ಗೋಕಾಕ:ಚಿಕ್ಕೋಳಿ ಸೇತುವೆ ಜಲಾವೃತ : ಸ್ಥಳಕ್ಕೆ ತಹಶೀಲ್ದಾರ ಭೇಟಿ ಪರಿಶೀಲನೆ : ಜೀವದ ಹಂಗು ತೊರೆದು ಸಂಚರಿಸುತ್ತಿರುವ ಜನರು
ಚಿಕ್ಕೋಳಿ ಸೇತುವೆ ಜಲಾವೃತ : ಸ್ಥಳಕ್ಕೆ ತಹಶೀಲ್ದಾರ ಭೇಟಿ ಪರಿಶೀಲನೆ : ಜೀವದ ಹಂಗು ತೊರೆದು ಸಂಚರಿಸುತ್ತಿರುವ ಜನರು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 23 :
ಕಳೆದ ಎರೆಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗೋಕಾಕ ನಗರ ಹಾಗೂ ತಾಲೂಕಿನಾದ್ಯಂತ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ರಾತ್ರಿಯಷ್ಟೆ ಮಾರ್ಕಂಡೆಯ ನದಿಗೆ ಅಡಲಾಗಿ ನಿರ್ಮಿಸಿರುವ ಚಿಕ್ಕೋಳಿ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ 2 ಅಡಿಯಷ್ಟು ನೀರು ಹರಿಯುತ್ತಿದೆ.
ಸೇತುವೆ ಮುಳುಗಡೆಯಾದರು ಸಹ ಜನರು ತಮ್ಮ ಜೀವದ ಹಂಗು ತೊರೆದು ಸೇತುವೆ ಮೇಲೆ ಸಂಚರಿಸುತ್ತಿರುವ ದೃಶ್ಯಗಳು ಚಿಕ್ಕೋಳಿ ಸೇತುವೆ ಮೇಲೆ ಕಂಡು ಬರುತ್ತಿವೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿನೀಡಿ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿ ಚಿಕ್ಕೋಳಿ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ತಹಶೀಲ್ದಾರ ಪ್ರಕಾಶ ಅವರು ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಈಗಾಗಲೇ ಎಸ್.ಡಿ ಆರ್.ಎಫ್ ನ 20 ಜನರ ತಂಡ ನಗರಕಿ ಆಗಮಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಮೂರು ಬೋಟಗಳನ್ನು ತರಿಸಲಾಗಿದ್ದು, ತಡರಾತ್ರಿ ಎನ್.ಡಿ.ಆರ್.ಎಫ್ ತಂಡದವರು ನಗರಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪೌರಾಯುಕ್ತ ಶಿವಾನಂದ ಹಿರೇಮಠ , ಪರಿಸರ ಅಭಿಯಂತ ಎಂ.ಎಚ್.ಗಜಾಕೋಶ ಉಪಸ್ಥಿತರಿದ್ದರು.