RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪುನಶ್ಚೇತನ ಗೋಳಿಸಿದ ಕೆರೆಗೆ ಪೂಜೆ

ಗೋಕಾಕ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪುನಶ್ಚೇತನ ಗೋಳಿಸಿದ ಕೆರೆಗೆ ಪೂಜೆ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪುನಶ್ಚೇತನ ಗೋಳಿಸಿದ ಕೆರೆಗೆ ಪೂಜೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 11 :
ತಾಲೂಕಿನ ಅಂಕಲಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಮಾದರಿ ಕೆರೆಯನ್ನಾಗಿ ಪುನಶ್ಚೇತನ ಗೋಳಿಸಿ ಪಟ್ಟಣ ಪಂಚಾಯತ್ ಗೆ ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಶ್ರೀ ಅಡಿವಿ ಸಿದ್ದರಾಮ ಮಹಾಸ್ವಾಮಿಗಳು ಸೋಮವಾರದಂದು ಪೂಜೆ ಸಲ್ಲಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 6 ಲಕ್ಷ 70 ಸಾವಿರ ರೂಗಳಲ್ಲಿ ಕೆರೆ ಹೂಳ ತೆಗೆಯುವದು, ಬದು ನಿರ್ಮಾಣ, ಕೆರೆಯೇರಿ ದುರಸ್ಥಿ ಹಾಗೂ ಬೆಲಿ ನಿರ್ಮಾಣ ಮಾಡಿ ಮಾದರಿ ಕೇರೆಯನ್ನಾಗಿ ನಿರ್ಮಿಸಿ ಹಸ್ತಾಂತರಿ‌ಸಲಾಯಿತು‌.

ಈ ಸಂದರ್ಭದಲ್ಲಿ ಬಸನಗೌಡ ನಿರ್ವಾಣಿ, ಭೀಮಗೌಡ ಪೊಲೀಸ್ ಪಾಟೀಲ, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ಯೋಜನಾಧಿಕಾರಿ ಧರ್ಮೇಂದ್ರ , ಕೃಷಿ ಅಧಿಕಾರಿ ‌ಸುರೇಶ್ ಹಾಲಿನವರ, ಬಸವರಾಜ, ಹರೀಶ್, ಶಂಕರ ಘೋಡಗೇರಿ, ಅರುಣ್ ಮದವಾಲ ಸೇರಿದಂತೆ ಅನೇಕರು ಇದ್ದರು.

Related posts: