ಗೋಕಾಕ:ರಸ್ತೆ, ಗಠಾರ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ
ರಸ್ತೆ, ಗಠಾರ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 16 :
ನಗರದ ವಾರ್ಡನಂ 25 ರಲ್ಲಿ ನಗರಸಭೆಯಿಂದ ಮಂಜೂರಾದ 1 ಕೋಟಿ ರೂ ವೆಚ್ಚದಲ್ಲಿ ರಸ್ತೆ, ಗಠಾರ ಹಾಗೂ ಶೌಚಾಲಯ ನಿರ್ಮಾಣದ ಕಾಮಗಾರಿಗೆ ಗುರುವಾರದಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಮಾಜಿ ಅಧ್ಯಕ್ಷ ತಳದಪ್ಪ ಅಮ್ಮಣಗಿ, ಪೌರಾಯುಕ್ತ ಶಿವಾನಂದ ಹಿರೇಮಠ, ಮುಖಂಡರುಗಳಾದ ಕಾಡಪ್ಪ ಮೇಸ್ತ್ರಿ, ಅಶೋಕ ಲಗಮಪ್ಪಗೋಳ, ಅಶೋಕ ಮೇಸ್ತ್ರಿ, ಜಾನಪ್ಪ ಕರೆಮ್ಮನವರ , ಬಸವರಾಜ ಮೇಸ್ತ್ರಿ ಹಾಗೂ ನಗರಸಭಾ ಸದಸ್ಯರು ಸೇರಿದಂತೆ ಅನೇಕರು ಇದ್ದರು.