ಘಟಪ್ರಭಾ:ಪಂಡಿತ ದೀನ ದಯಾಲ ಉಪಾದ್ಯಾಯ ಅವರ ಹುಟ್ಟು ಹಬ್ಬ ಆಚರಣೆ

ಪಂಡಿತ ದೀನ ದಯಾಲ ಉಪಾದ್ಯಾಯ ಅವರ ಹುಟ್ಟು ಹಬ್ಬ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಸೆ 25 :
ಪಂಡಿತ ದೀನ ದಯಾಲ ಉಪಾದ್ಯಾಯ ಅವರ ಹುಟ್ಟು ಹಬ್ಬವನ್ನು ಮಲ್ಲಾಪೂರ ಪಿ.ಜಿ ಪ.ಪಂ 10ನೇ ವಾರ್ಡಿನಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಜಿ.ಎಸ್.ರಜಪೂತ ಅವರು ಭಾವ ಚಿತ್ರಕ್ಕೆ ಪೂಜೆ ನೆರವೇರಿಸುವದರೊಂದಿಗೆ ರವಿವಾರದಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಬಸವರಾಜ ಹುದ್ದಾರ ಮಾತನಾಡಿ ಪಂಡಿತ ದೀನ ದಯಾಲ ಉಪಾದ್ಯಾಯರ ಜನಸಂಘದ ಸಂಸ್ಥಾಪಕರಾಗಿದ್ದರು. ಸಂಘಟನಾ ಚತುರರು, ಏಕಾತ್ಮ ಮಾನವವಾದದ ಪ್ರವರ್ತಕರಾಗಿದ್ದರು. ಭಾರತೀಯ ಜನತಾ ಪಾರ್ಟಿಗೆ ಅವರ ಕೊಡುಗೆ ಅಪಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯರಾದ ಎಸ್.ಎಚ್.ಗಿರೆಡ್ಡಿ, ಚಿರಾಕಲಿಶಾ ಮಕಾನದಾರ, ಪ.ಪಂ ಮಾಜಿ ಸದಸ್ಯರಾದ ಸಲೀಮ ಕಬ್ಬೂರ, ಅಪ್ಪಾಸಾಬ ಮುಲ್ಲಾ, ನವೀನ ಉಪ್ಪಾರ, ಜುಬೇರ ಡಾಂಗೆ, ನೂರಅಹ್ಮದ ಬೈರಕದಾರ ಸೇರಿದಂತೆ ಅನೇಕರು ಇದ್ದರು.