RNI NO. KARKAN/2006/27779|Tuesday, December 2, 2025
You are here: Home » breaking news » ಗೋಕಾಕ:ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ಶಿಕ್ಷಣವನ್ನು ನೀಡಿ : ಬಿ.ಕೆ ಕುಲಕರ್ಣಿ

ಗೋಕಾಕ:ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ಶಿಕ್ಷಣವನ್ನು ನೀಡಿ : ಬಿ.ಕೆ ಕುಲಕರ್ಣಿ 

ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ಶಿಕ್ಷಣವನ್ನು ನೀಡಿ : ಬಿ.ಕೆ ಕುಲಕರ್ಣಿ

ಗೋಕಾಕ ಜು 27 : ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ಶಿಕ್ಷಣವನ್ನು ನೀಡಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಲಕ್ಷ್ಮಿ ಎಜುಕೇಶನ್ ಟ್ರಸ್ಟ್ ನ ಆಡಳಿತಾಧಿಕಾರಿ ಬಿ.ಕೆ ಕುಲಕರ್ಣಿ ಹೇಳಿದರು.
ಗುರುವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಾಲೇಜ ಆಫ್ ಎಜುಕೇಶನ್( ಬಿ.ಇಡಿ ) 2022-23 ಸಾಲಿನ ನಾಲ್ಕನೇ ಸಮೀಸ್ಟರನ ಪ್ರ ಶಿಕ್ಷಣಾರ್ಥಿಗಳ ನಿಕಟ ಸೇವಾಪೂರ್ವ ತರಬೇತಿ ನಿಯೋಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ದೇಶದ ಭವಿಷ್ಯ ನಿರ್ಮಾಣವಾಗುವುದು ಶಾಲೆಗಳಲ್ಲಿ ದೇಶದ ಅಭಿವೃದ್ಧಿ ಶಿಕ್ಷಣದ ಮೇಲೆ ನಿಂತಿದೆ. ಇಂತಹ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದ್ದು ಅದನ್ನು ಜವಾಬ್ದಾರಿಯಿಂದ ನಿಭಾಯಿಸಿ ಆದರ್ಶ ಗುರುಗಳಾಗಿರಿ ಶಿಕ್ಷಕರಿಗೆ ವೃತ್ತಿ ಗೌರವ, ವಿಷಯ ಜ್ಞಾನ ಪ್ರಭುದ್ದತೆ ಹಾಗೆ ಮಕ್ಕಳನ್ನು ಪ್ರೀತಿಯಿಂದ ಕಾಣುವ ಗುಣಗಳಿದ್ದರೆ ಯಶಸ್ವಿ ಶಿಕ್ಷಕರಾಗಲು ಸಾಧ್ಯ. ನಿರಂತರ ಕಲಿಕೆಯೊಂದಿಗೆ ಜ್ಞಾನಮಟ್ಟವನ್ನು ಹೆಚ್ಚಿಸಿಕೊಂಡು ಪರಿಣಾಮಕಾರಿಯಾಗಿ ಭೋಧಿಸಿ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಪ್ರಾಚಾರ್ಯ ಡಾ.ಎ.ಬಿ.ಪಾಟೀಲ, ಪ್ರಶಿಕ್ಷಣಾರ್ಥಿಗಳ ಪ್ರತಿನಿಧಿಗಳ ಪಂಪಾ ಜೋಡನ್ನವರ, ಲಕ್ಷ್ಮೀ ಜಕ್ಕನ್ನವರ ಇದ್ದರು. ತೃಪ್ತಿ ಕೊಂಕಣಿ ಸ್ವಾಗತಿಸಿದರು, ಅಶ್ವಿನಿ ಹುಣ್ಣಶಾಳ ನಿರೂಪಿಸಿದರು, ವೈ.ಬಿ.ಬಾರಿಮರದ ವಂದಿಸಿದರು

Related posts: