RNI NO. KARKAN/2006/27779|Saturday, August 2, 2025
You are here: Home » breaking news » ಘಟಪ್ರಭಾ:ಮಲ್ಲಾಪೂರ ಪಿ.ಜಿ ಕೆ.ಎಂ.ಎಫ್ ಡೈರಿ ಉದ್ಘಾಟನೆ ವಿವಾದ : ಸದಸ್ಯತ್ವಕ್ಕಾಗಿ ಎರಡು ಗುಂಪುಗಳ ಮಧ್ಯೆ ವಾಗ್ವಾದ!

ಘಟಪ್ರಭಾ:ಮಲ್ಲಾಪೂರ ಪಿ.ಜಿ ಕೆ.ಎಂ.ಎಫ್ ಡೈರಿ ಉದ್ಘಾಟನೆ ವಿವಾದ : ಸದಸ್ಯತ್ವಕ್ಕಾಗಿ ಎರಡು ಗುಂಪುಗಳ ಮಧ್ಯೆ ವಾಗ್ವಾದ! 

ಮಲ್ಲಾಪೂರ ಪಿ.ಜಿ ಕೆ.ಎಂ.ಎಫ್ ಡೈರಿ ಉದ್ಘಾಟನೆ ವಿವಾದ : ಸದಸ್ಯತ್ವಕ್ಕಾಗಿ ಎರಡು ಗುಂಪುಗಳ ಮಧ್ಯೆ ವಾಗ್ವಾದ!

ಘಟಪ್ರಭಾ ಜ 20: ಇಂದು ಮುಂಜಾನೆ ನೂತನ ಕೆ.ಎಂ.ಎಫ್ ಡೈರಿಯ ಉದ್ಘಾಟನೆ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿದ್ದರಿಂದ ಪೋಲಿಸರು ಮದ್ಯ ಪ್ರವೇಶಿಸಿ ಎರಡು ಗುಂಪುಗಳನ್ನು ಚದುರಿಸಿದ ಘಟನೆ ಮಲ್ಲಾಪೂರ ಪಿ.ಜಿ ಯಲ್ಲಿ ನಡೆದಿದೆ.
ನೂತನ ಡೈರಿಯೊಂದರ ಸದಸ್ಯತ್ವ ನೊಂದಣಿ ಸಲುವಾಗಿ ರಾಜಕೀಯ ಮುಖಂಡರಾದ ದಳವಾಯಿ ಗುಂಪು ಹಾಗೂ ನ್ಯಾಯವಾದಿ ಮತ್ತು ಪಟ್ಟಣ ಪಂಚಾಯತ್ ಸದಸ್ಯ ಗಂಗಾಧರ ಬಡಕುಂದ್ರಿ ಗುಂಪುಗಳ ನಡುವೆ ಕೆಲವು ದಿನಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಆದರೆ ಇಂದು ಬೆಳಿಗ್ಗೆ ದಳವಾಯಿ ಗುಂಪು ಇನ್ನೊಂದು ಗುಂಪಿಗೆ ಮಾಹಿತಿ ನೀಡದೆ ಡೈರಿ ಉದ್ಘಾಟನೆ ಮಾಡಿದ್ದು, ಗಂಗಾಧರ ಬಡಕುಂದ್ರಿ ಗುಂಪಿನ ಆಕ್ರೋಶಕ್ಕೆ ಕಾರಣವಾಗಿ ನೂರಕ್ಕೂ ಹೆಚ್ಚಿನ ಜನ ಸೇರಿಕೊಂಡು ಡಿ.ಎಂ.ದಳವಾಯಿವರ ಏಕಮುಖ ನಿರ್ಧಾರ ತೆಗೆದುಕೊಂಡು ಮಲ್ಲಾಪೂರ ಪಿ.ಜಿ ಗ್ರಾಮಸ್ಥರನ್ನು ನಿರ್ಲಕ್ಷ್ಯ ಮಾಡಿರುವುದಕ್ಕೆ ಬಡಕುಂದ್ರಿ ಗುಂಪಿನವರು ವಿರೋಧ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಎರಡು ಗುಂಪಿನ ಮದ್ಯ ವಾಗ್ವಾದ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುವ ಸಂದರ್ಭದಲ್ಲಿ ಪೋಲಿಸರು ಮದ್ಯ ಪ್ರವೇಶಿಸಿ ಎಲ್ಲರನ್ನು ಚದುರಿಸಿದರು.
ಈ ಎರಡು ಗುಂಪಿನವರು ಸಚಿವ ರಮೇಶ ಜಾರಕಿಹೊಳಿಯವರ ಕಟ್ಟಾ ಬೆಂಬಲಿಗರಾಗಿದ್ದು, ಜಗಳವನ್ನು ಸಚಿವರ ಕಛೇರಿ ಗೋಕಾಕದಲ್ಲಿ ತೀರ್ಮಾನಿಸಲು ನಿರ್ಧಾರಿಸಿ ಗೋಕಾಕಕ್ಕೆ ತೆರಳಿದರು. ಸಚಿವ ಜಾರಕಿಹೊಳಿಯವರು ಡೈರಿಯನ್ನು ಯಾವ ಗುಂಪಿಗೆ ಒಪ್ಪಿಸುತ್ತಾರೆ ಎನ್ನುವ ಪ್ರಶ್ನೆ ಘಟಪ್ರಭಾ ಜನರಲ್ಲಿ ಕುತೂಹಲ ಮೂಡಿಸಿದೆ.

Related posts: