RNI NO. KARKAN/2006/27779|Wednesday, September 18, 2024
You are here: Home » breaking news » ಗೋಕಾಕ:ಸಾಮಾಜಿಕ ಜಾಲತಾಣಗಳಲ್ಲಿ ಶಾಲಾ ಡೈಸ್ ಹಾಗೂ ವಿಳಾಸ ಹಾಕಿ ಮೋಸ ಮಾಡಲು ಯತ್ನ : ಬಿಇಒ ಜಿ.ಬಿ.ಬಳಗಾರ ಎಚ್ಚರಿಕೆ

ಗೋಕಾಕ:ಸಾಮಾಜಿಕ ಜಾಲತಾಣಗಳಲ್ಲಿ ಶಾಲಾ ಡೈಸ್ ಹಾಗೂ ವಿಳಾಸ ಹಾಕಿ ಮೋಸ ಮಾಡಲು ಯತ್ನ : ಬಿಇಒ ಜಿ.ಬಿ.ಬಳಗಾರ ಎಚ್ಚರಿಕೆ 

ಸಾಮಾಜಿಕ ಜಾಲತಾಣಗಳಲ್ಲಿ ಶಾಲಾ ಡೈಸ್ ಹಾಗೂ ವಿಳಾಸ ಹಾಕಿ ಮೋಸ ಮಾಡಲು ಯತ್ನ : ಬಿಇಒ ಜಿ.ಬಿ.ಬಳಗಾರ ಎಚ್ಚರಿಕೆ

ಗೋಕಾಕ ಅ 9 : ಶಿಕ್ಷಣ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿ ಇದೆ ಎಂದು ನಂಬಿಕೆ ಬರುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗೋಕಾಕ ವಲಯಗಳ ಶಾಲಾ ಡೈಸ್ ಹಾಗೂ ವಿಳಾಸ ಹಾಕಿ ನೇಮಕಾತಿ ಮಾಡಿಕೊಳ್ಳುವ ಸುಳ್ಳು ಭರವಸೆ ನೀಡಿ ಹಣ ವಸೂಲು ಮಾಡುವ ಪ್ರಯತ್ನ ನಡೆದಿದ್ದು, ಯಾವತ್ತು ಸಾರ್ವಜನಿಕರು ಮತ್ತು ಉದ್ಯೋಗಾಕಾಂಕ್ಷಿಗಳು ಇಂತಹ ಪೋಸ್ಟ್ ಗಳಿಗೆ ಮೊರೆ ಹೋಗಬಾರದು ಎಂದು ಗೋಕಾಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಎಚ್ಚರಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗೋಕಾಕ ವಲಯದಲ್ಲಿ ಇಂತಹಾ ಯಾವುದೇ ರೀತಿಯ ಪ್ರಸ್ತಾವನೆ ಇರುವುದಿಲ್ಲ ಯಾರೋ ಕಿಡಿಗೇಡಿಗಳು ಗೋಕಾಕ ವಲಯದ ಕನಸಗೇರಿ, ಬೆನಚಿನ್ನಮರಡಿ,ಖನಗಾವ,ಕೊಳವಿ, ಮಕ್ಕಳಗೇರಿ ಮತ್ತು ಗೋಕಾಕ ನಗರದ ವಾರ್ಡ್ ನಂ 1 ರ ಶಾಲೆಯ ಹೆಸರುಗಳನ್ನು ಪೋಸ್ಟ್ ಮಾಡಿ ಅಥವಾ ಸಂದೇಶ ಕಳುಹಿಸಿ
ಸಾರ್ವಜನಿಕರನ್ನು ವಂಚಿಸಲು ಸುಳ್ಳು ಹೇಳುತ್ತಿದ್ದಾರೆ.ಕಾರಣ ಸಾರ್ವಜನಿಕರು ಯಾವುದೇ ಕಾರಣಕ್ಕೂ ಯಾರಿಗೂ ಹಣ ನೀಡಿ ಮೋಸ ಹೋಗಬಾರದು ಅಂತವರು ನಿಮಗೆ ಸಿಕ್ಕರೆ ಸಮೀಪದ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ಅಥವಾ ನಮ್ಮ ಗಮನಕ್ಕೆ ತಂದರೆ ಅಂಥವರ ಮೇಲೆ ವಂಚನೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಶಿಕ್ಷಣಾಧಿಕಾರಿ ಜಿ.ಬಿ. ಬಳಗಾರ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

Related posts: