RNI NO. KARKAN/2006/27779|Friday, March 29, 2024
You are here: Home » breaking news » ಗೋಕಾಕ:ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ : ಸಹಕಾರಿ ಸಚಿವ ರಮೇಶ

ಗೋಕಾಕ:ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ : ಸಹಕಾರಿ ಸಚಿವ ರಮೇಶ 

ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ : ಸಹಕಾರಿ ಸಚಿವ ರಮೇಶ

ಗೋಕಾಕ ಸೆ 9: ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಸಹಕಾರಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ರಮೇಶ ಜಾರಕಿಹೊಳಿ ಹೇಳಿದರು

ಅಶರು ಶನಿವಾರದಂದು ನಗರದ ಹೊರವಲಯದ ಬಸವೇಶ್ವರ ಸಭಾಭವನದಲ್ಲಿ ಜಿಲ್ಲಾ ಪಂಚಾಯತ್ , ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 130ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ ಹಮ್ಮಿಕೊಂಡಿದ್ದ ಗುರು ಸ್ಮರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು .

ತಂದೆ ತಾಯಿಯ ನಂತರ ಅತ್ಯಂತ ಪೂಜ್ಯನೀಯ ಸ್ಥಾನದಲ್ಲಿರುವ ಶಿಕ್ಷಕರು ಜಾತ್ಯಾತೀತವಾಗಿ , ರಾಜಕೀಯೇತರವಾಗಿ ಕಾರ್ಯನಿರ್ವಹಿಸಿ ಮಕ್ಕಳ ಶೇಯೊಭಿವೃದಿಗೆ ಶ್ರಮಿಸಿಬೇಕು ‌. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಶಿಕ್ಷಣ ಇಲಾಖೆಗೆ ಸಾಕ್ಷಟ್ಟು ಯೋಜನೆಗಳನ್ನು ನೀಡಿದೆ ಬರುವ ದಿನಗಳಲ್ಲಿಯೂ ಸಹ ಶಿಕ್ಷಣ ಇಲಾಖೆಯ ಅಭಿವೃದ್ಧಿಗೆ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದ ಸಚಿವರು ಜಾರಕಿಹೊಳಿ ಕುಟುಂಬ ಮುಂದೆ ಬರಲು ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ ಎಂದು ಶಿಕ್ಷಕ ವೃತಿಯನ್ನು ಕೊಂಡಾಡಿದರು.

ನಿವೃತ್ತ ಶಿಕ್ಷರನ್ನು ಸತ್ಕರಿಸುತ್ತಿರುವ ಸಚಿವ ರಮೇಶ ಮತ್ತು ಗಣ್ಯರು

ಪ್ರತಿ ವರ್ಷ ಶೈಕ್ಷಣಿಕ ರಂಗದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಗೋಕಾಕ ಮತ್ತು ಮೂಡಲಗಿ ವಲಯ ರಾಜ್ಯಕ್ಕೆ ಮಾದರಿಯಾದ ಬಗೆ ಹೆಮ್ಮೆ ಇದೆ ಮುಂದೆಯು ಈ ಸಾಧನೆಯನ್ನು ಕಾಯ್ದುಕೊಂಡು ಹೋಗಲು ಶಿಕ್ಷಕರು ತನು , ಮನ ದಿಂದ ಕಾರ್ಯಪ್ರವೃತ್ತರಾಗಬೇಕು ಆ ದೀಸೆಯಲ್ಲಿ ಇಲಾಖೆಗೆ ಎಲ್ಲ ಸಹಾಯ , ಸಹಕಾರ ನೀಡಲಾಗುವುದೆಂದು ಸಚಿವ ರಮೇಶ ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಹೊಂದಿದ ಶಿಕ್ಷಕ ಶಿಕ್ಷಕೀಯರಿಗೆ , ಉತ್ತಮ ಶಿಕ್ಷಕರಿಗೆ , ಉತ್ತಮ ಶಾಲೆಗಳಿಗೆ , ಉತ್ತಮ ಅಡುಗೆ ಸಿಬ್ಬಂದಿಯರಿಗೆ ಸತ್ಕರಿಸಿ ಗೌರವಿಸಲಾಯಿತು

ವೇದಿಕೆ ಮೇಲೆ ಜಿ.ಪಂ ಅಧ್ಯಕ್ಷೆ ಶ್ರೀಮತಿ ಆಶಾ ಐಹೋಳೆ , ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ , ತಾ.ಪಂ ಅಧ್ಯಕ್ಷೆ ಶ್ರೀಮತಿ ಸುನಂದಾ ಕರದೇಸಾಯಿ , ಉಪಾಧ್ಯಕ್ಷ ಯಲ್ಲಪ್ಪ ನಾಯಿಕ , ಜಿ.ಪಂ ಸದಸ್ಯ ಟಿ.ಆರ್.ಕಾಗಲ್ , ಮಡೆಪ್ಪಾ ತೋಳಿನವರ , ಶ್ರೀಮತಿ ಶೋಬಾ ನಾಯಿಕ , ಕೋಣ್ಣೂರ ಪುರಸಭೆ ಅಧ್ಯಕ್ಷೆ ಶ್ರೀಮತಿ ಸವಿತಾ ಕುರಣಿ , ರಾಜು ತಹವಾರ , ತಹಶೀಲ್ದಾರ್ ಜಿ.ಎಸ್ ಮಳಗಿ ,ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ ಚಿನ್ನನವರ , ಗುಜನಾಳ ಗ್ರಾ.ಪಂ ಅಧ್ಯಕ್ಷ ಭೀಮಗೌಡ ಪಾಟೀಲ , ನಗರಸಭೆ ಸ್ಥಾಯಿ ಸಮಿತಿ ಚೇರಮನ್ನ ಭಗವಂತ ಹೂಳಿ , ನಗರಸಭೆ ಸದಸ್ಯರಾದ ಭೀಮಶಿ ಭರಮಣ್ಣವರ ,ಚಂದ್ರು ಈಳಿಗೇರ , ಸೇರಿದಂತೆ ತಾಲೂಕಿನ ಎಲ್ಲ ತಾ.ಪಂ , ಗ್ರಾ.ಪಂ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಉಪಸ್ಥಿತರಿದ್ದರು

ಮುಖ್ಯೋಪಾಧ್ಯಾಯ ಶ್ರೀ ಗೋಪಾಲ ಮಾಳಗಿ ಸ್ವಾಗತಿಸಿದರು , ಕಾರ್ಯಕ್ರಮವನ್ನು ಶಿಕ್ಷಕರಾದ ಎ.ಜಿ ಕೋಳಿ ಮತ್ತು ಮಿರ್ಜಿ ನಿರೂಪಿಸಿದರು ಕೊನೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ವಂದಿಸಿದರು

Related posts: