ಗೋಕಾಕ:ಯಮಕನಮರಡಿ ಕ್ಷೇತ್ರದಿಂದ ಸ್ವರ್ಧಿಸುವುದು ಖಚಿತ : ಲಖನ್ ಜಾರಕಿಹೊಳಿ ಪುರ್ನರುಚ್ಚಾರ , ಶೀಘ್ರ ಜನ ಸಂರ್ಪಕ ಕಛೇರಿ ಪ್ರಾರಂಭ
ಯಮಕನಮರಡಿ ಕ್ಷೇತ್ರದಿಂದ ಸ್ವರ್ಧಿಸುವುದು ಖಚಿತ : ಲಖನ್ ಜಾರಕಿಹೊಳಿ ಪುರ್ನರುಚ್ಚಾರ , ಶೀಘ್ರ ಜನ ಸಂರ್ಪಕ ಕಛೇರಿ ಪ್ರಾರಂಭ
ಗೋಕಾಕ ಸೆ 26: ಮುಂಬರುವ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ಸ್ವರ್ಧಿಸುವುದು ಖಚಿತ ಎಂದು ಕಾಂಗ್ರೆಸ್ ಯುವ ಧುರೀಣ ಲಖನ್ ಜಾರಕಿಹೊಳಿ ಪುರ್ನರುಚ್ಚಿಸಿದ್ದಾರೆ
ಇಂದು ಬೆಳಿಗ್ಗೆ ನಮ್ಮ ಬೆಳಗಾವಿ ಪತ್ರಿಕೆಯೊಂದಿಗೆ ಮಾತನಾಡಿರುವ ಅವರು 2018 ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ಸ್ವರ್ಧಿಸುವುದು ನಿಶ್ಚಿತ ಕಾರ್ಯಕರ್ತರು ಆ ದಿಸೆಯಲ್ಲಿ ಕಾರ್ಯಪ್ರವೃತರಾಗಬೇಕೆಂದ ಅವರು ಕಾರ್ಯಕರ್ತರಿಗೆ ಅನಕೂಲ ವಾಗುವ ನೀಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಯಮಕನಮರಡಿಯಲ್ಲಿ ಜನ ಸಂರ್ಪಕ ಕಛೇರಿ ತೆರೆದು ವಾರದಲ್ಲಿ ಎರೆಡು ದಿನ ಯಮಕನಮರಡಿ ಕ್ಷೇತ್ರದಲ್ಲಿ ಪ್ರವಾಸ ಕೈಗೋಳಲಾಗುವುದು
ನಾನು ಯಮಕನಮರಡಿಯಿಂದ ಸ್ವರ್ಧಿಸುತ್ತೆನೆಂದು ಹೇಳಿದಾಗಿನಿಂದ ಸತೀಶ ಜಾರಕಿಹೊಳಿ ಅವರ ಪಿಎಗಳು ಕ್ಷೇತ್ರ ಸುತುತ್ತಿದ್ದಾರೆ ಅವರು ಎಷ್ಟೋ ಪ್ರಯತ್ನ ಮಾಡಿದರು ಏನು ಮಾಡಲು ಸಾಧ್ಯವಿಲ್ಲ ಮುಂದಿನ ಚುನಾವಣೆಯಲ್ಲಿ ಆ ಕ್ಷೇತ್ರದಿಂದ ನಾನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲಾ ವೆಂದ ಲಖನ ಜಾರಕಿಹೊಳಿ ಅವರು ಯಾವ ಪಕ್ಷದಿಂದ ಸ್ವರ್ಧಿಸುತ್ತಿರೆಂದು ಕೇಳಿದ ಪ್ರಶ್ನೆಗೆ ಅದನ್ನು ಕಾಲವೇ ನಿರ್ಧರಿಸಲ್ಲಿದೆ ಅದರಲ್ಲಿ ಯಾವುದೆ ಅನುಮಾನವಿಲ್ಲ ಎಂದಷ್ಟೇ ಉತ್ತರಿಸಿದರು
ಬೆಳಗಾವಿ ಗ್ರಾಮೀಣಕ್ಕೆ ಹೆಬ್ಬಾಳಕರ ಫಿಕ್ಸ :
ಬೆಳಗಾವಿ ಗ್ರಾಮೀಣ ಕ್ಷೇತದಿಂದಲೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ್ದಾರೆ ಅವರ ಗೆಲುವಿನ ಜವಾಬ್ದಾರಿಯು ಸಹ ನನ್ನ ಮತ್ತು ರಮೇಶ ಜಾರಕಿಹೊಳಿ ಅವರ ಮೇಲಿದೆ ಆ ಕ್ಷೇತ್ರದಲ್ಲಿಯೂ ಸಹ ಈ ಭಾರಿ ಲಕ್ಷ್ಮೀ ಹೆಬ್ಬಾಳಕರ ಅವರು ಗೆಲ್ಲುವುದು ನಿಶ್ಚಿತ ಈ ಭಾರಿ ಇಲ್ಲಿ ಯಾರ ಆಟ ನಡೆಯುವುದಿಲ್ಲಾ ಕಾರ್ಯಕರ್ತರು ಯಾರ ಮಾತಿಗೂ ಕಿವಿ ಕೋಡದೆ ಲಕ್ಷ್ಮಿ ಹೆಬ್ಬಾಳಕರ ಗೆಲುವಿಗೆ ಶ್ರಮಿಸಬೇಕೆಂದು ಹೇಳಿರುವ ಲಖನ್ ಪರೋಕ್ಷವಾಗಿ ಸಹೋದರ ಸತೀಶ ಅವರಿಗೆ ಟಾಂಗ್ ನೀಡಿದ್ದಾರೆ