RNI NO. KARKAN/2006/27779|Friday, August 1, 2025
You are here: Home » breaking news » ಘಟಪ್ರಭಾ:ಅಕ್ರಮ ಚಟುವಟಿಕೆಗಳ ತಾಣವಾದ ಸರಕಾರಿ ಪ್ರಾಥಮಿಕ ಶಾಲೆ

ಘಟಪ್ರಭಾ:ಅಕ್ರಮ ಚಟುವಟಿಕೆಗಳ ತಾಣವಾದ ಸರಕಾರಿ ಪ್ರಾಥಮಿಕ ಶಾಲೆ 

ಅಕ್ರಮ ಚಟುವಟಿಕೆಗಳ ತಾಣವಾದ ಸರಕಾರಿ ಪ್ರಾಥಮಿಕ ಶಾಲೆ

 
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜೂ 28 :

 

ಕೋವಿಡ್‍ನಿಂದ ಸುಮಾರು 18 ತಿಂಗಳಿಂದ ಸ್ಥಗಿತಗೊಂಡಿರುವ ಸರ್ಕಾರಿ ಶಾಲೆ ಈಗ ಅಕ್ರಮ ಚಟುವಟಿಕೆಗಳ ತಾಣವಾಗಳಾಗಿ ಮಾರ್ಪಟ್ಟಿವೆ.

ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆ ಇದಕ್ಕೆ ಸಾಕ್ಷಿ ಯಾಗಿದ್ದು, ಶಾಲೆಯ ಆವರಣದಲ್ಲಿ ದಿನ ನಿತ್ಯ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಶಾಲೆಯ ಆವರಣ ಮದ್ಯ ವ್ಯಸನಿಗಳ ಅಡ್ಡೆಯಾಗಿದ್ದು, ಕಂಡಲ್ಲಿ ಬೀರ ಹಾಗೂ ಬ್ರ್ಯಾಂಡಿ ಬಾಟಲಿಗಳು ಕಾಣಿಸುತ್ತಿವೆ. ಕೋವಿಡ್‍ನಿಂದ ಬಾರಗಳಲ್ಲಿ ಕೇವಲ ಪಾರ್ಸಲ್ ವ್ಯವಸ್ಥೆ ಇರುವ ಕಾರಣ ಕುಡುಕರು ಶಾಲೆಯನ್ನೇ ಬಾರ್ ಮಾಡಿಕೊಂಡು ಪಾರ್ಟಿ ಮಾಡುತ್ತಿದ್ದಾರೆ.

ಶಿಕ್ಷಣ ಇಲಾಖೆ ಹಾಗೂ ಪೋಲಿಸರು ಈ ಅಕ್ರಮ ಚಟುವಟಿಕೆಗಳನ್ನು ಕೂಡಲೆ ತಡೆದು ಶಾಲೆಯ ಪರಿಸರವನ್ನು ಸ್ವಚ್ಛ ಹಾಗೂ ಸುರಕ್ಷಿತ ಗೊಳಿಸಬೇಕು ಹಾಗೂ ಶಾಲೆಯನ್ನು ಮಲೀನ ಗೊಳಿಸುತ್ತಿರುವ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕ ಆಗ್ರಹವಾಗಿದೆ.

Related posts: