ಮೂಡಲಗಿ :ಹಾಲುಮತ ಮಹಾಸಭಾ ದಿಂದ ಅರವಿಂದ ದಳವಾಯಿ ಅವರಿಗೆ ಬೆಂಬಲ : ಮಾರುತಿ ಮರಡಿ

ಹಾಲುಮತ ಮಹಾಸಭಾ ದಿಂದ ಅರವಿಂದ ದಳವಾಯಿ ಅವರಿಗೆ ಬೆಂಬಲ : ಮಾರುತಿ ಮರಡಿ
ಘಟಪ್ರಭಾ ಏ 30 : ಮೂಡಲಗಿ ತಾಲೂಕಿನ ಅರಭಾವಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಅರವಿಂದ ದಳವಾಯಿ ಅವರಿಗೆ ಹಾಲುಮತ ಮಹಾಸಭಾ ತಮ್ಮ ಬೆಂಬಲ ಘೋಷಿಸಿದೆ.
ಈ ಕುರಿತು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ರಾಜ್ಯ ಸಂಚಾಲಕ ಮಾರುತಿ ಮರಡಿ ಮೌರ್ಯ, ಕರ್ನಾಟಕ ರಾಜ್ಯದ ಆಡಳಿತದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜು ಅರಸುರವರ ನಂತರ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಘೋಷಣೆಯನ್ನು ಅನುಷ್ಠಾನಕ್ಕೆ ತಂದು, ರಾಷ್ಟ್ರಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿರುವ ದಾಖಲೆಯ 5 ವರ್ಷಗಳನ್ನು ಪೂರೈಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ಮತ್ತೊಮ್ಮೆ ಕರ್ನಾಟಕದಲ್ಲಿ ಮುಂದುವರಿಯಲು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಬೇಕಾಗಿರುವದರಿಂದ, ಬೆಳಗಾವಿ ಜಿಲ್ಲೆಯ ಅರಭಾವಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಮಾಜಿ ಕೆ.ಎ.ಎಸ್ ಅಧಿಕಾರಿ ಕುರುಬ ಸಮಾಜದ ಮುಖಂಡರಾದ ಅರವಿಂದ ದಳವಾಯಿಯವರಿಗೆ ಅತ್ಯಧಿಕ ಮತಗಳನ್ನು ನೀಡಿ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕೆಂಬ ಸದುದ್ದೇಶದಿಂದ ಮೂಡಲಗಿ ತಾಲೂಕು ಹಾಲುಮತ ಮಹಾಸÀಭಾ ಬೆಂಬಲ ಘೋಷಿಸಿ, ಅವರ ಗೆಲುವಿಗೆ ಶ್ರಮಿಸುದಾಗಿ ತಿಳಿಸಿದೆ.
ಅರಭಾವಿ ಮತಕ್ಷೇತ್ರದಲ್ಲಿ ಕುರುಬ ಸಮುದಾಯದ ಸುಮಾರು 46 ಸಾವಿರಕ್ಕೂ ಅಧಿಕ ಮತದಾರರಿದ್ದು, ಎಲ್ಲರೂ ಸಿದ್ದರಾಮಯ್ಯನವರ ಕೈ ಬಲಪಡಿಸುವ ಸದುದ್ದೇಶಕ್ಕೆ ಕೈಜೋಡಿಸಬೇಕೆಂದು ಹಾಲುಮತ ಮಹಾಸಭಾ ರಾಜ್ಯ ಸಂಚಾಲಕ ಮಾರುತಿ ಮರಡಿ ಮೌರ್ಯ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಡಿ.ಡಿ.ಟೋಪೋಜಿ, ಜಿಲ್ಲಾ ಸಂಚಾಲಕರಾದ ಶ್ರೀ ವೀರಣ್ಣ ಮೋಡಿ, ರಾಮೋಜಿ ಮಾಳಗಿ, ಮೂಡಲಗಿ ತಾಲ್ಲೂಕು ಸಮಿತಿಯ ಅಧ್ಯಕ್ಷರಾದ ಗಣೇಶ್ ಚಿಪ್ಪಲಕಟ್ಟಿ, ಹನುಮಂತ ಪೆಟ್ಲೂರು, ಸಂತೋಷ್ ಕಮತಿ, ತಾಲೂಕ ಪ್ರದಾನ ಕಾರ್ಯದರ್ಶಿ ವಿನಾಯಕ ಕಟ್ಟಿಕಾರ, ಪರಮಾನಂದ ತುಬಾಕಿ, ಸಿದ್ದು ಮರಡಿ ಸೇರಿದಂತೆ ಕುರುಬ ಸಮಾಜದ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.