೆದ ಸಪ್ನಾ ಚೌಗಲಾ ಗೆ ನಗದು 7 ಸಾವಿರ ಹಾಗೂ
ಕಾಲೇಜು ವಿಭಾಗ ಭಾಷಣ ಸ್ವರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಅನುಷಾ ರೊಟ್ಟಯ್ಯನವರ ಗೆ ನಗದು 15 ಸಾವಿರ , ದ್ವಿತೀಯ ಸ್ಥಾನ ಪಡೆದ ಸಮೃದ್ಧಿ ಪಾಟೀಲ ಗೆ ನಗದು 10 ಸಾವಿರ, ತೃತೀಯ ಸ್ಥಾನ ಪಡೆದ ಶ್ರೀನಿವಾಸ ಗುಡಚಿ ಗೆ ನಗದು 7 ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿಇಒ ಪ್ರಭಾವತಿ ಪಾಟೀಲ, ಹತ್ತರಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಮೀರ ಬೆಪಾರಿ, ಯಮಕನಮರಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಸ್ಮಾ ಫನಿಬಂದ್ , ಯುವ ಮುಖಂಡ ಕಿರಣ ರಜಪೂತ, ರಿಯಾಜ ಚೌಗಲಾ, ಈರಣ್ಣ ಬಿಸಿರೊಟ್ಟಿ, ಮಹಾದೇವ ಪಟೊಳಿ, ರವೀಂದ್ರ ಜಿನರಾಳೆ, ರಾಮಕೃಷ್ಣ ಪಾನಬಂಡೆ ಪಿ.ಎಲ್. ಹೊಂಬಳ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಎ.ಜಿ . ಕೋಳಿ ನಿರೂಪಿಸಿ, ವಂದಿಸಿದರು.

Related posts: