ಗೋಕಾಕ:17 ವರ್ಷದಲ್ಲಿ ಮೊದಲ ಬಾರಿ ಜಾರಕಿಹೊಳಿ ಸಹೋದರರ ಕೈತಪ್ಪಿದ ಮಂತ್ರಿ ಗದ್ದುಗೆ :
17 ವರ್ಷದಲ್ಲಿ ಮೊದಲ ಬಾರಿ ಜಾರಕಿಹೊಳಿ ಸಹೋದರರ ಕೈತಪ್ಪಿದ ಮಂತ್ರಿ ಗದ್ದುಗೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 4 :
ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರಕಾರ ಇರಲಿ ಬೆಳಗಾವಿಯ ಸಾವಕಾರ ಜಾರಕಿಹೊಳಿ ಸಹೋದರರಿಗೆ ಸಚಿವ ಸ್ಥಾನ ಪಕ್ಕಾ ದೊರೆತೆ, ದೊರೆಯುತ್ತಿತ್ತು ಆದರೆ ಬುಧವಾರದಂದು ರಾಜಭವನದಲ್ಲಿ ನಡೆದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಸಚಿವ ಸಂಪುಟದಲ್ಲಿ ಬಿಜೆಪಿಯ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಹಿರಿಯ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಯಾವುದೇ ಸ್ಥಾನ ದೊರೆತ್ತಿಲ್ಲ.
ಸನ್ 2004 ರಿಂದ ಇಲ್ಲಿಯವರೆಗೆ ಯಾವುದೇ ಸರಕಾರ ವಿರಲಿ, ಜಾರಕಿಹೊಳಿ ಸಹೋದರರಲ್ಲಿ ಒಬ್ಬರಾದರೂ ಸಚಿವರಾಗಿ ಅಧಿಕಾರ ವಹಿಸಕೊಂಡಿದ್ದರು, ಆದರೆ ಇಂದು ನಡೆದ ಹೊಸ ಸಂಪುಟದಲ್ಲಿ , ಸಿಡಿ ಕೇಸನಲ್ಲಿ ತನಿಖೆ ಎದುರಿಸುತ್ತಿರುವ ಹಿರಿಯ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸ್ಥಾನ ದೊರೆಯಲ್ಲಿ , ಇದಕ್ಕೆ ಪೂರಕವಾಗಿ ಅರಬಾಂವಿ ಶಾಸಕ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಮಾಡಿ ಜಲಸಂಪನ್ಮೂಲ ಖಾತೆಯನ್ನೇ ನೀಡುತ್ತಾರೆ ಎಂಬ ಸುದ್ದಿಗಳು ಹರಿದಾಡಿದರು ಸಹ ಇಂದು ಆದ್ಯಾವ ಸುದ್ದಿಗಳು ಸಫಲವಾಗಲಿಲ್ಲ ಇದರಿಂದ ಕಳೆದ 17 ವರ್ಷಗಳಿಂದ ಸತತವಾಗಿ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆಯುತ್ತಿದ್ದ ಜಾರಕಿಹೊಳಿ ಸಹೋದರರಿಗೆ ಈ ಬಾರಿ ಮಂತ್ರಿ ಆಗುವ ಭಾಗ್ಯ ದೊರೆತಿಲ್ಲದಿರುವುದು ಗೋಕಾಕ ಮತ್ತು ಅರಭಾವಿ ಕ್ರೇತ್ರದ ಜನರಲ್ಲಿ ಕೊಂಚ ನಿರಾಶೆ ಉಂಟು ಮಾಡಿದೆ.