RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಪತ್ರಕರ್ತರಿಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಿಬೇಕು : ಬಸವರಾಜ ಖಾನಪ್ಪನವರ

ಗೋಕಾಕ:ಪತ್ರಕರ್ತರಿಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಿಬೇಕು : ಬಸವರಾಜ ಖಾನಪ್ಪನವರ 

ಪತ್ರಕರ್ತರಿಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಿಬೇಕು : ಬಸವರಾಜ ಖಾನಪ್ಪನವರ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 3 :

 
ಕೊರೋನಾ ಪ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಿರುವ ಪತ್ರಕರ್ತರಿಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಿಬೇಕು ಎಂದು ಕನ್ನಡ ಪರ ಹೋರಾಟಗಾರ ಬಸವರಾಜ ಖಾನಪ್ಪನವರ ಹೇಳಿದರು

ಗುರುವಾರದಂದು ಇಲ್ಲಿನ ನಮ್ಮ ಬೆಳಗಾವಿ ಗೆಳೆಯರ ಬಳಗ ಲಾಕಡೌನ ನಿಮಿತ್ತ ಹಮ್ಮಿಕೊಂಡ ಮನೆಯೇ ಮಂತ್ರಾಲಯ ಫೇಸಬುಕ್ಕ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾವಿದರನ್ನು ಸತ್ಕರಿಸಿ ಅವರು ಮಾತನಾಡಿದರು.
ಸರಕಾರದ ಎಲ್ಲ ಇಲಾಖೆಗಳೊಂದಿಗೆ ಕೊರೋನಾ ಸಂಧರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸುದ್ದಿಗಳನ್ನು ಮಾಡುತ್ತಿರುವ ಪತ್ರಕರ್ತರ ಕಾರ್ಯವನ್ನು ಮನಗಂಡು ಸರಕಾರ ಅವರನ್ನು ಪ್ರಂಟ್ ಲೈನ ವಾರಿಯರ್ಸ್ ಎಂದು ಘೋಷಿಸಿದ್ದು, ಶ್ಲಾಘನೀಯವಾಗಿದೆ.ಇದರ ಜೊತೆಗೆ ಅವರಿಗೂ ಸಹ ವಿಶೇಷ ಪ್ಯಾಕೇಜ್ ಘೋಷಿಸಿ ಅವರ ಕುಟುಂಬಕ್ಕೆ ಆಸರೆಯಾಗಬೇಕೆಂದು ಅಭಿಪ್ರಾಯ ಪಟ್ಟರು.

ಇನ್ನೋರ್ವ ಅತಿಥಿ ಕನ್ನಡ ಪರ ಹೋರಾಟಗಾರ ಕಿರಣ ಢಮಾಮಗರ ಮಾತನಾಡಿ ಕೊರೋನಾ ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯವಾಗಿದ್ದು, ಸರಕಾರ ನೀಡುವ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಮನೆಯಲ್ಲಿ ಇದ್ದು ಸುರಕ್ಷಿತವಾಗಿರಬೇಕು. ಜೀವನ ಮತ್ತು ಜೀವ ಎರೆಡರಲ್ಲಿ ಜೀವವನ್ನು ಆಯ್ಕೆಮಾಗಿಕೊಂಡು ಸುರಕ್ಷಿತವಾಗಿದ್ದು ,ತಮ್ಮ ಮುಂದಿನ ಜೀವನವನ್ನು ಸಂತೋಷವಾಗಿ ನಡೆಸಬೇಕೆಂದು ಮಾರ್ಮಿಕವಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ನಮ್ಮ ಬೆಳಗಾವಿ ತಂಡದ ವತಿಯಿಂದ ಇಬ್ಬರೂ ಅತಿಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಮ್ಮ ಬೆಳಗಾವಿ ಗೆಳೆಯ ಬಳಗದ ಅಬ್ಬಾಸ ಕೆ ದೇಸಾಯಿ, ಸಾದಿಕ ಹಲ್ಯಾಳ, ಶಿವಾನಂದ ಪೂಜೇರಿ, ಮಹಾಂತೇಶ ದಾಸಪ್ಪಗೋಳ, ಕಾಶಿನಾಥ್ ಸವಸುದ್ದಿ, ಖಾಜಾ ಮತ್ತೆ, ಮುಗುಟ ಪೈಲವಾನ, ಮುನ್ನಾ ಪಠಾಣ ಇದ್ದರು.

ನಂತರ ನಗರದ ಗಾಯಕರಾದ ಶಕೀಲ ಜಕಾತಿ ಹಾಗೂ ರಮೇಶ ಬಾಗಡಿ ಅವರು ಸುಪ್ರಸಿದ್ಧ ಕನ್ನಡ ನಾಡ ಗೀತೆಗಳು ಹಾಡಿ ನೇರ ಪ್ರಸಾರದಲ್ಲಿ ಮನೆಯಿದ್ದ ನೂರಾರು ವಿಕ್ಷೀಕರನ್ನು ರಂಜಿಸಿದರು.

Related posts: