ಗೋಕಾಕ:ಸ್ವಚ್ಛಭಾರತ ಮಿಷನ್ ಯೋಜನೆಯಡಿ ಮನೆ ಮನೆಗೆ ಕಸ ಸಂಗ್ರಹಿಸುವ ವಾಹನಗಳಿಗೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ
ಸ್ವಚ್ಛಭಾರತ ಮಿಷನ್ ಯೋಜನೆಯಡಿ ಮನೆ ಮನೆಗೆ ಕಸ ಸಂಗ್ರಹಿಸುವ ವಾಹನಗಳಿಗೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 2 :
ಗೋಕಾಕ ನಗರಸಭೆ ವತಿಯಿಂದ ಸ್ವಚ್ಛಭಾರತ ಮಿಷನ್ ಯೋಜನೆಯಡಿ ಮನೆ ಮನೆಗೆ ಕಸ ಸಂಗ್ರಹಿಸುವ ನಾಲ್ಕು ವಾಹನಗಳಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ 5.89 ಲಕ್ಷ ರೂಗಳಲ್ಲಿ ಶೇ24.10ರ ಯೋಜನೆಯಡಿಯಲ್ಲಿ ಪೌರಕಾರ್ಮಿಕರ ಸುರಕ್ಷಾ ಸಾಮಗ್ರಿಗಳನ್ನು ವಿತರಣೆ, 4.55 ಲಕ್ಷ ರೂಗಳಲ್ಲಿ ಶೇ7.25ರ ಯೋಜನೆಯಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಗಮ ಗೋಕಾಕ ಇವರಿಗೆ ಕ್ವಾಯರ್ ಬೇಡ್ ಹಾಗೂ 5.27 ಲಕ್ಷ ರೂಗಳಲ್ಲಿ ಶೇ5ರ ಅಂಗವಿಕಲರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಅಂಗವಿಕಲರಿಗೆ ಮೂರು ದ್ವೀಚಕ್ರ ವಾಹನಗಳನ್ನು ಶಾಸಕರು ವಿತರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, ಪ್ರಕಾಶ ಮುರಾರಿ, ವಿಜಯ ಜತ್ತಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ದಾದಾಪೀರ ಶಭಾಶಖಾನ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಖಡಕಭಾಂವಿ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಪರಿಸರ ಅಭಿಯಂತರ ಎಮ್ ಎಚ್ ಗಜಾಕೋಶ, ಜಯೇಶ ತಾಂಬೂಳೆ ಸೇರಿದಂತೆ ನಗರಸಭೆ ಸದಸ್ಯರು ಸಿಬ್ಬಂಧಿಗಳು ಅನೇಕರು ಇದ್ದರು.