ಗೋಕಾಕ:ಜಾಗತೀಕರಣದ ಮಧ್ಯ ದೇಶ ಮುನ್ನಡೆಯಲು ತಂತ್ರಜ್ಞಾನ ಅವಶ್ಯವಾಗಿದೆ : ಡಾ. ಸುಭಾಷ ಕಮ್ಮಾರ
ಜಾಗತೀಕರಣದ ಮಧ್ಯ ದೇಶ ಮುನ್ನಡೆಯಲು ತಂತ್ರಜ್ಞಾನ ಅವಶ್ಯವಾಗಿದೆ : ಡಾ. ಸುಭಾಷ ಕಮ್ಮಾರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 4 :
ಜಾಗತೀಕರಣದ ಮಧ್ಯ ದೇಶ ಮುನ್ನಡೆಯಲು ತಂತ್ರಜ್ಞಾನ ಅವಶ್ಯವಾಗಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಡಾ. ಸುಭಾಷ ಕಮ್ಮಾರ ಹೇಳಿದರು
ರವಿವಾರದಂದು ನಗರದ ಬಸವನಗರದಲ್ಲಿಯ ಡಾ. ನಿಂಗಣ್ಣ ಸಣ್ಣಕ್ಕಿ ಸಭಾ ಭವನದಲ್ಲಿ ಸ್ಥಳೀಯ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಏರ್ಪಡಿಸಿದ ವರ್ಣೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವೈಜ್ಞಾಣಿಕ ಬೆಳವಣಿಗೆಯಂತೆ ಲಲಿತಕಲೆಗಳ ಬೆಳವಣಿಗೆಯೂ ಆಗಬೇಕಿದೆ. ದೇಶೀಯ ಸಂಸ್ಕಂತಿಯ ಪ್ರತೀಕವಾದ ಕಲೆ, ಸಾಹಿತ್ಯ, ಸಂಗೀತ, ನಾಟಕ, ನೃತ್ಯಗಳ, ಉಪಾಸನೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ, ಇದು ಮನುಷ್ಯ ಆರೋಗ್ಯಕ್ಕೆ ಪೂರಕವಾಗಿದೆ ಎಂದು ಹೇಳಿದರು
ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ ಸ್ಥಳೀಯ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಪೂಜ್ಯ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು. ಅಧ್ಯಕ್ಷತೆಯನ್ನು ಹಿಡಕಲ್ ಡ್ಯಾಂನ ದಿ ಕರ್ನಾಟಕ ರೂರಲ ಎಜುಕೇಶನ್ ಸೋಸೈಟಿ ಚೇರಮನ್ ಬಸವರಾಜ ಕಡಕಬಾವಿ ವಹಿಸಿದ್ದರು
ಇದೇ ಸಂದರ್ಭದಲ್ಲಿ ಬೆಂಗಳೂರಿನ ಎ. ಎಸ್. ಕಂಬಾರ, ಗೋಕಾಕದ ಮೋನಿಕಾ ಹಲವಾಯಿ ಗೆ “ಗೋಕಾವಿ ವರ್ಣಸಿರಿ ಪ್ರಶಸ್ತಿ” ಪ್ರೌಡಶಾಲೆ ಹಾಗೂ ಪ್ರಾಥಮಿಕ ಶಾಲಾ ಪ್ರತಿಭಾವಂತ ಮಕ್ಕಳಿಗೆ “ಅರುಳು ರೇಖೆ ಪುರಸ್ಕಾರ” ನೀಡಿ ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ , ಹಿರಿಯ ಕಲಾವಿದರಾದ ಶಂಕರ ಮುಂಗರವಾಡಿ ಜಿ. ಎ. ಪತ್ತಾರ ಕನ್ನಡ ಜಾನಪದ ಪರಿಷತ್ತು ಅದ್ಯಕ್ಷ ಮಲ್ಲಿಕಾರ್ಜುನ ಈಟಿ ಜಾನಪದ ತಜ್ಞ ಡಾ. ನಿಂಗಣ್ಣಾ ಸಣ್ಣಕ್ಕಿ ಪ್ರತಿಷ್ಠಾನದ ಅಧ್ಯಕ್ಷ ಬಲದೇವ ಸಣ್ಣಕ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಪ್ರಾಚಾರ್ಯ ಜಯಾನಂದ ಮಾದರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಅದ್ಯಾಪಕಿ ಮಲ್ಲಮ್ಮ ದಳವಾಯಿ. ನಿರೂಪಿಸಿದರು. ಬಾಳಗೌಡ ಪಾಟೀಲ ವಂದಿಸಿದರು