RNI NO. KARKAN/2006/27779|Thursday, April 25, 2024
You are here: Home » breaking news » ಬೆಳಗಾವಿ:ಪಾಲಿಕೆ ಚುನಾವಣೆ: ಪಕ್ಷಗಳ ಅಬ್ಬರದ ಪ್ರಚಾರದ ಮಧ್ಯೆ ಎಡವಿದ ಹೋರಾಟಗಾರರು

ಬೆಳಗಾವಿ:ಪಾಲಿಕೆ ಚುನಾವಣೆ: ಪಕ್ಷಗಳ ಅಬ್ಬರದ ಪ್ರಚಾರದ ಮಧ್ಯೆ ಎಡವಿದ ಹೋರಾಟಗಾರರು 

ಪಾಲಿಕೆ ಚುನಾವಣೆ: ಪಕ್ಷಗಳ ಅಬ್ಬರದ ಪ್ರಚಾರದ  ಮಧ್ಯೆ ಎಡವಿದ ಹೋರಾಟಗಾರರು
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಸೆ 1 :

 

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಅಬ್ಬರ ಜೋರಾಗಿ ನಡೆದಿದ್ದು, ಮಂಗಳವಾರ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿತ್ತು. ಈ ಹಿಂದೆ ಭಾಷಾ ಆಧಾರದ ಮೇಲೆ ನಡೆಯುತ್ತಿದ್ದ ಈ ಚುನಾವಣೆ ಬೆಳಗಾವಿ ಇತಿಹಾಸದಲ್ಲೇ ಪ್ರಥಮ ಭಾರಿಗೆ ಎಂಬಂತೆ ಈ ಸಾರಿ ಪಕ್ಷದ ಚಿಹ್ನೆಗಳ ಮೇಲೆ ಅಭ್ಯರ್ಥಿಗಳು ಚುನಾವಣೆಗೆ ಇಳಿದಿದ್ದು ಹೊಸ ಪರಂಪರೆಗೆ ನಾಂದಿ ಹಾಡಿದೆ.
ಕನ್ನಡ ಮತ್ತು ಮರಾಠಿ ಭಾಷಿಕರ ಮಧ್ಯೆ ವೇದಿಕೆ ಯಾಗುತ್ತಿದ್ದ ಪಾಲಿಕೆ ಚುನಾವಣೆ ಈ ಬಾರಿ ಇಬ್ಬರೂ ಭಾಷಿಕ ಮುಖಂಡರಿಗೆ ಸೈಡ್ ಲೈನ ಮಾಡಿದಂತೆ ಮಾಡಿದೆ ಇದು ಬೆಳಗಾವಿ ಸಾರ್ವಜನಿಕರಿಗೆ ಕೊಂಚ ಸಮಾಧಾನ ತರುವ ವಿಷಯವಾಗಿ ಪರಿಣಮಿಸಿದೆ. ಮೊದಲೆಲ್ಲ ಬರಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರ ಪ್ರಚಾರಕ್ಕೆ ಸೀಮಿತವಾಗಿರುತ್ತಿದ್ದ ಬೆಳಗಾವಿ ಪಾಲಿಕೆ ಚುನಾವಣಾ ಈ ಬಾರಿ ಘಟಾನುಘಟಿ ರಾಜಕೀಯ ನಾಯಕರು ಬೆಳಗಾವಿಯ ಗಲ್ಲಿಗಳಲ್ಲಿ ಬಂದು ಪ್ರಚಾರ ಮಾಡುವ ಹಾಗೆ ಮಾಡಿದೆ. ರಾಜಕೀಯ ಪಕ್ಷಗಳು ಚಿಹ್ನೆಗಳ ಮೇಲೆ ತಮ್ಮ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿರುವ ನಿರ್ಧಾರ ಕನ್ನಡ ಮತ್ತು ಮರಾಠಿ ಮುಖಂಡರಿಗೆ ಕೆಲಸ ಇಲ್ಲದಂತೆ ಮಾಡಿದೆ.

ಬೆಳಗಾವಿ ಪಾಲಿಕೆ ವಿಷಯ ಬಂದಾಗ ಎಂಇಎಸ್ ಹಾಗೂ ಕನ್ನಡಪರ ಹೋರಾಟಗಾರರು ಅದನ್ನು ಪ್ರತಿಷ್ಠೆಯಾಗಿ ತಗೆದುಕೊಂಡು ಪರ ಮತ್ತು ವಿರೋಧ ಹೋರಾಟಕ್ಕೆ ಇಳಿಯುತ್ತಿರುವುದು ಇತಿಹಾಸ. ಬೆಳಗಾವಿಯನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಸುವ ಠರಾವು ತಗೆದುಕೊಂಡ ಸಂದರ್ಭವಾಗಲಿ, ಮಹಾನಗರ ಪಾಲಿಕೆ ಮೇಲೆ ಭಗವಾ ಧ್ವಜ ಹಾರಾಟ ಸಂಧರ್ಭವಾಗಲಿ, ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ಸಿಗಬೇಕು ಎಂಬ ಸಂದರ್ಭವಾಗಲಿ ಮೊದಲು ಬಲವಾದ ವಿರೋಧ ವ್ಯಕ್ತಪಡಿಸಿ ಹೋರಾಟ ಮಾಡಿ ಎಂಇಎಸ್ ಕನಸಿಗೆ ತಣ್ಣನೀರು ಎರಚುತ್ತಾ ಬಂದು ಎಲ್ಲಾ ಹೋರಾಟಗಳಲ್ಲಿ ಜಯ ಪಡೆದು ಪಾಲಿಕೆಯಲ್ಲಿಯೂ ಸಹ ಎಂಇಎಸ್ ಸೋಕ್ಕು ಅಡಗಿಸಿ, ಮರಾಠಿ ಪುಂಡರ ಬೆನ್ನುಮುಳೆಯನ್ನೆ ಮುರಿದ ಕನ್ನಡಪರ ಹೋರಾಟಗಾರರು ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಬರಿ ಎಂಇಎಸ್ ಗೆ ಸವಾಲುಹಾಕಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಎಚ್ಚರಿಕೆ ನೀಡಲು ಮಾತ್ರ ಸೀಮಿತವಾದರೆ ? ಎಂಬ ಪ್ರಶ್ನೆ ಜಿಲ್ಲೆಯ ಸಾವಿರಾರು ಕನ್ನಡಿಗರಲ್ಲಿ ಹುಟ್ಟು ಹಾಕಿದೆ.
ಕನ್ನಡ ಪರ ಅಭ್ಯರ್ಥಿ ಎನ್ನುವ , ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂದು ಅಬ್ಬರ ಮಾಡುವ ಕನ್ನಡಪರ ಹೋರಾಟಗಾರರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಎಂಟ್ರಿಯಿಂದ ದಿಕ್ಕೂ ತೋಚದಾಗಿದ್ದಾರೆ . ಇದಕ್ಕೆ ಬಹುಮುಖ್ಯವಾದ ಕಾರಣ ವೆಂದರೆ ಕನ್ನಡಪರ ಹೋರಾಟದ ಪ್ರಮುಖರೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ಬೆಂಬಲಿಗರಾಗಿವುದು ಎಂದು ಶಂಕಿಸಲಾಗುತ್ತಿದೆ. ಇದೇ ಕಾರಣದಿಂದ ಕನ್ನಡಪರ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುವ ಗೋಜಿಗೆ ಹೋಗದೆ ಬರಿ ಒಂದೆಡೆ ಸೇರಿ ಪಾಲಿಕೆ ಚುನಾವಣೆ ನಂತರ ಅಧಿಕಾರ ಹಿಡಿಯಲು ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಎಂಇಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿ ಸುಮ್ಮನಾಗಿರುವ ಹೋರಾಟಗಾರರು . ಧೈರ್ಯದಿಂದ ಪಾಲಿಕೆಯ ಎಲ್ಲ 58 ವಾರ್ಡಗಳಲ್ಲಿ ಕನ್ನಡಪರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಪ್ರತೇಕವಾಗಿ ಸಭೆ, ಸಮಾರಂಭ ಮಾಡಿ ತಮ್ಮ ಚುನಾವಣೆ ಪ್ರಣಾಳಿಕೆಯನ್ನು ಹೊರ ತಂದು ಎಂಇಎಸ್ ಹಾಗೂ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೋಡೆದರೆ ಗಡಿ ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲ ಇಡೀ ರಾಜ್ಯದಿಂದ ಎಲ್ಲ ಕನ್ನಡಿಗರು ಬೆಳಗಾವಿಗೆ ಬಂದು ಕನ್ನಡಪರ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದರು. ಆದರ ಆ ಧೈರ್ಯ ಯಾಕೋ ಕನ್ನಡ ಪರ ಹೋರಾಟಗಾರರು ಎನಿಸಿಕೊಳ್ಳುವ ನಾಯಕರು ಮಾಡಲಿಲ್ಲ ಇದಕ್ಕೆ ಕಾರಣ ನಾವೆಲ್ಲರೂ ಹುಡಕಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಅದೇನೇ ಇರಲಿ ಸೆಪ್ಟೆಂಬರ್ 3 ರಂದು ಬೆಳಗಾವಿ ಮಹಿಳಾ ನಗರ ಪಾಲಿಕೆ ಎಲ್ಲಾ 58 ವಾರ್ಡಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 358 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಬಿಜೆಪಿ 55 ವಾರ್ಡಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿದರೆ, ಕಾಂಗ್ರೆಸ್ 45 ವಾರ್ಡಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ, ಜೆಡಿಎಸ್ 11 , ಆಫ 27 ಹಾಗೂ ಎಐಎಂಐಎಂ 6 ವಾರ್ಡಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಇನ್ನುಳಿದ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ವರ್ಧಿಸಿದ್ದರೂ ಸಹ ಈ ಅಭ್ಯರ್ಥಿಗಳು ಕನ್ನಡಪರ ಅಭ್ಯರ್ಥಿಗಳು ಎಂದು ಕನ್ನಡಪರ ಹೋರಾಟಗಾರರು ವಾದ ಮಾಡಿದರೆ ಅದರಲ್ಲಿ ಬಹುಪಾಲು ಎಂಇಎಸ್ ಅಭ್ಯರ್ಥಿಗಳು ಎಂದು ಪುಂಡ ಎಂಇಎಸ್ ನಾಯಕರು ಜಂಬ ಕೊಚ್ಚಿಕೊಳ್ಳುತ್ತಿದ್ದಾರೆ. ಇದು ಯಾವ ಪುರುಷಾರ್ಥಕ್ಕೆ ಎಂಬುವುದು ಬೆಳಗಾವಿ ಮಹಾನಗರದ ಮತದಾರರಿಗೆ ಹಾಗೂ ಬೆಳಗಾವಿ ಜಿಲ್ಲೆಯ ಸಾರ್ವಜನಿಕರಿಗೆ ತಿಳಿಯದಾಗಿದೆ.

ಚುನಾವಣೆ ನಂತರ ಇದು ಆಗಬೇಕು, ಅದು ಆಗಬೇಕು , ಇದು ಬೇಕು , ಅದು ಬೇಕು ಎಂದು ಹಾರಾಡುವ ನಾಯಕರು ಚುನಾವಣೆ ಸಂದರ್ಭದಲ್ಲಿ ಎಲ್ಲ 58 ವಾರ್ಡಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿ ತಮ್ಮದೇ ಆದ ಪ್ರಣಾಳಿಕೆ ಹೊರಡಿಸಿ ತಾವು ಗೆದ್ದರೆ ಮುಂದೆ ಬೆಳಗಾವಿ ಮಹಾನಗರವನ್ನು ಯಾವ ರೀತಿ ಅಭಿವೃದ್ಧಿ ಪಡೆಸುತ್ತೇವೆಂಬ ವಿಚಾರಗಳನ್ನು ಮತದಾರರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸುವ ಕಾರ್ಯದಿಂದ ಹಿಂದೆ ಸರಿದು ಎಡವಿದರಾ ? ಎಂಬ ಪ್ರಶ್ನೆ ಈಗ ಚರ್ಚೆಗೆ ಗ್ರಾಸ ಒದಗಿಸಿದೆ .

ಒಟ್ಟಾರೆಯಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮಧ್ಯೆ ನೇರ ಹಣಾಹಣಿಯಾಗಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಕನ್ನಡ ಮತ್ತು ಮರಾಠಿ ಭಾಷಿಕ ಸಮಸ್ಯೆಗೆ ಕೊನೆ ಹಾಡಲು ವೇದಿಕೆ ಆಯಿತು ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಿದ್ದಾರೆ. ಬರೀ ಭಾಷೆ ಹಾಗೂ ಗಡಿ ವಿಷಯವಾಗಿ ನಡೆಯುತ್ತಿದ್ದ ಚುನಾವಣೆ ಈ ಬಾರಿ ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಹಾಣಾಹಣಿಗೆ ವೇದಿಕೆಯಾಗಿದ್ದೆ . ಇದರಿಂದ ಕನ್ನಡ ಹೋರಾಟಗಾರಿಗೆ ಮತ್ತು ಮರಾಠಿ ಪುಂಡರಿಗೆ ಕೆಲಸವಿಲ್ಲದಂತಾಗಿದೆ ಇರ್ವ ಭಾಷಾ ಮುಖಂಡರು ಒಂದಿಲ್ಲೊಂದು ಪಕ್ಷದ ನಾಯಕರೊಂದಿಗೆ ಗುರುತಿಸಿಕೊಂಡಿರುವ ಪರಿಣಾಮ ರಾಜಕೀಯ ನಾಯಕರಿಗೆ ಸೆಡ್ಡು ಹೋಡೆಯುವಲ್ಲಿ ಹಿಂದೆಟ್ಟು ಹಾಕಿ ಅವರು ನಮ್ಮ ಅಭ್ಯರ್ಥಿಗಳು ಇವರು ನಮ್ಮ ಅಭ್ಯರ್ಥಿಗಳು ಎಂದು ಹೇಳುತ್ತಾ ಕಾಲ ಹರಣ ಮಾಡಿದರೆ ಇತ್ತ ರಾಷ್ಟ್ರೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಗಲ್ಲಿ , ಗಲ್ಲಿಗಳಲ್ಲಿ ಭರದ ಪ್ರಚಾರ ಮಾಡುವಲ್ಲಿ ನಿರತರಾಗಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪಾಲಿಕೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತಗೆದುಕೊಂಡ ಕಾರ್ಯಪ್ರವೃತ್ತವಾದರೆ ಇನ್ನುಳಿದ ಅಭ್ಯರ್ಥಿಗಳ ತಮ್ಮ ತಮ್ಮ ಶೈಲಿಯಲ್ಲಿ ಪ್ರಚಾರ ಮಾಡಿ ಕೊನೆ ಪ್ರಯತ್ನ ನಡೆಸಿವೆ ಅಲ್ಲಿ ನಡೆದ ಹಾಗೂ ನಡೆಯುತ್ತಿರುವ ಸ್ವಷ್ಟ ಚಿತ್ರಣ ಪರಿಚಯಿಸುವ ಒಂದು ಸಣ್ಣ ಪ್ರಯತ್ನ ಇದ್ದಾಗಿತ್ತು ಪಾಲಿಕೆ ಚುನಾವಣೆ ಮೇಲೆ ಬರೆದಿರುವ ಈ ನನ್ನ ಪುಟ್ಟ ಲೇಖನ ಕೆಲವರಿಗೆ ಇಷ್ಟವಾಗಬಹುದು , ಕೆಲವರಿಗೆ ಕಷ್ಟವಾಗಬಹುದು ಆದರೆ ಇದ್ದುದು ಇದ್ದಹಾಗೆ ಬರೆಯುವ ಜಾಯಮಾನ ನನ್ನದು ಎಲ್ಲರೂ ಶುಭವಾಗಲಿ..

Related posts: