RNI NO. KARKAN/2006/27779|Monday, February 16, 2026
You are here: Home » breaking news » ಗೋಕಾಕ:ಶಾಂತ ಚಿತ್ತರಾಗಿ ಬಸವಾದಿ ಶರಣರ ವಚನಗಳನ್ನು ಆಲಿಸಿ ಆಚರಣೆಗೆ ತರಬೇಕು : ಬಸವಾನಂದ ಶರಣರು

ಗೋಕಾಕ:ಶಾಂತ ಚಿತ್ತರಾಗಿ ಬಸವಾದಿ ಶರಣರ ವಚನಗಳನ್ನು ಆಲಿಸಿ ಆಚರಣೆಗೆ ತರಬೇಕು : ಬಸವಾನಂದ ಶರಣರು 

ಶಾಂತ ಚಿತ್ತರಾಗಿ ಬಸವಾದಿ ಶರಣರ ವಚನಗಳನ್ನು ಆಲಿಸಿ ಆಚರಣೆಗೆ  ತರಬೇಕು : ಬಸವಾನಂದ ಶರಣರು

ಗೋಕಾಕ ಮೇ 2 : ಶಾಂತ ಚಿತ್ತರಾಗಿ ಬಸವಾದಿ ಶರಣರ ವಚನಗಳನ್ನು ಆಲಿಸಿ ಆಚರಣೆಗೆ ತರುವುದರೊಂದಿಗೆ ಜೀವನವನ್ನು ಸಾರ್ಥಕ ಪಡೆಸುವಂತೆ ಪ್ರವಚನಕಾರ ಬಸವಾನಂದ ಶರಣರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನಗರದ ಬಸವ ಮಂದಿರದಲ್ಲಿ ಬಸವ ಜಯಂತಿ ನಿಮಿತ್ತ ಹಮ್ಮಿಕೊಂಡ ವಚನ ಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ಮನ ಶಾಂತಿ ಇದ್ದರೆ ಮನೆಯಲ್ಲಿ ಶಾಂತಿ ಇರುತ್ತದೆ. ಜೀವನದಲ್ಲಿ ಚಿಂತೆ ಇಲ್ಲದಂತಿರುವುದೆ ಜೀವನ ಭಕ್ತಿ ಶರಣರು ಮನವನ್ನು ಪರಮಾತ್ಮನಿಗೆ ಅರ್ಪಿಸಿ ಶಾಂತ ಚಿತ್ತರಾಗಿ ಬದುಕಿದರು ಶರಣ ಜೀವನ ನಮಗೆ ನಿಜವಾದ ಶಕ್ತಿ ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಕಸಾಪ ತಾಲೂಕು ಘಟಕದ ಅಧ್ಯಕ್ಷೆ ಶ್ರೀಮತಿ ಭಾರತಿ ಮದಬಾಂವಿ,  ಚಂದ್ರಶೇಖರ ಅಕ್ಕಿ, ಬಸವ ಸಂತ್ಸಂಗ ಸಮಿತಿ ಕಾರ್ಯಾಧ್ಯಕ್ಷ ಮಹಾಂತೇಶ ತಾವಂಂಶಿ, ಭಾವಯಾನ ಮಹಿಳಾ ವೇದಿಕೆ ಅಧ್ಯಕ್ಷೆ ಡಾ.ಮಹಾನಂದಾ ಪಾಟೀಲ, ಅಕ್ಕನಾಗಲಾಂಬಿಕಾ ಮಹಿಳಾ ಮಂಡಳ ಅಧ್ಯಕ್ಷೆ ಶಾಂತಾ ಹುರಕಡ್ಲಿ, ಸದಸ್ಯೆ ರಾಜೇಶ್ವರಿ ಕಲಬುರ್ಗಿ ಇದ್ದರು. ಬಸವರಾಜ ಮುರಗೋಡ , ಆರ್.ಎಲ್.ಮಿರ್ಜಿ ನಿರೂಪಿಸಿದರು. ಈಶ್ವರಚಂದ್ರ ಬೆಟಗೇರಿ ವಂದಿಸಿದರು.

Related posts: