RNI NO. KARKAN/2006/27779|Wednesday, October 15, 2025
You are here: Home » breaking news » ಬೆಳಗಾವಿ:ಪತ್ರಿಕಾ ಮಾಧ್ಯಮ ಭಯದಿಂದ ನಾವಿಂದು ಸಮಾಜದಲ್ಲಿ ಶಿಸ್ತಿನಿಂದ ಬದುಕುತ್ತಿದ್ದೇವೆ : ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಬೆಳಗಾವಿ:ಪತ್ರಿಕಾ ಮಾಧ್ಯಮ ಭಯದಿಂದ ನಾವಿಂದು ಸಮಾಜದಲ್ಲಿ ಶಿಸ್ತಿನಿಂದ ಬದುಕುತ್ತಿದ್ದೇವೆ : ಸಚಿವೆ ಲಕ್ಷ್ಮಿ ಹೆಬ್ಬಾಳಕರ 

ಪತ್ರಿಕಾ ಮಾಧ್ಯಮ ಭಯದಿಂದ ನಾವಿಂದು ಸಮಾಜದಲ್ಲಿ ಶಿಸ್ತಿನಿಂದ ಬದುಕುತ್ತಿದ್ದೇವೆ : ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಬೆಳಗಾವಿ ಜು 2 : ಪತ್ರಿಕಾ ಮಾಧ್ಯಮ ಭಯದಿಂದ ನಾವಿಂದು ಸಮಾಜದಲ್ಲಿ ಶಿಸ್ತಿನಿಂದ ಬದುಕುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು
ರವಿವಾರದಂದು ನಗರದ ಜಿರ್ಗೆ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಬೆಳಗಾವಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಗುರುತಿಸಿ ಚೀಟಿ ವಿತರಿಸಿ ಅವರು ಮಾತನಾಡಿದರು.
ಪತ್ರಕರ್ತರು ಮುಂದಿನ ಪೀಳಿಗೆ ಒಳ್ಳೆಯದ್ದನ್ನು ನೀಡಬೇಕು. ಪತ್ರಿಕಾ ಧರ್ಮವು ಸಹ ಅದು ದೇವರ ಕೆಲಸ ಎಂದು ಭಾವಿಸಿ ತಮ್ಮ ಕಾರ್ಯಗಳನ್ನು ಮಾಡಿ ಸಮಾಜವನ್ನು ಸಮೃದ್ಧ ಮಾಡಬೇಕು. ಪತ್ರಿಕಾ ಭವನ ನಿರ್ಮಿಸಲು ಜಾಗೆಯನ್ನು ನೀಡಿ ಭವನ ನಿರ್ಮಿಸಲು ಸಹಕಾರ ಮಾಡುತ್ತೇನೆ. ಪತ್ರಕರ್ತರ ನಿವೇಶನವನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಮಾಜದಲ್ಲಿ ಚಾಟಿ ಬಿಸಿ ಸಮಾಜವು ಸುಧಾರಿಸುವವರಿಗೆ ನಾವು ಎಲ್ಲಾ ರೀತಿಯ ಸಹಾಯ ಮಾಡಬೇಕು‌ ಎಂದು ಹೇಳಿದರು‌
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ದಿಲೀಪ್ ಕುರಂವಾಡೆ ವಹಿಸಿದ್ದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹುಕ್ಕೇರಿಯ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆರ್ಶಿವಚನ ನೀಡಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳನ್ನು ಗೌರವಿಸಿ , ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ ಪಾಟೀಲ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವರಾಜ ಕದಂ, ಗುರುನಾಥ್ ಕಡಬೂರ, ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೇಜಿ ಸೇರಿದಂತೆ ಅನೇಕರು ಇದ್ದರು.

Related posts: