RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ಬಂದಿಲ್ಲವೆಂದು ಹೇಳುತ್ತಿರುವ ಎಚ್.ಡಿ ಕೆ ಕ್ರಮ ಖೇದಕರ : ಭೀಮಶಿ ಗದಾಡಿ

ಗೋಕಾಕ:ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ಬಂದಿಲ್ಲವೆಂದು ಹೇಳುತ್ತಿರುವ ಎಚ್.ಡಿ ಕೆ ಕ್ರಮ ಖೇದಕರ : ಭೀಮಶಿ ಗದಾಡಿ 

ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ಬಂದಿಲ್ಲವೆಂದು ಹೇಳುತ್ತಿರುವ ಎಚ್.ಡಿ ಕೆ ಕ್ರಮ ಖೇದಕರ : ಭೀಮಶಿ ಗದಾಡಿ

ಗೋಕಾಕ ಮೇ 25 : ಚುನಾವಣೆಗೆ ಮುನ್ನ ರೈತರ ಸಾಲಮನ್ನಾ ಮಾಡುವದಾಗಿ ಹೇಳಿದ ಈಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ನಂತರ ಉಲ್ಟಾ ಹೊಡೆಯುತ್ತಿರುವುದು ರೈತ ಸಮುದಾಯಕ್ಕೆ ನೋವನ್ನುಂಟು ಮಾಡಿದೆ ಎಂದು ರೈತ ಸಂಘದ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ ಆರೋಪಿಸಿದರು.
ಶುಕ್ರವಾರದಂದು ನಗರದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮುನ್ನ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ರೈತ ಸಮುದಾಯಕ್ಕೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಘೋಷಿಸಿದ ಎಚ್‍ಡಿಕೆ ಅವರು, ನಮ್ಮ ಜೆಡಿಎಸ್ ಪಕ್ಷಕ್ಕೆ ಪೂರ್ಣ ಪ್ರಮಾಣದ ಬಹುಮತ ಬಂದಿಲ್ಲವೆಂದು ಕಾರಣ ನೀಡುತ್ತಿರುವುದು ಖೇದಕರವಾದ ಸಂಗತಿಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ರಾಜಕೀಯ ಪಕ್ಷಗಳು ರೈತನ್ನು ಕೇವಲ ರಾಜಕೀಯವಾಗಿ ಉಪಯೋಗಿಸಿ ಕೇವಲ ರೈತರ ಮೂಗಿಗೆ ತುಪ್ಪವನ್ನು ಸವರುವ ಕಾರ್ಯವನ್ನು ಮಾಡುತ್ತಿವೆ. ಯಾವುದೇ ಸರ್ಕಾರಗಳು ರೈತರ ಸಂಕಷ್ಟಗಳ ಬಗ್ಗೆ ಕಿಂಚಿತ್ತು ಯೋಚನೆ ಮಾಡದೇ ಕೇವಲ ಮಾತಿನಲ್ಲಿ ಮಾತ್ರ ರೈತರ ಅಭಿವೃದ್ದಿಗಾಗಿ ಶ್ರಮಿಸುದಾಗಿ ಹೇಳುತ್ತಾ ಅಧಿಕಾರಕ್ಕೆ ಬಂದ ಮೇಲೆ ರೈತರ ಕಷ್ಟಗಳಿಗೆ ಸ್ಪಂದಿಸದೇ ಇರುವುದು ನೋವಿನ ಸಂಗತಿಯಾಗಿದ್ದು. ಜೆಡಿಎಸ್ ಹಾಗೂ ಕಾಂಗ್ರೇಸ್ ನೇತ್ರತ್ವದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡದಿದ್ದರೆ ಇನ್ನು ಮುಂದೆ ರೈತ ಸಂಘ ಹಾಗೂ ಹಸಿರು ಸೇನೆ ಸುಮ್ಮನೆ ಕೂರುವದಿಲ್ಲ ರಾಜ್ಯಾಧ್ಯಾಂತ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ. ಮುಂದಾಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ನೇರವಾಗಿ ಹೊಣೆಯಾಗಲಿದೆ ಎಂದು ಪ್ರತಿಕ್ರೀಯಿಸಿದರು.

Related posts: