ಗೋಕಾಕ:ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೋಳ್ಳಿ : ಎಸ್. ಎ. ಕೋತವಾಲ
ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೋಳ್ಳಿ : ಎಸ್. ಎ. ಕೋತವಾಲ
ಗೋಕಾಕ ಅ 2: ರಾಜ್ಯದ ಸಿದ್ಧರಾಮಯ್ಯ ನೇತ್ರತ್ವದ ಸರಕಾರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಬಡವರ, ದಿನ ದಲಿತರ ಹಾಗೂ ಹಿಂದುಳಿದ ವರ್ಗಗಳಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತರುವದರ ಜೋತೆಗೆ ಅಕ್ಟೋಬರ್ 2 ಗಾಂಧೀ ಜಯಂತಿ ನಿಮಿತ್ಯ ಮಾತೃಪೂರ್ಣ ಯೋಜನೆಯ ಅಡಿಯಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠೀಕ ಬಿಸಿಯೂಟ ಕಾರ್ಯಕ್ರಮವನ್ನು ರಾಜ್ಯಾಧ್ಯಂತ ಚಾಲನೆ ನೀಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಾಜಿ ನಗರಾಧ್ಯಕ್ಷ ಹಾಗೂ ಹಾಲಿ ಸದಸ್ಯ ಎಸ್ ಎ ಕೋತವಾಲ ಹೇಳಿದರು.
ಅವರು, ಸೋಮವಾರದಂದು ನಗರದ ಉಪ್ಪಾರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಗೋಕಾಕ, ಗೋಕಾಕ ತಾಲೂಕ ಆಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಮಡಿದ್ದ “ಮಾತೃಪೂರ್ಣ ಯೋಜನೆ” ಕಾರ್ಯಕ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರಕಾರ ಬಿಡುಗಡೆ ಗೊಳಿಸಿರುವ “ಮಾತೃಪೂರ್ಣ ಯೋಜನೆ” ಬಡವರು, ಸಿರಿವಂಂತರೆನ್ನದೇ ಎಲ್ಲರಿಗೂ ಸಮಾನವಾಗಿ ವಿಸ್ತರಿಸುವ ಯೋಜನೆಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬರುವ ಯೋಜನೆಗಳನ್ನು ಸಾರ್ವಜನಿಕರಿಗೆ ಮತ್ತು ಗರ್ಭಿಣಿ ಹಾಗೂ ಬಾಣಂತಿಯರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಶ್ರಮಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಸ್ಥಾಯಿ ಸಮೀತಿ ಚೇರಮನ್ ಭಗವಂತ ಹುಳ್ಳಿ, ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ತಾಲೂಕ ಆರೋಗ್ಯಾಧಿಕಾರಿ ಆರ್ ಎಸ್ ಬೆಣಚಿಮರ್ಡಿ, ನಗರಸಭೆ ಸದಸ್ಯರಾದ ಭೀಮಶಿ ಭರಮನ್ನವರ, ಸುರೇಶ ಬಡೆಪ್ಪಗೋಳ, ಪರಶುರಾಮ ಭಗತ್, ಜಯಾನಂದ ಹುಣಶ್ಯಾಳ, ಚಂದ್ರಕಾಂತ ಈಳಿಗೇರ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಮುತ್ತುರಾಜ ಜಮಖಂಡಿ, ಶಿವಾನಂದ ಹತ್ತಿ, ಅಬ್ದುಲಸತ್ತಾರ ಶಭಾಶಖಾನ, ಜಂಗಟಿಹಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಎ ಎಮ್ ನೀರಗಟ್ಟಿ, ಸಿಬ್ಬಂಧಿಗಳಾದ ಸಿ ಎಸ್ ಸುಖಸಾರೆ, ಶ್ರೀಮತಿ ಆರ್ ಎಸ್ ಕೆಂಚನ್ನವರ, ಎಸ್ ಎನ್ ಸದಲಗಿ, ಎಮ್ ಎ ಮುದಗೌಡರ, ಕೊಟ್ಟರಶೆಟ್ಟಿ, ನಿಟ್ಟೂರಕರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಸ್ಥಳೀಯ ಸಾರ್ವಜನಿಕರು ಇದ್ದರು.