ಗೋಕಾಕ:ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು: ನೌರಕ ಸಂಘದ ಅಧ್ಯಕ್ಷ ಬಿ.ಆರ್.ಮುರಗೋಡ ಅಭಿಮತ

ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು: ನೌರಕ ಸಂಘದ ಅಧ್ಯಕ್ಷ ಬಿ.ಆರ್.ಮುರಗೋಡ ಅಭಿಮತ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 20 :
ಸರ್ಕಾರಿ ಕನ್ನಡ ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ, ಸಹಕಾರ ಅವಶ್ಯಕ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಕಳುಹಿಸಬೇಕೆಂದು ಇಲ್ಲಿಯ ನಿಂಗ್ಯಯ (ಅಂಬೇಡ್ಕರ್) ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಪ್ರಧಾನ ಗುರು ಮತ್ತು ಸರಕಾರಿ ನೌರಕ ಸಂಘದ ತಾಲೂಕಾಧ್ಯಕ ಬಿ.ಆರ್.ಮುರಗೋಡ ಹೇಳಿದರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಶುಕ್ರವಾರದಂದು ಶಾಲೆಯ ಮಕ್ಕಳಿಗೆ ಶೂ ಮತ್ತು ಸ್ವಾಕ್ಸ್ ವಿತರಿಸಿ ಮಾತನಾಡಿದ ಅವರು, ನಾಡಿನ ಪ್ರತಿಯೊಬ್ಬರೂ ಕನ್ನಡ ಶಾಲೆಗಳ ಉಳಿವಿಗೆ ಪ್ರಯತ್ನಿಸಬೇಕು ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಎಸಡಿಎಮಸಿ ಅಧ್ಯಕ್ಷ ನೂರ ಇಲಾಹಿ ಜಮಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಎಲ್ಲ ತರಗತಿಯ ಮಕ್ಕಳಿಗೆ ಶೂ ಮತ್ತು ಸ್ವಾಕ್ಸ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ ಎಂ ಸಿ ಸದಸ್ಯರಾದ ಸಾಧಿಕ ಹಲ್ಯಾಳ , ಯಾಕುಬ ಮುಜಾವರ , ಶಿಕ್ಷಕಿಯರಾದ ಶ್ರೀಮತಿ ಫೈರೋಜಾ ಚಿಕ್ಕುಂಬಿ, ಶ್ರೀಮತಿ ಸಲ್ಲಾಂ ಮುಲ್ಲಾ , ಕುಮಾರಿ ಶಾಹೀನ ಮಾರಿಹಾಳ, ಶ್ರೀಮತಿ ಮುಮ್ಮತಾಜ ಮುಲ್ಲಾ ಸೇರಿದಂತೆ ಶಿಕ್ಷಣಪ್ರೇಮಿಗಳು, ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು.