ಘಟಪ್ರಭಾ:ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೆ ವಿದ್ಯಾಥಿಗಳು ಯಶಸ್ಸು ಗಳಿಸಲು ಸಹಕಾರಿ : ಶಿಕ್ಷಣಾಧಿಕಾರಿ ಜಿ.ಬಿ.ಬಳಿಗಾರ
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೆ ವಿದ್ಯಾಥಿಗಳು ಯಶಸ್ಸು ಗಳಿಸಲು ಸಹಕಾರಿ : ಶಿಕ್ಷಣಾಧಿಕಾರಿ ಜಿ.ಬಿ.ಬಳಿಗಾರ
ಘಟಪ್ರಭಾ ಸೆ 25: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೆ ವಿದ್ಯಾಥಿಗಳು ಯಶಸ್ಸು ಗಳಿಸಲು ಸಹಕಾರಿಯಾಗುತ್ತದೆ ಎಂದು ಗೋಕಾಕ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಿಗಾರ ಹೇಳಿದರು.
ಅವರು ಸ್ಥಳೀಯ ಚೌಕಶಿ ಫೌಂಡೇಶನ್ ಹಾಗೂ ಎಸ್.ಡಿ.ಟಿ ಪ.ಪೂ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರದಲ್ಲಿ ಹಿಂದಿ ದಿನಾಚರಣೆ ಅಂಗವಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾದ ತಾಲೂಕಾ ಮಟ್ಟದ ಹಿಂದಿ ಸ್ಪರ್ಧಾತ್ಮಕ ಪರೀಕ್ಷಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತ, ಕೇವಲ ಹಿಂದಿ ಅಷ್ಟೆ ಅಲ್ಲದೆ ಎಲ್ಲ ವಿಷಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿ. ಚೌಕಶಿ ಫೌಂಡೇಶನ್ ಸಂಸ್ಥೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶ್ಯಸ್ಥ್ಯ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಪರೀಕ್ಷೆಯಲ್ಲಿ 13 ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಸ್ಥಳೀಯ ಸರಸ್ವತಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಾಹೀಲ ಪಠಾಣ ಪ್ರಥಮ, ಮಧರ ಧೇರೆಸಾ ಪ್ರೌಢ ಶಾಲೆಯ ವಿದ್ಯಾರ್ಥಿಗಳು ದ್ವೀತಿಯ ಹಾಗೂ ತೃತೀಯ ಬಹುಮಾನ ಪಡೆದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಮಂಜುನಾಥ ಕೂಡಳ್ಳಿ ಮಾತನಾಡಿ ಹಿಂದಿ ವಿಷಯದ ಇತಿಹಾಸ ಮತ್ತು ಮಹತ್ವವನ್ನು ಮಕ್ಕಳಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಚೌಕಶಿ ಫೌಂಡೇಶನ್‍ದ ಅಧ್ಯಕ್ಷರಾದ ಶಿವಾನಂದ ಚೌಕಶಿ, ತಾ.ಪಂ ಸದಸ್ಯ ಲಗಮಣ್ಣಾ ನಾಗನ್ನವರ, ಹಿರಿಯರಾದ ಮದಾರಸಾಬ ಜಗದಾಳೆ, ಸ್ಥಳೀಯ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯರಾದ ಎಸ್.ಜಿ.ಅಂಗಡಿ, ಜೆ.ಸಿ.ಮಠಪತಿ, ಹಿಂದಿ ಶಿಕ್ಷಕರಾದ ಬಿ.ಆರ್.ಕರಿಗಾರ, ಬಿ.ಆರ್.ವಾಲಿಕಾರ ಇದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಆರ್.ಡಿ.ಉಪ್ಪಾರ ನಿರೂಪಿಸಿದರು. ಶಿಕ್ಷಕಿ ಬಿ.ಎಸ್.ದೊಡಮನಿ ವಂದಿಸಿದರು.