RNI NO. KARKAN/2006/27779|Tuesday, December 30, 2025
You are here: Home » breaking news » ಗೋಕಾಕ:ಶಿವರಾಜ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಭಾರತ ಆಹಾರ ನಿಗಮದ ವತಿಯಿಂದ ಬಲವರ್ಧಿತ ಅಕ್ಕಿ ಬಗ್ಗೆ ಜಾಗೃತಿ

ಗೋಕಾಕ:ಶಿವರಾಜ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಭಾರತ ಆಹಾರ ನಿಗಮದ ವತಿಯಿಂದ ಬಲವರ್ಧಿತ ಅಕ್ಕಿ ಬಗ್ಗೆ ಜಾಗೃತಿ 

ಶಿವರಾಜ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಭಾರತ ಆಹಾರ ನಿಗಮದ ವತಿಯಿಂದ ಬಲವರ್ಧಿತ ಅಕ್ಕಿ ಬಗ್ಗೆ ಜಾಗೃತಿ

ಗೋಕಾಕ ಸೆ 27 : ತಾಲೂಕಿನ ಶಿವರಾಜ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಭಾರತ ಆಹಾರ ನಿಗಮದ ವತಿಯಿಂದ ಬಲವರ್ಧಿತ ಅಕ್ಕಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಬುಧವಾರದಂದು ಬೆಳಗಾವಿಯ ಆಹಾರ ಭಾರತ ಆಹಾರ ನಿಗಮದ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪಡಿತರ ಮತ್ತು ಇತರೆ ಯೋಜನೆಗಳ ಅಕ್ಕಿಯನ್ನು ಫಲಾನುಭವಿಗಳಿಗೆ ಸರಬರಾಜು ಮಾಡುತ್ತಿದ್ದು ಇತ್ತಿಚೀನ ದಿನಗಳಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ನೀಡುತ್ತಿದ್ದಾರೆಂದು ಊಹಾಪೋಹಾಗಳು ಹಬ್ಬಿವೆ. ಅದರಂತೆ ಇದು ಪ್ಲಾಸ್ಟಿಕ ಅಕ್ಕಿ ಅಲ್ಲ, ಪೌಷ್ಟಿಕಾಂಶಯುಕ್ತ ಅಕ್ಕಿಯಾಗಿರುತ್ತದೆ. ಫಲಾನುಭವಿಗಳಿಗೆ ಯಾವುದೇ ರೀತಿಯ ವಿಟಾಮಿನ್ ಕೊರತೆಯಾಗದಂತೆ ಅಕ್ಕಿಯನ್ನು ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಅದರಂತೆ ಸಂಸ್ಕರಿಸಿದ ಅಕ್ಕಿಯಲ್ಲಿ ಕಬ್ಬಿನಾಂಶ , ಪೋಅಕ್‌ಯಾಸಿಡ್ ಮತ್ತು ವಿಟಾಮಿನ್ ಬಿ-12 ಇರುವುದರಿಂದ ಇದು ರೋಗ ನಿರೋಧಕವಾಗಿರುತ್ತದೆ. ಮತ್ತು ಇದರಲ್ಲಿ ಮಕ್ಕಳಗಾಗಲಿ ಅಥವಾ ವಯಸ್ಕರರಿಗಾಗಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಎಂದು ಪ್ರೌಢ ಶಾಲೆ ವಿದ್ಯಾರ್ಥಿಗಳಗೆ ಭಾರತ ಆಹಾರ ನಿಗಮದ ಬೆಳಗಾವಿಯ ವ್ಯವಸ್ಥಾಪಕರು ತಿಳಿಸಿದರು.

Related posts: