RNI NO. KARKAN/2006/27779|Saturday, August 2, 2025
You are here: Home » breaking news » ನೇಗಿನಹಾಳ :ಕಾರ್ಯಕರ್ತರ , ಮುಖಂಡರ ನಿರ್ಲಕ್ಷ್ಯದಿಂದ ಸರಕಾರದ ಯೋಜನೆಗಳ ಜನರಿಗೆ ತಲಿಪಿಸುವಲ್ಲಿ ವಿಫಲವಾಗುತ್ತಿವೆ : ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ

ನೇಗಿನಹಾಳ :ಕಾರ್ಯಕರ್ತರ , ಮುಖಂಡರ ನಿರ್ಲಕ್ಷ್ಯದಿಂದ ಸರಕಾರದ ಯೋಜನೆಗಳ ಜನರಿಗೆ ತಲಿಪಿಸುವಲ್ಲಿ ವಿಫಲವಾಗುತ್ತಿವೆ : ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ 

ಕಾರ್ಯಕರ್ತರ , ಮುಖಂಡರ ನಿರ್ಲಕ್ಷ್ಯದಿಂದ ಸರಕಾರದ ಯೋಜನೆಗಳ ಜನರಿಗೆ ತಲಿಪಿಸುವಲ್ಲಿ ವಿಫಲವಾಗುತ್ತಿವೆ : ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ

ನೇಗಿನಹಾಳ ಅ 16: ರಾಜ್ಯ ಸರಕಾರ ದೇಶದಲ್ಲಿಯೇ ಅತ್ಯಂತ ಪ್ರಾಮಾಣಿಕವಾಗಿ ಮತ್ತು ಭ್ರಷ್ಠಾಚಾರ ಮುಕ್ತವಾಗಿ ಆಡಳಿತ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಕಾಂಗ್ರೇಸ ಕಾರ್ಯಕರ್ತರ, ಮುಖಂಡರು ಪಕ್ಷ ಸಂಘಟನೆಯ ನಿರ್ಲಕ್ಷ್ಯದಿಂದ ಇಂದು ಯೋಜನೆಗಳ ಮಾಹಿತಿ ಜನರಿಗೆ ತಲಿಪಿಸುವಲ್ಲಿ ವಿಫಲವಾಗುತ್ತಿದೆ ಇದನ್ನು ಮನೆ-ಮನೆಗೆ ಮುಟ್ಟಿಸುವ ಕಾರ್ಯ ನಡೆಯಬೇಕಿದೆ ಎಂದು ಸಂಪಗಾವಿ ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.

ನೇಗಿನಹಾಳ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮೀಟಿಯಿಂದ ಆಯೋಜಿಸಿದ್ದ ರಾಜ್ಯ ಸರಕಾರದ ಜನಪರ ಯೋಜನೆಗಳ ಜನರಿಗೆ ಮುಟ್ಟಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷ ಸಾಮಾಜಿಕ ನ್ಯಾಯ ನೀಡುವಲ್ಲಿ ಬಡ ಜನರ ಉದ್ಧಾರಕ್ಕಾಗಿ ನೂರಾರು ಯೋಜನೆಗಳನ್ನು ಕೈಗೊಂಡಿದ್ದು ಜನಸಾಮಾನ್ಯರ ಮನೆ-ಮನೆಗೆ ಮುಟ್ಟಿಸುವ ಕಾರ್ಯ ನಡೆಸಲಾಗಿದೆ ಎಂದರು.

ಕಿತ್ತೂರ ಮತಕ್ಷೇತ್ರದ ಶಾಸಕ ಡಿ.ಬಿ ಇನಾಮದಾರರ ಪುತ್ರ ಯುವ ಮುಖಂಡ ವಿಕ್ರಮ ಇನಾಮದಾರ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ನೂರಾರು ಕೋಟಿ ರೂ ಗಳಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನಸಾಮಾನ್ಯರ ಹಿತಕಾಪಾಡುವಲ್ಲಿ ಯಶಸ್ವಿಯಾಗಿದೆ ಎಂದರು. ತಾ.ಪಂ ಸದಸ್ಯ ಮಡಿವಾಳಪ್ಪ ಕುಲ್ಲೋಳ್ಳಿ, ಗ್ರಾ.ಪಂ ಅದ್ಯಕ್ಷೆ ಸುವರ್ಣಾ ಕಾರಿಮನಿ, ಸಮಾಜ ಸೇವಕಿ ಶಿಲ್ಪಾ ಪಾಟೀಲ, ಮಲ್ಲಮ್ಮ ಉಳವಿ, ಕಲ್ಲವ್ವ ಹತ್ತಿ, ರಾಜೀವ ಗಾಣಿಗಿ, ಈರಣ್ಣಾ ಉಳವಿ, ಮಲ್ಲೇಶ ಭೂತಾಳಿ, ಉದಯ ಖನಗಾವಿ, ಕಿತ್ತೂರ ಬ್ಲಾಕ್ ಕಾಂಗ್ರೇಸ್ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಮುಂತಾದವರು ಭಾಗವಹಿಸಿದ್ದರು.

Related posts: