ಬೆಳಗಾವಿ:ಡಿಕೆಶಿ ರಾಜಕೀಯ ಮಾಡಲು ನಾಲಾಯಕ : ಲಕ್ಷ್ಮೀಯಿಂದ ಕಾಂಗ್ರೆಸ್ ಪಕ್ಷ ಹಾಳಾಗುತ್ತಿದೆ : ಶಾಸಕ ರಮೇಶ ಆರೋಪ

ಡಿಕೆಶಿ ರಾಜಕೀಯ ಮಾಡಲು ನಾಲಾಯಕ : ಲಕ್ಷ್ಮೀಯಿಂದ ಕಾಂಗ್ರೆಸ್ ಪಕ್ಷ ಹಾಳಾಗುತ್ತಿದೆ : ಶಾಸಕ ರಮೇಶ ಆರೋಪ
ಬೆಳಗಾವಿ ಜ 30 : ಡಿ.ಕೆ ಶಿವಕುಮಾರ್ ರಾಜಕೀಯ ಮಾಡಲು ನಾಯಕನಾಗಿದ್ದಾನೆ ಎಂದು ಶಾಸಕ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಸೋಮವಾರದಂದು ನಗರದ ಖಾಸಗಿ ಹೊಟೇಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಡಿಕೆಶಿ ಮತ್ತು ನನ್ನ ಮಧ್ಯೆ ವೈಯಕ್ತಿಕವಾಗಿ ಯುದ್ಜ ನಡೆಯುತ್ತಿದ್ದೆ. ಒಂದುವರೆ ವರ್ಷದಿಂದ ಏನೋ ಪ್ರತಿಕ್ರಿಯೆ ನಿಡದೆ ಸುಮ್ಮನೆ ಕುಳಿತ್ತಿದೆ. ಆದರೆ ವಿರೋಧಿಗಳು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಹಾಗಾಗಿ ನಾನು ಬಹಿರಂಗವಾಗಿ ಮಾತನಾಡುತ್ತಿದ್ದೇನೆ. ರಾಜಕೀಯ ಜೀವನದಲ್ಲಿ ವೈಯಕ್ತಿಕವಾಗಿ ಟಿಕೆ ಮಾಡಬಾರದು ಆದರೆ ಶಿವಕುಮಾರ ವೈಯಕ್ತಿಕವಾಗಿ ಆರೋಪ ಮಾಡಿದರೆ ನಾನು ಸುಮ್ಮನೆ ಕೂಡಲು ಆಗೋದಿಲ್ಲ ಹಾಗಾಗಿ ಮೊದಲಬಾರಿಗೆ ವೈಯಕ್ತಿಕವಾಗಿ ಟಿಕೆ ಮಾಡುತ್ತಿದ್ದೇನೆ ಶಿವಕುಮಾರ್ ರಾಜಕೀಯವಾಗಿ ಮಾಡಲು ನಾಲಾಯಕನಾಗಿದ್ದಾನೆ.
ಸಿಡಿ ಪ್ರಕರಣ ಸಿಬಿಐ ಗೆ ನೀಡಲು ಒತ್ತಾಯ : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಸಾಕ್ಷ್ಯವಿದೆ ಅದನ್ನು ಸಿಬಿಐಗೆ ಒಪ್ಪಿಸುತ್ತೇನೆ. ಡಿಕೆಶಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾನೆ ಅದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಆಡಿಯೋ ಇದೆ ಆದಷ್ಟು ಶೀಘ್ರ ಅದನ್ನು ಬಿಡುಗಡೆ ಮಾಡುತ್ತೇನೆ. ಡಿಕೆಶಿ ಮತ್ತು ಟೀಂ ನನ್ನ ವಿರುದ್ಧ ತೇಜೋವಧೆ ಮಾಡಿದ್ದಾರೆ. ನನ್ನ ದರ್ಮ ಪತ್ನಿ. ಮಕ್ಕಳು ಸಹೋದರರು ಹಾಗೂ ಕ್ಷೇತ್ರದ ಜನತೆ ನನ್ನ ಜೊತೆ ಇದ್ದುದರಿಂದ ನಾನು ಇದರಿಂದ ಪಾರಾಗಿ ಬಂದಿದ್ದೇನೆ. ಸಿಡಿ ಪ್ರಕರಣದಲ್ಲಿ ಇದ್ದ ಮಹಿಳೆ ಶ್ರವಣ ಮತ್ತು ನರೇಶ , ಕೃಷ್ಣಮೂರ್ತಿ ಸೇರಿದಂತೆ ಮಂಡ್ಯ ಮೂಲದ ಇಬ್ಬರನ್ನು ಕೂಡಲೇ ಬಂಧಿಸಿ ತನಿಖೆ ಮಾಡಬೇಕು ಎಂದು ಸಿಬಿಐಗೆ ಒತ್ತಾಯ ಮಾಡುತ್ತೇನೆ.
ಡಿಕೆಶಿ ಮತ್ತು ನನ್ನ ವಿರುದ್ಧ ಹುಳಿ ಹಿಂಡಿದ್ದು ಹೆಬ್ಬಾಳಕರ :
1985 ರಿಂದ ನಾನು ಮತ್ತು ಡಿಕೆಶಿ ಕೂಡಿ ರಾಜಕೀಯ ಪ್ರಾರಂಭ ಮಾಡಿದ್ದೆವೆ ಮೊದಲ ಚುನಾವಣೆಯಲ್ಲಿ ನಾನು ಮತ್ತು ಡಿಕೆಶಿ ಸೋತ್ತಿದ್ದೇವೆ. ನಂತರ ಗೆದ್ದಿದ್ದೇವೆ ಆಗ ಡಿಕೆಶಿ ಜಂಗಲ್ಲಿಯಾಗಾ ಕಾಣುತ್ತಿದ್ದೆ ಇಂದು ಸಾವಿರ ಕೋಟಿಯ ಒಡೆಯನಾಗಿದ್ದಾನೆ. ನಾನು ಹಾಗೆಯೇ ಇದ್ದೇನೆ. ಸಮ್ಮಿಶ್ರ ಸರಕಾರದಲ್ಲಿ ಇಬ್ಬರೂ ಮಂತ್ರಿ ಇದ್ದವೆ. ಕಳೆದ 15 ವರ್ಷಗಳಿಂದ ಅಣ್ಣತಮ್ಮದರಂತೆ ಇದ್ದೇವು. ಅಂದು
ಶ್ರೀಮತಿ ಉಷಾ ಡಿಕೆಶಿ ಅವರು ನನ್ನಗೆ ಮನವಿ ಮಾಡಿದ್ದರು. 2018 ರಲ್ಲಿ ಗ್ರಾಮೀಣ ಶಾಸಕಿಗೆ ಟಿಕೆಟ್ ಕೊಡುವುದಿಲ್ಲ ಎಂದು ಡಿಕೆಶಿ ಹೇಳಿದ್ದರು. ಆದರೆ ನಾನೆ ಗಲಾಟೆ ಮಾಡಿ ಟಿಕೆಟ್ ಕೊಡಿಸಿದ್ದೇನೆ.ಆದರೆ ತದನಂತರ ಡಿಕೆಶಿ ಮತ್ತು ನನ್ನ ಮಧ್ಯೆ ಹುಳಿಹಿಂಡಿ ನಮ್ಮಬ್ಫಿರನ್ನು ಶತ್ರುಗಳನ್ನಾಗಿ ಮಾಡಿದ್ದಾರೆ.
ಒಪ್ಪಂದಕ್ಕೆ ಒಪ್ಪಲಿಲ್ಲ : ಸಿಡಿ ಪ್ರಕರಣದಲ್ಲಿ ಡಿಕೆಶಿ ಅವನ ಪಾತ್ರವಿದೆ ಎಂದು ನಾನು ಆರೋಪಿಸಿದಾಗ ನನ್ನೊಂಡನೆ ಒಪ್ಪಂದ ಮಾಡಿಕೊಳ್ಳಲು ಬಂದಾಗ ನಾನು ಒಪ್ಪಲಿಲ್ಲ. ನಂತರ ನನ್ನ ಮಗನಿಗೆ ಅಮರನಾಥ ಜಾರಕಿಹೊಳಿ ಅವನ ಬಳಿ ಬಂದು ನಾನು ಮಾಡಿಲ್ಲಾ ಬೆಳಗಾವಿ ಜಿಲ್ಲೆಯವರೆ ಮಾಡಿದ್ದಾರೆ.ಎಂದು ಹೇಳಿದ್ದ ಅವನಿಗೆ ಪೋನ ಮಾಡಿದಾಗ ಅವನು ಪೋನ ಎತ್ತಲಿಲ್ಲ .
ಲಕ್ಷ್ಮೀ ಹೆಬ್ಬಾಳ್ಕರಯಿಂದ ಕಾಂಗ್ರೆಸ್ ಪಕ್ಷ ಹಾಳಾಗುತ್ತದೆ :
ಗ್ರಾಮೀಣ ಶಾಸಕಿ ಯಿಂದ ನಾನು ಮತ್ತು ಡಿಕೆಶಿ ಹಾಗೂ ರಾಜ್ಯ ಹಾಳಾಗಿದೆ. ಮುಂದೆಯೂ ಕಾಂಗ್ರೆಸ್ ಪಕ್ಷ ಆಕೆಯಿಂದಲೆ ಹಾಳಾಗುತ್ತಿದೆ.
ನಾನು ಸಹಕಾರ ಸಚಿವನಿದ್ದಾಗ ಬೆಂಗಳೂರಿನಲ್ಲಿ ಶಾಂತಿ ಸೋಸೈಟಿ ಫೈಲ್ ಕಿಲ್ಲೇರ ಮಾಡದಿದ್ದಾಗ ಅಲ್ಲಿಂದ ನಮ್ಮ ಇಬ್ಬರ ನಡುವೆ ಸಂಘರ್ಷ ಶುರುವಾಗಿದೆ. ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಸೇರಿ 100 ಜನರು ಇದ್ದಾರೆ
ನನ್ನ ಬಳಿ 20 ಸಿಡಿ ಇವೆ . ಶಿವಕುಮಾರ್
ರಮೇಶ್ ಜಾರಕಿಹೊಳಿ ಅವರಿಗೆ ಮಣ್ಣು ಕೊಟ್ಟಿದ್ದೇನೆ ಎಂದು ಹೇಳಿರುವ ಆಡಿಯೋ ನನ್ನ ಬಳಿ ಇದೆ ನಾನು ಗಾಳಿಯಲ್ಲಿ ಗುಂಡು ಹಾರಿಸುವ ಮನುಷ್ಯನಲ್ಲ ಮುಂದೆ ಅದನ್ನು ಮಾಧ್ಯಮದವರಿಗೆ ನೀಡುತ್ತೇನೆ ಎಂದು ಜಾರಕಿಹೊಳಿ ಹೇಳಿದರು.