RNI NO. KARKAN/2006/27779|Sunday, August 3, 2025
You are here: Home » breaking news » ಬೆಳಗಾವಿ:ಅಕ್ರಮ ಗಾಂಜಾ ಮಾರಾಟ : ಇಬ್ಬರ ಬಂಧನ

ಬೆಳಗಾವಿ:ಅಕ್ರಮ ಗಾಂಜಾ ಮಾರಾಟ : ಇಬ್ಬರ ಬಂಧನ 

ಅಕ್ರಮ ಗಾಂಜಾ ಮಾರಾಟ : ಇಬ್ಬರ ಬಂಧನ

ಬೆಳಗಾವಿ ಸೆ 25: ಇಲ್ಲಿಯ ನೆಹರು ನಗರ ಮುಖ್ಯರಸ್ತೆಯಲ್ಲಿರುವ ಆದಿತ್ಯ ಆರ್ಕೆಡ್ ಕಟ್ಟಡದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ನೆರೆಯ ಬಾಗಲಕೋಟ ಜಿಲ್ಲೆ ತೇರದಾಳ ಪಟ್ಟಣದ ರಾಜು ಹುಸೇನಸಾಬ ಅವಟಿ, ಮಹಾನಿಂಗ ಕೆಮೂರಿ ಬಂಧಿತರು.

ಇಂದು ಬೆಳಗ್ಗೆ ನೆಹರು ನಗರದ ಆದಿತ್ಯಾ ಆರ್ಕೆಡ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೆರೆಗೆ ಪೊಲೀಸರು ದಾಳಿ ನಡೆಸಿ ಸುಮಾರು ₹ 11 ಸಾವಿರ ಮೌಲ್ಯದ 1ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: