ಗೋಕಾಕ:ದಿ. 22 ರಂದು ಸಾಯಂಕಾಲ 6 ಘಂಟೆಗೆ ವಾಲ್ಮೀಕಿ ಕ್ರೀಡಾಂಗಣದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ನಾಟಕ ಪ್ರದರ್ಶನ

ದಿ. 22 ರಂದು ಸಾಯಂಕಾಲ 6 ಘಂಟೆಗೆ ವಾಲ್ಮೀಕಿ ಕ್ರೀಡಾಂಗಣದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ನಾಟಕ ಪ್ರದರ್ಶನ
ಗೋಕಾಕ ಜ 18 : ಧಾರವಾಡದ ರಂಗಾಯಣ ಮತ್ತು ಇಲ್ಲಿನ ಸಿದ್ದೇಶ್ವರ ಸಾಮರಸ್ಯ ವೇದಿಕೆಯ ಸಂಯುಕ್ತಾಶ್ರಯದಲ್ಲಿ ರವಿವಾರ ದಿನಾಂಕ 22 ರಂದು ಸಾಯಂಕಾಲ 6 ಘಂಟೆಗೆ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ಹೇಳಿದರು
ಬುಧವಾರದಂದು ನಗರದ ಕೆಎಲ್ಇಯ ಸಿ.ಎಸ್.ಅಂಗಡಿ ಶಾಲಾ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕರ್ನಾಟಕದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೋರಾಟಗಾರ್ತಿ ಬೆಳ್ಳಿಚುಕ್ಕಿ ಎಂದೇ ಪ್ರಖ್ಯಾತಿ ಪಡೆದಿರುವ ವೀರರಾಣಿ ಕಿತ್ತೂರ ಚನ್ನಮ್ಮಳ ಚರಿತ್ರೆ ಸಾರುವ ರಂಗ ಪ್ರಯೋಗ ನಡೆಯುವುದು. ನಾಟಕದಲ್ಲಿ ಜೀವಂತ ಆನೆ, ಕುದುರೆಗಳು ರಂಗದ ಮೇಲೆ ಪ್ರವೇಶ ಮಾಡಲಿವೆ. ನಾಟಕದಲ್ಲಿ ಎರೆಡುನೂರ ಐವತ್ತಕ್ಕೂ ಹೆಚ್ಚು ಕಲಾವಿದರ ಭಾಗವಹಿಸಲಿದ್ದಾರೆ. ವೀರರಾಣಿ ಚನ್ನಮ್ಮಳ ಗತವೈಭವನ್ನು ಯುವ ಪೀಳಿಗೆಗೆ ತಿಳಿಸುವ ಪ್ರಯತ್ನ ಈ ನಾಟಕದಲ್ಲಿ ಮಾಡಲಾಗಿದೆ. ಇತಿಹಾಸವನ್ನು ಇದ್ದಹಾಗೆ ತೋರಿಸುವ ಕಾರ್ಯ ಈ ನಾಟಕ ತಂಡ ಮಾಡಲಿದೆ. ಚನ್ನಮ್ಮಳ ಇತಿಹಾಸವನ್ನು ತಿಳಿಯಲು ಹೆಳವರ ಹತ್ತಿರ ಹೋಗಿ ಚನ್ನಮ್ಮಳ ಮಾಹಿತಿ ಸಂಗ್ರಹಿಸಲಾಗಿದೆ. ಸಂಶೋಧಕರಿಂದ ಸಂಶೋಧನೆ ಮಾಡಿ ನಾಟಕದ ಮುಖಾಂತರ ಜನರಿಗೆ ಚನ್ನಮ್ಮಳ ನೈಜ ಇತಿಹಾಸ ತಿಳಿಸುವ ಮಹತ್ತರ ಕಾರ್ಯ ಈ ನಾಟಕದ ಮುಖಾಂತರ ಮಾಡಲಾಗುತ್ತಿದೆ. ಈ ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶನ ಮಾಡಲಾಗುತ್ತಿದೆ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಚನ್ನಮ್ಮಳ ನೈಜ ಇತಿಹಾಸ ತಿಳಿದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನವಳ್ಳ ಮಾತನಾಡಿ ಗೋಕಾಕ ನಾಡು ನಾಟಕಗಳನ್ನು ಕಲಾವಿದರನ್ನು ಪೋಶಿಸಿ ಬೆಳೆಸುವ ಕಾರ್ಯವಾಗಿದೆ. ಇತ್ತೀಚೆಗೆ ನಾಟಕಗಳ ಕಲೆ ಮಾಯವಾಗುತ್ತಿದೆ ಅದನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ರಾಣಿ ಚನ್ನಮ್ಮಳ ನೈಜ ಇತಿಹಾಸವನ್ನು ತಿಳಿಸುವ ಸಲುವಾಗಿ ಧಾರವಾಡದ ರಂಗಾಯಣ ತಂಡದವರಿಂದ ಈ ಭವ್ಯ ನಾಟಕವನ್ನು ಪ್ರದರ್ಶಿಸಲಾಗುವದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮಳ ನಾಟಕದ ಭಿತ್ತಿ ಪ್ರತಗಳನ್ನು ಸಂಸದ ಈರಣ್ಣ ಕಡಾಡಿ ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಅಶೋಕ್ ಪಟ್ಟಗುಂಡಿ, ಡಾ.ಮಹಾಂತೇಶ ಕಡಾಡಿ, ಚಂದ್ರಶೇಖರ್ ಕೊಣ್ಣೂರ, ಸೋಮಶೇಖರ್ ಮಗದುಮ್ಮ, ಡಾ.ಜಿ.ಆರ್.ಸೂರ್ಯವಂಶಿ, ಮಾಯಪ್ಪ ತಹಶೀಲ್ದಾರ, ಬಸವರಾಜ ಹೂಳ್ಳೇರ ಅಶೋಕ ತುಕ್ಕಾರ ಇದ್ದರು.
