ಗೋಕಾಕ:ಕೌಜಲಗಿಯ ಕಳ್ಳಿಗುದ್ದಿ ಕ್ರಾಸ್-ಕೆವ್ಹಿಜೆ ಬ್ಯಾಂಕ್‍ವರೆಗಿನ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಕೌಜಲಗಿಯ ಕಳ್ಳಿಗುದ್ದಿ ಕ್ರಾಸ್-ಕೆವ್ಹಿಜೆ ಬ್ಯಾಂಕ್‍ವರೆಗಿನ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ ಸೆ 4 : ರಸ್ತೆಯ ಅಕ್ಕ-ಪಕ್ಕದ ಸಾರ್ವಜನಿಕರ ಆಶಯದಂತೆ ಕೌಜಲಗಿ-ಕಳ್ಳಿಗುದ್ದಿ ಕ್ರಾಸದಿಂದ ಕೆವ್ಹಿಜಿ ಬ್ಯಾಂಕ್‍ವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಶೀಘ್ರದಲ್ಲಿಯೇ ಈ ರಸ್ತೆ ಕಾಮಗಾರಿಯು ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೋಮವಾರದಂದು ಗೋಕಾಕ ತಾಲೂಕಿನ ಕೌಜಲಗಿಯಲ್ಲಿ 1.80 ಕೋಟಿ ರೂ. ವೆಚ್ಚದ ಬಾದಾಮಿ-ಗೊಡಚಿ-ಗೋಕಾಕ ಫಾಲ್ಸ್ ರಾ.ಹೆ-134 ರ ಸರಪಳಿ 87.065 ರಿಂದ 87.59 ಕಿ.ಮೀ ವರೆಗಿನ ಕೌಜಲಗಿ ಗ್ರಾಮ ವ್ಯಾಪ್ತಿಯ ಕಳ್ಳಿಗುದ್ದಿ ಕ್ರಾಸದಿಂದ ಕೆವ್ಹಿಜಿ ಬ್ಯಾಂಕ್‍ವರೆಗಿನ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ರಸ್ತೆ ಕಾಮಗಾರಿಯನ್ನು ಗ್ರಾಮಸ್ಥರ ಒತ್ತಾಯದಂತೆ ತುರ್ತಾಗಿ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ರಸ್ತೆಯು ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಗ್ರಾಮದ ಮರಾಠಾ ಸಮಾಜದವರ ಸ್ಮಶಾನ ಜಾಗೆಯ ಕುರಿತಂತೆ ಶೀಘ್ರದಲ್ಲಿ ಸಮಾಜದ ಸಭೆಯನ್ನು ನಡೆಸಿ ಸಮಾಜ ಬಾಂಧವರಿಗೆ ಸ್ಮಶಾನ ಜಾಗೆಯನ್ನು ಗುರುತಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಗ್ರಾಮಕ್ಕೆ ಅಗತ್ಯವಿರುವ ರಾಷ್ಟ್ರೀಕೃತ ಬ್ಯಾಂಕ್ ಆರಂಭಕ್ಕೆ ಯತ್ನಿಸಲಾಗುವುದು. ಸಾರ್ವಜನಿಕರು ಮತ್ತು ವ್ಯಾಪಾರಿಗಳ ಒತ್ತಾಯದ ಹಿನ್ನೆಲೆಯಲ್ಲಿ ಕೌಜಲಗಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯನ್ನು ತೆರೆಯಲು ಲೀಡ್ ಬ್ಯಾಂಕ್ ಮೂಲಕ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಇದರ ಜೊತೆಗೆ ಕಳೆದ 40 ವರ್ಷಗಳಿಂದ ಹೋರಾಟದ ಹಾದಿಯಲ್ಲಿರುವ ಕೌಜಲಗಿ ತಾಲೂಕು ರಚನೆಗೂ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರವನ್ನು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ. ಈ ಹಂತದಲ್ಲಿ ಹೊಸ ತಾಲೂಕುಗಳ ಪುನರ್ ರಚನೆ ಸಂದರ್ಭದಲ್ಲಿ ಕೌಜಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪರವಾಗಿ ನಿಲ್ಲುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಭಾಶುಗರ ನಿರ್ದೇಶಕ ಎಂ.ಆರ್. ಭೋವಿ, ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ಗ್ರಾಪಂ ಅಧ್ಯಕ್ಷ ಶಿವಾನಂದ ಭಜಂತ್ರಿ, ರವಿ ಪರುಶೆಟ್ಟಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಶಿವನಮಾರಿ, ಮುಖಂಡರಾದ ಬಿ.ಎ. ಲೋಕನ್ನವರ, ಶಿವಾನಂದ ಲೋಕನ್ನವರ, ಪರಮೇಶ್ವರ ಹೊಸಮನಿ, ಗಂಗಾಧರ ಲೋಕನ್ನವರ, ಮಹೇಶ ಪಟ್ಟಣಶೆಟ್ಟಿ, ಶ್ರೀಕಾಂತಯ್ಯ ವಿರಕ್ತಮಠ, ಸುಭಾಸ ಕೌಜಲಗಿ, ಅಶೋಕ ಉದ್ದಪ್ಪನವರ, ಶಿವರಾಯಿ ಹಳ್ಳೂರ, ರಾಯಪ್ಪ ಬಳೋಲದಾರ, ಮಕ್ತುಮಸಾಬ ಖಾಜಿ, ಹೊಳೆಪ್ಪ ಲೋಕನ್ನವರ, ನೀಲಪ್ಪ ಕೇವಟಿ, ಎಸ್.ಬಿ. ಹಳ್ಳೂರ, ಶಂಕರ ಜೋತಿನವರ, ಸುರೇಶ ಶೆಟ್ಟಿ, ಅಡಿವೆಪ್ಪ ಅಳಗೋಡಿ, ಶ್ರೀಶೈಲ ಗಾಣಿಗೇರ, ಮಂಜುನಾಥ ಸಣ್ಣಕ್ಕಿ, ಹಾಸೀಂಸಾಬ ನಗಾರ್ಚಿ, ಡಿ.ಜೆ. ಮುಲ್ತಾನಿ, ಲಕ್ಷ್ಮಣ ಚನ್ನಾಳ, ಲಕ್ಷ್ಮಣ ಸಂಕ್ರಿ, ಭರಮಪ್ಪ ಪಾಶ್ಚಾಪೂರ, ಲೋಕನಗೌಡ ಪಾಟೀಲ, ಭೀಮಶಿ ಅಳಗೋಡಿ, ಲಕ್ಷ್ಮಣ ಗಡಾದ, ಡಿ.ಎಸ್. ನದಾಫ, ಗ್ರಾಪಂ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
.