RNI NO. KARKAN/2006/27779|Sunday, September 14, 2025
You are here: Home » breaking news » ಗೋಕಾಕ:ಗೋಕಾಕ | ಅನೈತಿಕ ಸಂಬಂಧ ಶಂಕೆ: ಜೋಡಿ ಕೊಲೆ ಆರೋಪಿ ಬಂಧನ

ಗೋಕಾಕ:ಗೋಕಾಕ | ಅನೈತಿಕ ಸಂಬಂಧ ಶಂಕೆ: ಜೋಡಿ ಕೊಲೆ ಆರೋಪಿ ಬಂಧನ 

ಗೋಕಾಕ | ಅನೈತಿಕ ಸಂಬಂಧ ಶಂಕೆ: ಜೋಡಿ ಕೊಲೆ ಆರೋಪಿ ಬಂಧನ

ಗೋಕಾಕ ಜು 4 : ತಾಲ್ಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಮಂಗಳವಾರ ಮಹಿಳೆ ಹಾಗೂ ಪುರುಷನನ್ನು, ಮಾರಕಾಸ್ತ್ರದಿಂದ ಹೊಡೆದು ಏಕಕಾಲಕ್ಕೆ ಕೊಲೆ ಮಾಡಲಾಗಿದೆ.
ಯಲ್ಲಪ್ಪ ಲಕ್ಕಪ್ಪ ಮಾಳಗಿ (45) ಕೊಲೆ ಆರೋಪಿ. ಇವರ ಪತ್ನಿ ರೇಣುಕಾ ಮಾಳಗಿ (40) ಹಾಗೂ ಮಲ್ಲಿಕಾರ್ಜುನ ಜಗದಾರ (35) ಕೊಲೆಯಾದವರು.
ಅನೈತಿಕ ಸಂಬಂಧ ಶಂಕಿಸಿ ಕೊಲೆ ಮಾಡಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ನಿಖರ ಮಾಹಿತಿ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಳಗಿ ಹಾಗೂ ಜಗದಾರ ಕುಟುಂಬದವರು ಅಕ್ಕತಂಗೇರಹಾಳ ಗ್ರಾಮದಲ್ಲಿ ಒಂದೇ ಓಣಿಯಲ್ಲಿ ವಾಸವಾಗಿದ್ದಾರೆ. ಈ ಹಿಂದೆ ಎರಡೂ ಕುಟುಂಬಗಳ ಮಧ್ಯೆ ಯಾವಾಗಲೂ ತಂಟೆಗಳು ನಡೆದಿಲ್ಲ.
ಮಂಗಳವಾರ ಮಧ್ಯಾಹ್ನ ಮಾರಕಾಸ್ತ್ರದಿಂದ ತನ್ನ ಪತ್ನಿಯನ್ನು ಹೊಡೆದು ಕೊಲೆ ಮಾಡಿದ ಯಲ್ಲಪ್ಪ, ಹತ್ತಿರದಲ್ಲೇ ಇದ್ದ ಮಲ್ಲಿಕಾರ್ಜುನ ಅವರ ಮನೆಗೆ ಹೋದ. ಮನೆಯ ಹೊರಗೆ ಮಲ್ಲಿಕಾರ್ಜುನ ಸ್ನಾನ ಮಾಡುತ್ತಿದ್ದ. ಏಕಾಏಕಿ ದಾಳಿ ಮಾಡಿದ ಯಲ್ಲಪ್ಪ ಕುತ್ತಿಗೆ ಭಾಗಕ್ಕೆ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಕಲಗಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Related posts: