ಗೋಕಾಕ:ವಿವಿಧ ಗ್ರಾಮಗಳಿಗೆ ಮಂಜೂರಾದ 31ಕೋಟಿ ರೂಗಳ ಕಾಮಗಾರಿಗಳಿಗೆ ಕೆಎಂಎಫ್ ನಿರ್ದೇಶಕ ಅಮರನಾಥ ಚಾಲನೆ

ವಿವಿಧ ಗ್ರಾಮಗಳಿಗೆ ಮಂಜೂರಾದ 31ಕೋಟಿ ರೂಗಳ ಕಾಮಗಾರಿಗಳಿಗೆ ಕೆಎಂಎಫ್ ನಿರ್ದೇಶಕ ಅಮರನಾಥ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 22 :
ಕ್ಷೇತ್ರದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶಾಸಕರಾದ ರಮೇಶ ಜಾರಕಿಹೊಳಿ ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಕಾರ್ಯಪ್ರವೃತ್ತರಾಗುತ್ತಿದ್ದಾರೆ ಎಂದು ಕೆಎಮ್‍ಎಫ್ ನಿರ್ದೇಶಕ ಅಮನಾಥ ಜಾರಕಿಹೊಳಿ ಹೇಳಿದರು.
ಅವರು, ಗುರುವಾರದಂದು ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಗೋಕಾಕ ಮತಕ್ಷೇತ್ರದ ವಿವಿಧ ಗ್ರಾಮಗಳಿಗೆ ಮಂಜೂರಾದ 31ಕೋಟಿ ರೂಗಳ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಗೋಕಾಕ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಲು ಶಾಸಕರು ಶಿಕ್ಷಣ, ನೀರಾವರಿ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವಿಶೇಷ ಯೋಜನೆಗಳ ಅನುಷ್ಠಾನದ ಮೂಲಕ ಶ್ರಮಿಸುತ್ತಿದ್ದಾರೆ. ಜನತೆ ಈ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು. ಎಲ್ಲರೂ ಸಂಘಟಿತರಾಗಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಶಾಸಕ ಕೈ ಬಲಪಡಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ದುಂಡಾನಟ್ಟಿ ಕ್ರಾಸ್, ಮಮದಾಪೂರ ಕ್ರಾಸ್, ಪಂಚನಾಯ್ಕನಹಟ್ಟಿ ಕ್ರಾಸ್‍ಗಳಲ್ಲಿ ಕೂಡು ರಸ್ತೆ ಡಾಂಬರೀಕರಣ ಹಾಗೂ ಹಿರೇನಂದಿ ಕ್ರಾಸನಲ್ಲಿ ವೃತ್ತ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮಗಳಲ್ಲಿ ಜಿಪಂ ಮಾಜಿ ಸದಸ್ಯ ಮಡ್ಡೆಪ್ಪ ತೋಳಿನವರ, ಮುಖಂಡರುಗಳಾದ ರಮೇಶ ಗಾಣಿಗ, ಶಂಕರಗೌಡ ಪಾಟೀಲ, ಯಲ್ಲಪ್ಪ ಧರೆನ್ನವರ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಎಲ್ ಆರ್ ಲೋಕನ್ನವರ, ಶಿವಲಿಂಗ ಜಕ್ಕನ್ನವರ, ಶಿವಪ್ಪ ದಳವಾಯಿ, ಯಲ್ಲಾಲಿಂಗ ಹುಚ್ಚನಟ್ಟಿ, ಬಡಕಪ್ಪ ಪೂಜೇರಿ, ಶಿವನಗೌಡ ಪಾಟೀಲ, ಅಧಿಕಾರಿಗಳಾದ ಅನೀಲಕುಮಾರ ಶಿಂಗೆ, ನಾಗಾರಭರಣ ಕೆ ಪಿ, ಶಿವಲಿಂಗ ಪಾಟೀಲ, ಗುತ್ತಿಗೇದಾರ ಬಿ ಬಿ ದಾಸನವರ ಸೇರಿದಂತೆ ಅನೇಕರು ಇದ್ದರು.