ಗೋಕಾಕ:ಅಂಕಲಗಿ ಗ್ರಾಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ

ಅಂಕಲಗಿ ಗ್ರಾಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 21 :
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಬೆಳಗಾವಿ, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎಪಿಡಿ) ಬೆಳಗಾವಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್(ರಿ) ಗೋಕಾಕ, ಪಟ್ಟಣ ಪಂಚಾಯತ ಅಂಕಲಗಿ, ಪೋಲಿಸ್ ಠಾಣೆ ಅಂಕಲಗಿ ಇವರುಗಳ ಸಹಯೋಗದಲ್ಲಿ ಗುರುವಾರದಂದು ತಾಲೂಕಿನ ಅಂಕಲಗಿ ಗ್ರಾಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಮಾನಸಿಕ ಆರೋಗ್ಯ ಅರಿವು ಜಾಥಾ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಡಾ. ಚಾಂದನಿ ದೇವಡಿ, ಆರ್. ಬಿ. ಬನಶಂಕರಿ , ರಮೇಶ ಗೊಂಗಡಿ, ಶ್ರೀಮತಿ. ಮಲ್ಲಮ್ಮಾ ನಾಯಿಕ, ಹರೀಶ ಮೇಲ್ವಿಚಾರಕರು,ರಾಜು , ಶ್ರೀಮತಿ. ನಾಗರತ್ನಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .