RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಮಕ್ಕಳ ಮೇಲಿನ ದೌರ್ಜನ್ಯ ತಡಯಲು ಎಲ್ಲರೂ ಮುಂದಾಗಿ : ಶ್ರದ್ಧಾ ಅಮೀತ

ಗೋಕಾಕ:ಮಕ್ಕಳ ಮೇಲಿನ ದೌರ್ಜನ್ಯ ತಡಯಲು ಎಲ್ಲರೂ ಮುಂದಾಗಿ : ಶ್ರದ್ಧಾ ಅಮೀತ 

ಮಕ್ಕಳ ಮೇಲಿನ ದೌರ್ಜನ್ಯ ತಡಯಲು ಎಲ್ಲರೂ ಮುಂದಾಗಿ   : ಶ್ರದ್ಧಾ ಅಮೀತ

ಗೋಕಾಕ ಸೆ 26: ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ಧರ್ಮಸ್ಥಳ ಯೋಜನೆಯಿಂದ ಜ್ಞಾನವಿಕಾಸ ವತಿಯಿಂದ ಆಯೋಜಿಸಲಾದ ಮಕ್ಕಳ ಮೇಲಿನ ದೌರ್ಜನ್ಯ ತಡಯುವಿಕೆ ಕಾರ್ಯಕ್ರಮವನ್ನು ಧಾರವಾಡ ಪ್ರಾದೇಶಿಕ ಕಛೇರಿಯ ತಾಂತ್ರಿಕ ಪ್ರಬಂಧಕಿ ಶ್ರದ್ಧಾ ಅಮೀತರವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಕ್ಕಳ ಮೇಲೆ ಆಗುವ ಮಾನಸಿಕ, ದೈಹಿಕ, ಭಾವನಾತ್ಮಕ ದೌರ್ಜನ್ಯದ ಬಗ್ಗೆ ಕೇಂದ್ರ ಸದಸ್ಯರಿಗೆ ಹಾಗೂ ಮಕ್ಕಳಿಗೆ ಮಾಹಿತಿಯನ್ನು ನೀಡಿದರು.

ಎಸ್.ಆರ್. ದೇಮಶೆಟ್ಟಿ ವಕೀಲರು ಮಾತನಾಡಿ ದೌರ್ಜನ್ಯ ಎಸಗಿದ ದುಷ್ಟರ್ಮಿಗಳಿಗೆ ಕಾನೂನಿಂದ ಆಗುವ ಶಿಕ್ಷಯ ಬಗ್ಗೆ ಮಾಹಿತಿ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿನ್ನರ್ ವಿಲ್ಲ್ ಸಂಸ್ಥೆಯ ಮಾಜಿ ಅಧ್ಯಕ್ಷೆ ವಿದ್ಯಾ ಮಗದುಮ್, ತಾಲೂಕಿನ ಯೋಜನಾಧಿಕಾರಿ ಸುರೇಂದ್ರ, ವಲಯ ಮೇಲ್ವಿಚಾರಕ ವಿಲಾಸ ಹಾಗೂ ಜೆ.ವಿ.ಕೆ. ಸಮನ್ವಯಾಧಿಕಾರಿ ವಿಜಯಾ ಗೌಡರ ಇದ್ದರು.
ಈ ಸಂದರ್ಭದಲ್ಲಿ 200ಕ್ಕೂ ಹೆಚ್ಚು ಜನ ಸದಸ್ಯರು ಪಾಲ್ಗೊಂಡಿದ್ದರು.

Related posts: