RNI NO. KARKAN/2006/27779|Saturday, June 15, 2024
You are here: Home » breaking news » ಗೋಕಾಕ:ಯುವಕನ ಬರ್ಬರ ಹತ್ಯೆ : ಭಾರಿ ಪೊಲೀಸ್ ಬಂದೋಬಸ್ತ್ ನಲ್ಲಿ ಮೃತನ ಅಂತ್ಯಕ್ರಿಯೆ : ಏಳು ಜನರ ಬಂಧನ

ಗೋಕಾಕ:ಯುವಕನ ಬರ್ಬರ ಹತ್ಯೆ : ಭಾರಿ ಪೊಲೀಸ್ ಬಂದೋಬಸ್ತ್ ನಲ್ಲಿ ಮೃತನ ಅಂತ್ಯಕ್ರಿಯೆ : ಏಳು ಜನರ ಬಂಧನ 

ಯುವಕನ ಬರ್ಬರ ಹತ್ಯೆ : ಭಾರಿ ಪೊಲೀಸ್ ಬಂದೋಬಸ್ತ್ ನಲ್ಲಿ ಮೃತನ ಅಂತ್ಯಕ್ರಿಯೆ : ಏಳು ಜನರ ಬಂಧನ

ಗೋಕಾಕ ನ 13 : ಹಳೇ ವೈಷಮ್ಯದಿಂದ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ನಗರದಲ್ಲಿ ರವಿವಾರ ರಾತ್ರಿ ನಡೆದಿದ್ದು , ಮೃತನ ಅಂತ್ಯಕ್ರಿಯೆ ಸಂದರ್ಭದಲ್ಲಿ ಪೊಲೀಸರು ಭಾರಿ ಬಂದೋಬಸ್ತ್ ನಲ್ಲಿ ಸೋಮವಾರದಂದು ಮಧ್ಯಾಹ್ನ ನಡೆಯಿತು.
ಹತ್ಯೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 7 ಜನರನ್ನು ಬಂಧಿಸುವಲ್ಲಿ ಪೊಲೀಸರು ಸಫಲವಾಗಿದ್ದು, ಒಬ್ಬ ಆರೋಪಿ ಬೆಳಗಾವಿಯ ಖಾಸಗಿ ಆಸ್ಪತ್ರೆಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನು 2 ಜನರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಪ್ರಕರಣದ ಹಿನ್ನಲೆ : ಹತ್ಯೆಗೀಡಾದ ಯುವಕನನ್ನು ಶಾನೂರು ಪೂಜಾರಿ (27) ಎಂದು ಗುರುತಿಸಲಾಗಿದೆ. ಹತ್ಯೆಗೀಡಾದ ಯುವಕ ನಗರದ ಪೆಟ್ರೊಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕೊಲೆ ವಿಚಾರ ತಿಳಿಯುತ್ತಿದ್ದಂತೆ ಮೃತ ಯುವಕನ ಪರವಾಗಿ ಮತ್ತೊಂದು ಗುಂಪು ಆದಿಜಾಂಬವ ನಗರದಲ್ಲಿರುವ ಆರೋಪಿಯ ಮನೆ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಉದ್ವಿಘ್ನ ಯುವಕರ ಗುಂಪು ಆರೋಪಿಯ ಮನೆ ಮೇಲೆ ಕ್ಲಲು ತೂರಾಟ ನಡೆಸಿದೆ. ಅಲ್ಲದೇ ಯುವಕರು ಬೈಕ್ ಹಾಗೂ ಕಾರುಗಳನ್ನು ಜಖಂಗೊಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಕೆಎಸ್‍ಆರ್‍ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಈ ಸಂಬಂಧ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.

Related posts: