RNI NO. KARKAN/2006/27779|Wednesday, January 28, 2026
You are here: Home » breaking news » ಗೋಕಾಕ:ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು 31ರೊಳಗಾಗಿ ಆಧಾರ ಸೀಡಿಂಗ್ ಮಾಡಿಕೊಳ್ಳಿ : ಆರ್.ಕೆ.ಬಿಸಿರೊಟ್ಟಿ

ಗೋಕಾಕ:ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು 31ರೊಳಗಾಗಿ ಆಧಾರ ಸೀಡಿಂಗ್ ಮಾಡಿಕೊಳ್ಳಿ : ಆರ್.ಕೆ.ಬಿಸಿರೊಟ್ಟಿ 

ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು 31ರೊಳಗಾಗಿ ಆಧಾರ ಸೀಡಿಂಗ್ ಮಾಡಿಕೊಳ್ಳಿ : ಆರ್.ಕೆ.ಬಿಸಿರೊಟ್ಟಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 23 :

 

2020/21 ಸಾಲಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ತಮ್ಮ ಆಧಾರ ಸಂಖ್ಯೆಯನ್ನು ಬ್ಯಾಂಕಿನ ಖಾತೆಯೊಂದಿಗೆ ಜನೇವರಿ 31ರೊಳಗಾಗಿ ಸೀಡಿಂಗ್ (NCPI MAPPING) ಮಾಡಿಕೊಳ್ಳಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾಧಿಕಾರಿ ಆರ್.ಕೆ.ಬಿಸಿರೊಟ್ಟಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಶಿಷ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ತಮ್ಮ ಖಾತೆಗಳಿಗೆ ಆಧಾರ ಸೀಡಿಂಗ್ ಮಾಡದೇ ಹೋದರೆ ತಮಗೆ ಮಂಜೂರಾದ ಶುಲ್ಕ ವಿನಾಯಿತಿ ಮೊತ್ತವನ್ನು ಖಾತೆಗಳಿಗೆ ಜಮೆ ಮಾಡಲು ಆಗುವದಿಲ್ಲ ಕಾರಣ ಆದಷ್ಟು ಬೇಗನೆ ಸೀಡಿಂಗ್ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದಸ ವಸತಿ ನಿಲಯಗಳಿಗೆ ಹಾಗೂ ಗೋಕಾಕ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಬೇಕೆಂದು ಆರ್.ಕೆ.ಬಿಸಿರೊಟ್ಟಿ ಅವರು ತಿಳಿಸಿದ್ದಾರೆ

Related posts: