ಗೋಕಾಕ:ಪುರವಂತರಿಂದ ವಿವಿಧ ಕಸರತ್ತು ಪ್ರದರ್ಶನ
ಪುರವಂತರಿಂದ ವಿವಿಧ ಕಸರತ್ತು ಪ್ರದರ್ಶನ
ಬೆಟಗೇರಿ ಅ 27 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಆಗಸ್ಟ 26 ರಂದು ನಡೆದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ವೀರಭದ್ರೇಶ್ವರ ದೇವರ ಭಕ್ತರಾದ ಪುರವಂತರು ಪುರವಂತಿಕೆಯ ವೇಷ ಭೂಷಣ ಧರಿಸಿ ಆಹಾ..ಹಾ..ವೀರಾ..,ಆಹಾ..ಹಾ..ರುದ್ರಾ.., ಕಡೆ..ಕಡೆ… ಅಂತಾ ವೀರಭದ್ರೇಶ್ವರ ದೇವರ ಒಡಪು ಹೆಳುವ ಸನ್ನಿವೇಶ ರುದ್ರಾವೇಶದ ಭಕ್ತಿಯ ಪರಾಕಾಷ್ಟೇ ತೋರಿಸಿದರು.
ಅಷ್ಟೇ ಅಲ್ಲದೆ ಪುರವಂತರು ತಮ್ಮ ಗಲ್ಲ ಹಾಗೂ ನಾಲಿಗೆಯಲ್ಲಿ ಶಸ್ತ್ರಗಳನ್ನು ಚುಚ್ಚಿ ಕೊಳ್ಳುವದು ರುದ್ರಾವೇಶದಿಂದ ಒಡಪು ಹೇಳುವದು, ಸೊಜಿಯಿಂದ ಶಸ್ತ್ರದ ಜೋತೆಗೆ ಸುಮಾರು 105 ಮೀಟರ ಉದ್ದದ ಶಸ್ತ್ರದಾರವನ್ನು ನಾಲಿಗೆ ಹಾಗೂ ಒಂದು ಗಲ್ಲದಿಂದ ಮತ್ತೊಂದಡೆ ತಗೆಯುವ ದೃಶ್ಯ ನೊಡುಗರ ಮೈ ನೆವರಿಳಿಸುವಂತಿತ್ತು. ಶಸ್ತ್ರ ಚುಚ್ಚಿದ ಸ್ಥಳಕ್ಕೆ ಕೇವಲ ಭಸ್ಮ ಲೇಪಿಸಿದರೆ ಸಾಕು ಗಾಯ ನೋವು ಏನು ಇರುವದಿಲ್ಲ ! ಭಕ್ತಿಯಿಂದ ವಿವಿಧ ಕಸರತ್ತು ಪ್ರದರ್ಶನ ಮಾಡಿದ ಪುರವಂತರು ವೀರಭದ್ರೇಶ್ವರ ದೇವರ ಭಕ್ತಿ ಕೃಪಾರ್ಶೀವಾದಕ್ಕೆ ಪಾತ್ರರಾದರು.
ಇಲ್ಲಿಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಆಚರಣೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ರಾಜಕೀಯ ಮುಖಂಡರು, ಸಂತ ಶರಣರು, ಪುರವಂತರು, ಅಪಾರ ಸಂಖ್ಯೆಯಲ್ಲಿ ಭಕ್ತರು, ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.