RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಶರಣ ಸಂಸ್ಕಂತಿ ಉತ್ಸವ ಎಲ್ಲ ಸಮುದಾಯದ ಉತ್ಸವವಾಗಿದೆ : ಮುರುಘರಾಜೇಂದ್ರ ಮಹಾಸ್ವಾಮಿಜಿ

ಗೋಕಾಕ:ಶರಣ ಸಂಸ್ಕಂತಿ ಉತ್ಸವ ಎಲ್ಲ ಸಮುದಾಯದ ಉತ್ಸವವಾಗಿದೆ : ಮುರುಘರಾಜೇಂದ್ರ ಮಹಾಸ್ವಾಮಿಜಿ 

ಶರಣ ಸಂಸ್ಕಂತಿ ಉತ್ಸವ ಎಲ್ಲ ಸಮುದಾಯದ ಉತ್ಸವವಾಗಿದೆ : ಮುರುಘರಾಜೇಂದ್ರ ಮಹಾಸ್ವಾಮಿಜಿ

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 5 :
ಶರಣ ಸಂಸ್ಕøತಿ ಉತ್ಸವವು ಶ್ರೀಮಠಕ್ಕೆ ಸಿಮೀತವಾಗದೇ ಎಲ್ಲ ಸಮುದಾಯದ ಉತ್ಸವವಾಗಿದೆ ಎಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಅವರು ಸೋಮವಾರದಂದು ಸಂಜೆ ಜರುಗಿದ ಕಳೆದ ನಾಲ್ಕು ದಿನಗಳಿಂದ ಶರಣ ಸಂಸ್ಕøತಿ ಉತ್ಸವ ಹಾಗು ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯ ಸ್ಮರಣೆ ಹಾಗೂ ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಸರ್ವ ಧರ್ಮಿಯರ ಏಳ್ಗೆಗಾಗಿ ತಮ್ಮ ಬದುಕನ್ನು ಸಮರ್ಪಿಸಿದ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಜಿಯವರ ಸ್ಮರಣಾರ್ಥ ಕಳೆದ ಹದಿನೈದು ವರ್ಷಗಳಿಂದ ಈ ಉತ್ಸವವನ್ನು ಆಚರಿಸಲಾಗುತ್ತದೆ. ಉತ್ಸವದಲ್ಲಿ ರಾಷ್ಟ್ರದ ಗಣ್ಯಾತಿಗಣ್ಯರು ಪಾಲ್ಗೊಂಡು ರಾಷ್ಟ್ರ ಮಟ್ಟದಲ್ಲಿ ಹೆಸರಾಗಿದ್ದು ಇದ್ಕಕೆ ಸಹಕರಿಸಿದ ಎಲ್ಲ ಭಕ್ತ ವೃಂದಕ್ಕೆ ಧನ್ಯವಾದ ತಿಳಿಸಿ ಈ ಉತ್ಸವವನ್ನು ಗೋಕಾಕ ತಾಲೂಕಿನಗೆ ಸಮರ್ಪಣೆ ಮಾಡಲಾಗಿದೆ ಎಂದರಲ್ಲದೇ ಬಸವಾದಿ ಶಿವಶರಣರು ಕಾಯಕವೇ ಕೈಲಾಸ ಎಂದು ಹೇಳಿದ ತತ್ವದಡಿ ಕಾಯಕಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಈ ಬಾರಿ ಭಾರತರತ್ನ ವಿಜ್ಞಾನಿ ಸಿಎನ್ ಆರ್ ರಾವ್ ಅವರು ಪ್ರಶಸ್ತಿ ಸ್ವೀಕರಿಸಿ ಪ್ರಶಸ್ತಿಯ ಮಹತ್ವವನ್ನು ಹೆಚ್ಚಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ ಇದಕ್ಕೆ ಭಕ್ತರ ಸಹಾಯ ಸಹಕಾರ ಮುಖ್ಯವಾಗಿದೆ ಎಂದರು.
ಉದ್ಘಾಟನೆಯನ್ನು ನಗರಸಭೆ ಪೌರಾಯುಕ್ತ ಎಮ್.ಎಚ್.ಅತ್ತಾರ ನೆರವೇರಿಸಿದರು. ಕಾರ್ಯಕ್ರಮದ ಸಾನಿಧ್ಯವನ್ನು ಬಟಕುರ್ಕಿ ಚೌಕೇಶ್ವರ ವಿರಕ್ತಮಠದ ಶ್ರೀ ಬಸವಲಿಂಗ ಸ್ವಾಮಿಗಳು, ಸುಣಧೋಳಿ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಗಳು, ಭಾಗೋಜಿಕೊಪ್ಪದ ಶ್ರೀ ಶಿವಲಿಂಗ ಮುರುಘರಾಜೇಂದ್ರ ಸ್ವಾಮಿಗಳು, ಮುಪ್ಪಯ್ಯನಮಠದ ರಾಚೋಟೆಶ್ವರ ಸ್ವಾಮಿಗಳು, ಹೊಸಯರಗುದ್ರಿಯ ಶ್ರೀ ಸಿದ್ಧಪ್ರಭು ಶಿವಾಚಾರ್ಯರು, ಹೂಲಿಕಟ್ಟಿಯ ಶ್ರೀ ಕುಮಾರದೇವರು ವಹಿಸಿದ್ದರು. ಡಿವೈಎಸ್‍ಪಿ. ಪ್ರಭು ಡಿ.ಟಿ., ಲೆಕ್ಕಪರಿಶೋಧಕ ಶ್ರೀಕಾಂತ ಗಾಡವಿ, ಸಹಕಾರಿ ಪತ್ತಿನ ಸಂಘಗಳ ಮಹಾಮಂಡಳದ ಉಪಾಧ್ಯಕ್ಷ ಡಾ. ಸಂಜಯ ಹೊಸಮಠ, ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ, ವಕೀಲರ ಸಂಘದ ಅಧ್ಯಕ್ಷ ಉದಯಕುಮಾರ ಸಿಂಪಿ, ಅಂಕಲಗಿಯ ಶಂಕರ ಘೋಡಗೇರಿ, ಪತ್ರಕರ್ತ ಸಾಧಿಕ ಹಲ್ಯಾಳ, ನಾಗನೂರದ ಗಜಾನನ ಯರಗಣವಿ, ಪಾಂಡಪ್ಪ ಪಾಟೀಲ, ಅಜೀತ ಕಿತ್ತೂರ ಉತ್ಸವ ಸಮಿತಿ ಗೌರವಾಧ್ಯಕ್ಷ ರುದ್ರಗೌಡ ಪಾಟೀಲ, ಪ್ರವೀಣ ಚುನಮರಿ, ಬಸನಗೌಡ ಪಾಟೀಲ, ವಿವೇಕ ಜತ್ತಿ ಸೇರಿದಂತೆ ಅನೇಕರು ಇದ್ದರು.
ಬೆಳಿಗ್ಗೆ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಗದ್ದುಗೆಗೆ ಅಭಿಷೇಕ ಹಾಗೂ ಬಿಲ್ವಾರ್ಚನೆಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿ ವಚನ ತಾಡೋಲೆ ಪ್ರತಿಗಳು ಹಾಗೂ ವಿಶ್ವಗುರು ಬಸವಣ್ಣನವರ ಭಾವಚಿತ್ರದೊಂದಿಗೆ ಪಲ್ಲಕ್ಕಿ ಉತ್ಸವ, ಮೆರವಣಿಗೆಯು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ತಲುಪಿತು.
ಸಂಜೆ ನಾಟಕೋತ್ಸವ ಚಿತ್ರದುರ್ಗದ ಜಮುರಾ ಕಲಾ ತಂಡದಿಂದ ಶಿವಶರಣ ಊರಿಲಿಂಗ ಪೆದ್ದಿಗಳ ಜೀವನಾಧಾರಿತ ನಾಟಕ ಬೆಳಕಿನಡೆಗೆ ಪ್ರದರ್ಶನ ಜರುಗಿತು.
ಎಸ್.ಕೆ.ಮಠದ ಸ್ವಾಗತಿಸಿ, ನಿರೂಪಿಸಿದರು. ಅಡಿವೇಶ ಗವಿಮಠ ವಂದಿಸಿದರು.

Related posts: