ಮೂಡಲಗಿ:ದಿ. ವಾಜಪೇಯಿಯವರಿಗೆ ಅಭಿಮಾನಿ ಬಳಗದಿಂದ ಶ್ರದ್ದಾಂಜಲಿ
ದಿ. ವಾಜಪೇಯಿಯವರಿಗೆ ಅಭಿಮಾನಿ ಬಳಗದಿಂದ ಶ್ರದ್ದಾಂಜಲಿ
ಮೂಡಲಗಿ ಅ 17 : ಗುರುವಾರ ನಿಧನ ಹೊಂದಿದ ಕವಿಮನಸ್ಸಿನ ಸಜ್ಜನ ರಾಜಕಾರಿಣಿ, ಅಜಾತ ಶತ್ರು ಭಾರತ ರತ್ನ ಮಾಜಿ ಪ್ರಧಾನ ಮಂತ್ರಿ ಡಾ. ಅಟಲ್ ಬಿಹಾರಿ ವಾಜಪೇಯಿಯವರಿಗೆ ಪಟ್ಟಣದ ಸಂಗಪ್ಪಣ್ಣ ಅಂಗಡಿ ವೃತ್ತದಲ್ಲಿ ಶುಕ್ರವಾರ ವಾಜಪೇಯಿ ಅಭಿಮಾನಿ ಬಳಗದಿಂದ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನಾಚರಣೆ ಸಲ್ಲಿಸುವುದರ ಮೂಲಕ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಮಾದರ, ಹನುಮಂತ ಸತರಡ್ಡಿ, ಚೇತನ ನಿಶಾನಿಮಠ, ಸುಧೀರ ನಾಯರ್, ಸಂಪತ್ತ ಕರಬನ್ನವರ, ರಾಜು ಮಹೇಂದ್ರಕರ, ನವೀನ ನಿಶಾನಿಮಠ, ಸಚೀನ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.