ಗೋಕಾಕ:ನವೆಂಬರನಲ್ಲಿ ಪ್ರತಿಭಾ ಪುರಸ್ಕಾರ, ಜನೇವರಿಯಲ್ಲಿ ಸತೀಶ ಶುಗರ್ಸ ಆವಾರ್ಡ್ಸ ಸಾಂಸ್ಕೃತಿಕ ಕಾರ್ಯಕ್ರಮ : ಸಚಿವ ಸತೀಶ

ನವೆಂಬರನಲ್ಲಿ ಪ್ರತಿಭಾ ಪುರಸ್ಕಾರ, ಜನೇವರಿಯಲ್ಲಿ ಸತೀಶ ಶುಗರ್ಸ ಆವಾರ್ಡ್ಸ ಸಾಂಸ್ಕೃತಿಕ ಕಾರ್ಯಕ್ರಮ : ಸಚಿವ ಸತೀಶ
ಗೋಕಾಕ ಅ 28 : ಸತೀಶ ಶುಗರ್ಸ ಲಿಮಿಟೆಡ್ ನ ನೇತೃತ್ವದಲ್ಲಿ ಪ್ರತಿ ವರ್ಷ ನಡೆಸಲಾಗುತ್ತಿರುವ ಪ್ರತಿಷ್ಠಿತ ಸತೀಶ ಶುಗರ್ಸ ಆವಾರ್ಡ್ಸ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇದೇ ವರ್ಷದಿಂದ ಮತ್ತೆ ಪ್ರಾರಂಭಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸೋಮವಾರದಂದು ನಗರದ ತಮ್ಮ ಗೃಹ ಕಛೇರಿಯಲ್ಲಿ ತಮ್ಮನ್ನು ಬೇಟಿಯಾಗಿ ಮನವಿ ಸಲ್ಲಿಸಿದ ಕೋರಿಯೊಗ್ರಾರ್ಫರಗಳ ಮನವಿಗೆ ಸ್ವಂದಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕೊವಿಡ ಕಾರಣದಿಂದ ಸ್ಥಗಿತಗೊಳಿಸಲಾಗಿದ್ದ ಸತೀಶ ಶುಗರ್ಸ ಆವಾರ್ಡ್ಸ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮತ್ತೆ ಪ್ರಾರಂಭಿಸಬೇಕು ಎಂದು ಒತ್ತಡ ಇದ್ದು, ಇದೇ ವರ್ಷ ನವೆಂಬರ್ ನಲ್ಲಿ ಯಮಕನಮರಡಿ ಗ್ರಾಮದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ಪ್ರತಿ ವರ್ಷದ ಜನೇವರಿಯಲ್ಲಿ ಗೋಕಾಕದಲ್ಲಿ ಸತೀಶ ಶುಗರ್ಸ ಆವಾರ್ಡ್ಸ ಕಾರ್ಯಕ್ರಮವನ್ನು ಮತ್ತೆ ಪ್ರಾರಂಭಿಸಲಾಗುವುದು ವಿದ್ಯಾರ್ಥಿಗಳು, ಶಾಲೆಯ ಮುಖ್ಯಸ್ಥರು ಇದರ ಬಗ್ಗೆ ಈಗಿನಿಂದಲೇ ತಯಾರಿಯನ್ನು ನಡೆಸಿಕೊಂಡು ಕಾರ್ಯಕ್ರಮಕ್ಕೆ ಸಜ್ಜಾಗಬೇಕು. ಬಾಡಿ ಬಿಲ್ಡಿಂಗ್ ಹಾಗೂ ಕ್ರೀಡಾಕೂಟದ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.