ಗೋಕಾಕ:ಸಂಕಷ್ಟದಲ್ಲಿರುವ ಸಿಂಪಿ ಸಮಾಜ ಭಾಂಧವರಿಗೆ ಪರಿಹಾರ ಧನ ಘೋಷಣೆ ಮಾಡುವಂತೆ ಸಿಎಂ ಅವರಿಗೆ ಮನವಿ
ಸಂಕಷ್ಟದಲ್ಲಿರುವ ಸಿಂಪಿ ಸಮಾಜ ಭಾಂಧವರಿಗೆ ಪರಿಹಾರ ಧನ ಘೋಷಣೆ ಮಾಡುವಂತೆ ಸಿಎಂ ಅವರಿಗೆ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 7 :
ಕೂಲಿ ಕಾರ್ಮಿಕರಿಗೆ , ಅಟೋ ಚಾಲಕರಿಗೆ ಸೇರಿದಂತೆ ಇತರ ಕಾರ್ಮಿಕರಿಗೆ ಪರಿಹಾರ ಧನ ಘೋಷಣೆ ಮಾಡಿದಂತೆ ಸಿಂಪಿ ಸಮಾಜ ಭಾಂಧವರಿಗೂ ಕೂಡಾ ಪರಿಹಾರ ಧನ ಘೋಷಣೆ ಮಾಡುವಂತೆ ಸಿಂಪಿ ಸಮಾಜ ಭಾಂಧವರು ಗುರುವಾರದಂದು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು
ಕೊರೋನಾ ವೈರಸ ತಡೆಗಟ್ಟಲು ಜಾರಿಯಲ್ಲಿರುವ ಲಾಕಡೌನ ನಿಂದ ಸಿಂಪಿ ಸಮಾಜದ ಭಾಂಧವರು ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಸಿಂಪಿ ಸಮಾಜ ಟೇಲರಿಂಗ ಉದ್ಯೋಗವನ್ನೇ ನಂಬಿಕೊಂಡು ಬಂದಿದ್ದು ಪ್ರಸ್ತುತ ಈ ಜನ ಸಂಕಷ್ಟದಲ್ಲಿದ್ದಾರೆ.
ಅವರಿಗೂ ಕೂಡಾ ಪರಿಹಾರ ನೀಡಿ ಸಂಕಷ್ಟದಿಂದ ಪಾರುಮಾಡಲು ಸಿಂಪಿ ಸಮಾಜ ಭಾಂಧವರು ಮನವಿಯಲ್ಲಿ ವಿನಂತಿಸಿದ್ದಾರೆ
ಈ ಸಂದರ್ಭದಲ್ಲಿ ಸಿಂಪಿ ಸಮಾಜದ ಅಶೋಕ ಚಿಕ್ಕೊರ್ಡೆ ,ಮುಕುಂದ ಕಾಕಡೆ, ಬಸವರಾಜ ಚಿಂತಾಮನಿ, ರಾಮಚಂದ್ರ ಕಾಕಡೆ ಉಪಸ್ಥಿತರಿದ್ದರು.