RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಹಾಗೂ ರೈತರ ಮಕ್ಕಳಿಗೆ ಶಿಷ್ಯ ವೇತನದ ಲಾಭ ಪಡೆದುಕೊಳ್ಳಿ : ಎಂ ಎಂ ನಧಾಪ

ಗೋಕಾಕ:ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಹಾಗೂ ರೈತರ ಮಕ್ಕಳಿಗೆ ಶಿಷ್ಯ ವೇತನದ ಲಾಭ ಪಡೆದುಕೊಳ್ಳಿ : ಎಂ ಎಂ ನಧಾಪ 

ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಹಾಗೂ ರೈತರ ಮಕ್ಕಳಿಗೆ ಶಿಷ್ಯ ವೇತನದ ಲಾಭ ಪಡೆದುಕೊಳ್ಳಿ : ಎಂ ಎಂ ನಧಾಪ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 12 :

 
ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಹಾಗೂ ರೈತರ ಮಕ್ಕಳಿಗೆ ಶಿಷ್ಯ ವೇತನದ ಲಾಭ ಪಡೆದುಕೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಎಂ ಎಂ ನಧಾಪ ಕೋರಿದ್ದಾರೆ‌

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕರ್ನಾಟಕ ಸರಕಾರ ಕೃಷಿ ಇಲಾಖೆಯಿಂದ 2021-22 ಸಾಲಿನ ಶೈಕ್ಷಣಿಕ ವರ್ಷಕ್ಕೆ ರೈತರ ಮಕ್ಕಳಿಗೆ ಶಿಕ್ಷ್ಯ ವೇತನವನ್ನು ಪಿಯುಸಿ / ಐಟಿಐ/ ಡಿಪ್ಲೊಮಾ / ಬಿಎ/ ಬಿಕಾಂ/ ಬಿಎಸ್ ಇ ಇನ್ನೀತರ ಪದವಿ ಕೋರ್ಸಗಳನ್ನು, ಎಲ್.ಎಲ್‌.ಬಿ / ಪ್ಯಾರಾ ಮೆಡಿಕಲ್, ಬಿ‌ಫಾರ್ಮಾ , ನರ್ಸಿಂಗ್ ಇನ್ನೀತರೇ ವೃತ್ತಿಪರ ಕೋರ್ಸಗಳನ್ನು ಎಂಬಿಎಸ್ , ಬಿ.ಇ , ಬಿ.ಟೇಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ ಕಲಿಯುತ್ತಿರುವ ವಿದ್ಯಾರ್ಥಿ/ ವಿದ್ಯಾರ್ಥಿನೀಯರಿಗೆ ಡಿ.ಬಿ.ಟಿ ಮೂಲಕ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಶಿಷ್ಯ ವೇತನವನ್ನು ಜಮಾ ಮಾಡಲಾಗುವುದು. ಸದರಿ ಶಿಷ್ಯ ವೇತನ ಪಡೆಯಲು ಯಾವುದೇ ಆದಾಯ ಮೀತಿ ಇರುವುದಿಲ್ಲ ವಿದ್ಯಾರ್ಥಿ/ ಅವರ ತಂದೆ ತಾಯಿಯವರ ಹೆಸರಿನಲ್ಲಿ ಜಮೀನು ಇದ್ದರೆ ಸದರಿ ಶಿಷ್ಯ ವೇತನ ಪಡೆಯಲು ಅರ್ಹರಾಗಿರುತ್ತಾರೆ
ಕೃಷಿ ಇಲಾಖೆ ಎಲ್ಲಾ ಅಧಿಕಾರಿಗಳು ತಾಲ್ಲೂಕಿನ ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ನಧಾಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts: