ಗೋಕಾಕ:ಭಾರತದ ಸಂವಿಧಾನ ಭಾವೈಕತೆಯ ಪ್ರತೀಕವಾಗಿದ್ದು, ಪ್ರತಿಯೊಬ್ಬರು ಅದನ್ನು ಗೌರವಿಸಬೇಕು : ಮೌಲಾನಾ ಬಶೀರೂಲ್ಲ ಹಕ್ಕ ಕಾಶಮಿ
ಭಾರತದ ಸಂವಿಧಾನ ಭಾವೈಕತೆಯ ಪ್ರತೀಕವಾಗಿದ್ದು, ಪ್ರತಿಯೊಬ್ಬರು ಅದನ್ನು ಗೌರವಿಸಬೇಕು : ಮೌಲಾನಾ ಬಶೀರೂಲ್ಲ ಹಕ್ಕ ಕಾಶಮಿ
ನಮ್ಮ ಬೆಳಗಾವಿ ಇ – ವಾರ್ತೆ,ಗೋಕಾಕ ಜ 26 :
ಭಾರತದ ಸಂವಿಧಾನ ಭಾವೈಕತೆಯ ಪ್ರತೀಕವಾಗಿದ್ದು, ಪ್ರತಿಯೊಬ್ಬರು ಅದನ್ನು ಗೌರವಿಸಬೇಕು ಎಂದು ಮೌಲಾನಾ ಬಶೀರೂಲ್ಲ ಹಕ್ಕ ಕಾಶಮಿ ಹೇಳಿದರು
ಬುಧವಾದಂದು 73ನೇ ಗಣರಾಜ್ಯೋತ್ಸವ ಅಂಗವಾಗಿ ನಗರದ ಹೊರವಲಯದ ಬಡವರಿಗೆ ಗೋಕಾಕ ಕುಟುಂಬದ ವತಿಯಿಂದ ಔಷಧಿ , ಬಟ್ಟೆ , ಹೊದಿಕೆ ಹಾಗೂ ಉಪಹಾರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ಭಾರತ ವಿವಿಧ ರಾಜ್ಯ ಹಾಗೂ ಭಾಷೆಗಳನ್ನು ಹೊಂದಿ ಭಾವೈಕತೆಯ ಛಾಪು ಮೂಡಿಸಿ ಇಡೀ ಜಗತ್ತಿನಗೆ ಇಂದು ಮಾದರಿಯಾಗಿ ಆ ದಿಸೆಯಲ್ಲಿ ನಾವೆಲ್ಲರೂ ಸಾಗಿ ಜಾತ್ಯಾತೀತವಾಗಿ ಬಲಿಷ್ಠ ಭಾರತವನ್ನು ನಿರ್ಮಿಸಲು ಮುಂದಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತಸಹಾಯಕ ಸುರೇಶ ಸನದಿ ಮಾತನಾಡಿ ಜಾರಕಿಹೊಳಿ ಸಹೋದರ ಸಹಕಾರದೊಂದಿಗೆ
ನಗರದ ಗೋಕಾಕ ಕುಟುಂಬ ಸಾಮಾಜಿಕ ಕಾರ್ಯ ಮಾಡುತ್ತಿರುವದು ಶ್ಲಾಘನೀಯವಾಗಿದೆ. ರಾಷ್ಟ್ರೀಯ ಹಬ್ಬದ ದಿನ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ಸಮಾಜದ ವಿವಿಧ ಮಜಲುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ, ಸಂಸ್ಥೆಗಳು ಸಹ ರಾಷ್ಟ್ರಿಯ ಹಬ್ಬಗಳಿಯೂ ಇಂತಹ ಸಮಾಜಿಕ ಕಾರ್ಯ ಮಾಡಲು ಮುಂದಾಗಬೇಕು ಎಂದು ಸಲಹೆ ಹೇಳಿದರು
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಸ್ಥಾಯಿ ಸಮಿತಿ ಚೇರಮನ ಕತಬುದ್ದೀನ ಗೋಕಾಕ, ಹಾಜಿ ಕುತಬುದ್ದಿನ ಬಸ್ಸಾಪೂರಿ, ಅಂಜುಮನ ಕಮಿಟಿ ಅಧ್ಯಕ್ಷ ಜಾವೇದ ಗೋಕಾಕ , ಇಸ್ಮಾಯಿಲ್ ಗೋಕಾಕ ,ಇಸ್ಮಾಯಿಲ್ ಜಮಾದಾರ, ಹಾಜಿ ಗಫಾರ ಕಾಗಜಿ, ಕಯ್ಯಾಮ ಖೈರದಿ ಸೇರಿದಂತೆ ನಗರಸಭೆ ಸದಸ್ಯರು ಉಪಸ್ಥಿತರಿದ್ದರು