ಮೂಡಲಗಿ:ಮೂಡಲಗಿಯಿಂದ ಹಳ್ಳೂರ ಮಾರ್ಗವಾಗಿ ಮಹಾಲಿಂಗಪೂರಕ್ಕೆ ಬಸ್ ಸೌಕರ್ಯ ಹೆಚ್ಚಿಸಲು ಒತ್ತಾಯ
ಮೂಡಲಗಿಯಿಂದ ಹಳ್ಳೂರ ಮಾರ್ಗವಾಗಿ ಮಹಾಲಿಂಗಪೂರಕ್ಕೆ ಬಸ್ ಸೌಕರ್ಯ ಹೆಚ್ಚಿಸಲು ಒತ್ತಾಯ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜು 23 :
ಮೂಡಲಗಿಯಿಂದ ಹಳ್ಳೂರ ಮಾರ್ಗವಾಗಿ ಮಹಾಲಿಂಗಪೂರಕ್ಕೆ ಹೋಗುವುದಕ್ಕೆ ಬಸ್ ಸೌಕರ್ಯ ಹೆಚ್ಚಿಸಲು ಒತ್ತಾಯಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಯಿಸಿದರು .
ಹಳ್ಳೂರ, ಶಿವಾಪೂರ(ಹ), ಖಾನಟ್ಟಿ, ಮುನ್ಯಾಳ, ಕಪ್ಪಲಗುದ್ದಿ, ಸೈದಾಪೂರ ಗ್ರಾಮದ ವಿದ್ಯಾರ್ಥಿಗಳು ಪ್ರತಿನಿತ್ಯ ವಿದ್ಯಾಭ್ಯಾಸಕ್ಕಾಗಿ ಮೂಡಲಗಿ ಹಾಗೂ ಮಹಾಲಿಂಗಪೂರಕ್ಕೆ ಹೋಗುತ್ತಾರೆ ಇದಲ್ಲದೆ ಗ್ರಾಮದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಮೂಡಲಗಿಗೆ ಹಾಗೂ ಮಹಾಲಿಂಗಪೂರವನ್ನು ಅವಲಂಭಿಸುತ್ತಿರುವದರಿಂದ ಮೂಡಲಗಿಯಿಂದ ಹಳ್ಳೂರ ಮಾರ್ಗವಾಗಿ ಮಹಾಲಿಂಗಪೂರಕ್ಕೆ ಹೋಗುವುದಕ್ಕೆ ಬಸ್ ಸೌಕರ್ಯ ಹೆಚ್ಚಿಸಲು ಅಧಿಕಾರಿಗಳಿಗೆ ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಗೋಕಾಕ ಡಿ.ಎಮ್.ಇ ಭಾರತಿ ಲಮಾಣಿ ಅವರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗೆ ಶಾಶ್ವತ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದು ಭರವಸೆ ನೀಡಿದರು.