RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ರೋಹಿತ್ ಪಾಟೀಲ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಗೋಕಾಕ:ರೋಹಿತ್ ಪಾಟೀಲ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ 

ರೋಹಿತ್ ಪಾಟೀಲ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು, 28 :

 

ನಗರದ ಮುಖ್ಯ ರಸ್ತೆಯಲ್ಲಿರುವ ಶ್ರೀ ದ್ಯಾಮವ್ವಾ ದೇವಿ ಗುಡಿ ಹತ್ತಿರ ಓರ್ವ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ 7 ಜನ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.
ಮೃತ ರೋಹಿತ ರಾಜು ಪಾಟೀಲ ಎಂಬ ಯುವಕನನ್ನು ಹಿಂದಿನ ದ್ವೇಶದಿಂದ ದಿನಾಂಕ 24//09/2017 ರಂದು ರಾತರಿ 10-15 ಕ್ಕೆ ಶ್ರೀ ದ್ಯಾಮವ್ವನ ಗುಡಿ ಹತ್ತಿರ 1) ಮಲ್ಲಿಕಾರ್ಜುನ ಅಲಿಯಾಸ್ ಬುಂಯಿ ಮಲಿಕಯ್ಯಾ ತಂದೆ ಬಾಳಪ್ಪಾ ಭಜಂತ್ರಿ 2) ಅರ್ಜುನ ಗಣಪತಿ ಚಿಕ್ಕೋರ್ಡೆ 3) ಪರಸು ಕೇಟಾ ಪರಸು ಅಲಿಯಾಸ್ ಪ್ರಕಾಶ ತಂದೆ ಹನಮಂತ ಖಾನಪ್ಪನವರ 4) ವಿಜಯ ಜಗದೀಶ ಶೀಲವಂತ 5) ಪರಶುರಾಮ ರಾಮಸಿದ್ಧ ಶಿವನಪ್ಪಗೋಳ ಇವರೆಲ್ಲರೂ ಸೇರಿ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಕಾರಿನಲ್ಲಿ ಬಂದು ಇದಲ್ಲದೇ 1) ಕುಮಾರ ಕುಮ್ಯಾ ತಂದೆ ತಿಮ್ಮು ಸನದಿ 2) ಶ್ರೀಧರ ಬಾಳಪ್ಪಾ ಕಬ್ಬೂರ 3) ಸಾಯಿನಾಥ ತಂದೆ ರಾಮಪ್ಪಾ ಅಲಿಯಾಸ್ ರಾಮು ರೇವಣಕರ ಹಾಗೂ ಅಪ್ರಾಪ್ತ ರತನ ಅನೀಲ ಪಾಟೀಲ ಇವರೆಲ್ಲರೂ ಕೂಡಿಕೊಂಡು ನಿಂತಾಗ ದ್ವಿಚಕ್ರ ವಾಹನ ಮೇಲೆ ರೋಹಿತ ರಾಜು ಪಾಟೀಲ, ಅಕ್ಷಯ ಘೋರ್ಪಡೆ ಹಾಗೂ ರಾಹುಲ್ ಎಂಟಗೌಡರ ಬಂದಾಗ ಕಣ್ಣಲ್ಲಿ ಖಾರದ ಪುಡಿ ಎರಚಿ ಜಂಬೆ ಹಾಗೂ ತಲವಾರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಲ್ಲದೇ ಅಕ್ಷಯ ಘೋರ್ಪಡೆ ಹಾಗೂ ರಾಹುಲ ಎಂಟಗೌಡರ ಈತನಿಗೆ ಹೊಡಿ ಬಡಿ ಮಾಡಿ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದರು.
ಈ ಬಗ್ಗೆ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಆಗಿನ ಸಿಪಿಐ ಎಮ್.ಎಸ್.ತಾನಪ್ಪಗೋಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಗೋಕಾಕದ 12ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು 7 ಜನ ಆರೋಪಿತರಾದ ಮಲ್ಲಿಕಾರ್ಜುನ ಅಲಿಯಾಸ್ ಬುಂಯಿ ಮಲಿಕಯ್ಯಾ ತಂದೆ ಬಾಳಪ್ಪಾ ಭಜಂತ್ರಿ, ಅರ್ಜುನ ಗಣಪತಿ ಚಿಕ್ಕೋರ್ಡೆ, ಕುಮಾರ ಕುಮ್ಯಾ ತಂದೆ ತಿಮ್ಮು ಸನದಿ, ಪರಸು ಕೇಟಾ ಪರಸು ಅಲಿಯಾಸ್ ಪ್ರಕಾಶ ತಂದೆ ಹನಮಂತ ಖಾನಪ್ಪನವರ, ವಿಜಯ ಜಗದೀಶ ಶೀಲವಂತ, ಪರಶುರಾಮ ರಾಮಸಿದ್ಧ ಶಿವನಪ್ಪಗೋಳ, ಶ್ರೀಧರ ಬಾಳಪ್ಪಾ ಕಬ್ಬೂರ ಇವರ ಮೇಲಿನ ಆರೋಪ ಸಿದ್ಧವಾಗಿದ್ದರಿಂದ ಎಲ್ಲರಿಗೂ ಜೀವಾವಧಿ ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ.
ಇದರಲ್ಲಿ ಇಬ್ಬರು ಆರೋಪಿತರಾದ ಅನೀಲ ರತನ ಪಾಟೀಲ ಮತ್ತು ಸಾಯಿನಾಥ ರೇವನಕರ ಇವರು ಅಪ್ರಾಪ್ತರಿದ್ದ ಮೂಲಕ ಅವರ ಮೇಲಿನ ವಿಚಾರಣೆಗಾಗಿ ಬೆಳಗಾವಿ ಬಾಲ ನ್ಯಾಯ ಮಂಡಳಿಗೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರಾಜಮಹೇಂದ್ರ ಜಿ. ಕಿರಣಗಿ ಅವರು ವಕಾಲತ್ತು ವಹಿಸಿದ್ದರು.

Related posts: