RNI NO. KARKAN/2006/27779|Saturday, July 12, 2025
You are here: Home » breaking news » ಗೋಕಾಕ:ಬೀದಿ ನಾಯಿಗಳ ದಾಳಿ – ಮಹಿಳೆಗೆ ಗಂಭೀರ ಗಾಯ ಅಂಬೇಡ್ಕರ್ ನಗರದಲ್ಲಿ ಘಟನೆ

ಗೋಕಾಕ:ಬೀದಿ ನಾಯಿಗಳ ದಾಳಿ – ಮಹಿಳೆಗೆ ಗಂಭೀರ ಗಾಯ ಅಂಬೇಡ್ಕರ್ ನಗರದಲ್ಲಿ ಘಟನೆ 

ಬೀದಿ ನಾಯಿಗಳ ದಾಳಿ – ಮಹಿಳೆಗೆ ಗಂಭೀರ ಗಾಯ ಅಂಬೇಡ್ಕರ್ ನಗರದಲ್ಲಿ ಘಟನೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 5 :

ಮನೆಯಿಂದ ಶೌಚಾಲಯಕ್ಕೆ ತೆರಳುತ್ತಿರುವ  ಮಹಿಳೆಯ  ಮೇಲೆ ಬೀದಿ ನಾಯಿ ದಾಳಿ ಮಾಡಿ  ಗಾಯಗೊಳಿಸಿರುವ ಘಟನೆ  ನಗರದ  21 ನೇ ವಾರ್ಡ್‍ನ ಅಂಬೇಡ್ಕರ್ ನಗರದಲ್ಲಿ  ಶುಕ್ರವಾರ ಮಧ್ಯಾಹ್ನ ನಡೆದಿದೆ.

ಅಬೇದಾ ಮುಸ್ತಫಾ ಕಲ್ಲೋಳಿ ಎಂಬ ಮಹಿಳೆ ಮಧ್ಯಾಹ್ನ ಶೌಚಾಲಯಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಬೀದಿ ನಾಯಿಯು ಮಹಿಳೆಯ ಕಾಲಿಗೆ ಕಚ್ಚಿ ಗಂಭೀರವಾಗಿ ಗಾಯಗೋಳಿಸಿದ್ದು, ಮಹಿಳೆಗೆ  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಂಬೇಡ್ಕರ್ ನಗರ ಸೇರಿದಂತೆ ನಗರದ ಇತರೆ  ಬಡಾವಣೆಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು ಪ್ರತಿನಿತ್ಯ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ.
ಮಕ್ಕಳು ಆಟ ಆಡುವಾಗ, ಶಾಲೆಯಿಂದ ಬರುವಾಗ ದಾಳಿ ಮಾಡುತ್ತಿವೆ. ಈ ಬಗ್ಗೆ ನಗರಸಭೆಗೆ ದೂರು ನೀಡಿದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನಾದರೂ ನಗರಸಭೆ ಅಧಿಕಾರಿಗಳು ಶ್ವಾನಗಳ ಹಾವಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Related posts: