RNI NO. KARKAN/2006/27779|Monday, November 3, 2025
You are here: Home » breaking news » ಗೋಕಾಕ:ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡಿ : ಮಹೇಶ ಜಾಧವ್

ಗೋಕಾಕ:ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡಿ : ಮಹೇಶ ಜಾಧವ್ 

ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡಿ : ಮಹೇಶ ಜಾಧವ್

ಗೋಕಾಕ ಜ 14 : ಪಾಲಕರು ಮಕ್ಕಳಿಗೆ ಆಸ್ತಿ ಮಾಡದೆ ಅವರಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡುವಂತೆ ಬೆಳಗಾವಿಯ ಮಹೇಶ ಫೌಂಡೇಶನ್ ನ ಮುಖ್ಯಸ್ಥ ಮಹೇಶ ಜಾಧವ್ ಹೇಳಿದರು.
ಶುಕ್ರವಾರದಂದು ನಗರದ ಮಯೂರ ಸ್ಕೂಲ್ ನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಾ ಉತ್ತಮ ಸಂಸ್ಕಾರದಿಂದ ನೆಮ್ಮದಿ ಜೀವನ ಸಾಧ್ಯ. ಸಮಾಜ ಸೇವೆಯಲ್ಲಿ ಸಿಗುವ ಸಂತೋಷ ಬೇರೆ ಕಾರ್ಯದಲ್ಲಿ ಸಿಗುವುದಿಲ್ಲ. ನಾವೆಲ್ಲಾ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿ ಉತ್ತಮ ಸಮಾಜ ನಿರ್ಮಿಸೋಣ ಎಂದರು .
ಸಮಾರಂಭದ  ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಸದಾನಂದ ಕಲಾಲ, ನಿರ್ದೇಶಕ ವಿನಾಯಕ ಚಿಪ್ಪಲಕಟ್ಟಿ, ಆಡಳಿತಾಧಿಕಾರಿ ಎಸ್.ಡಿ ಮುರಗೋಡ, ಪ್ರಾಚಾರ್ಯ ಸಿ.ಬಿ.ಪಾಗದ ಇದ್ದರು.

Related posts: