ಬೆಳಗಾವಿ:ಬೆಳಗಾವಿಯಲ್ಲಿ ಡಿ 15 ರಿಂದ ರಂದು ಸತೀಶ ಶುಗರ್ಸ ಕ್ಲಾಸಿಕ ರಾಷ್ಟ್ರ ಮತ್ತು ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆ
ಬೆಳಗಾವಿಯಲ್ಲಿ ಡಿ 15 ರಿಂದ ರಂದು ಸತೀಶ ಶುಗರ್ಸ ಕ್ಲಾಸಿಕ ರಾಷ್ಟ್ರ ಮತ್ತು ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆ
ಬೆಳಗಾವಿ ಸೆ 14: ಹತ್ತನೇಯ ಸತೀಶ ಶುಗರ್ಸ ಕ್ಲಾಸಿಕ -2017 ಸಾಲಿನ ರಾಷ್ಟ್ರ ಮತ್ತು ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯನ್ನು ಡಿಸೆಂಬರ್ 15,16,17ರಂದು ನಗರದ ಸರ್ದಾರ ಮೈದಾನದಲ್ಲಿ ನಡೆಸಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ ಶಾಸಕ ಸತೀಶ ಜಾರಕಿಹೊಳಿ ಹೆಳಿದರು.
ನಗರದ ಸೋಷಿಯಲ್ ಕ್ಲಬ್ ಸಭಾ ಭವನದಲ್ಲಿ ಬುದವಾರ ನಡೆದ ಸ್ಪರ್ಧೆಯ ಪೂರ್ವ ಭಾವಿ ಸಭೆಯಲ್ಲಿ ಸಂಘಟಿಕರ ಜೋತೆ ಮಾತನಾಡುತ್ತ ಸ್ಪರ್ಧಾ ದಿನಾಂಕವನ್ನು ಪ್ರಕಟಿಸಿದರು.
ರಾಷ್ಟ್ರ ಮತ್ತು ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯ ಕಳೆದ ವರ್ಷದ ಬಹುಮಾನ ಮೊತ್ತವನ್ನು ಈ ಸಾಲಿನ ಸ್ಪರ್ಧೆಯಲ್ಲಿ ವಿಜೆತರಿಗೆ ಬಹುಮಾನ ಮೊತ್ತವನ್ನು ಹೆಚ್ಚಿಗೆ ನಿಡಲಾಗುವುದು ಎಂದು ಅವರು ತಿಳಿಸಿದರು.
ಈ ಸಾಲಿನ ರಾಷ್ಟ್ರ ಮಟ್ಟದ ದೇಹದಾರ್ಡ್ಯ ಸ್ಪರ್ಧೆ ಅತ್ಯಂತ ಸಿಸ್ತು ಬದ್ದು ಮತ್ತು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸಂಘಟಿಕರಿಗೆ ಸಲಹೆ ನಿಡಿದರು.
ಈ ಸಂಧರ್ಬದಲ್ಲಿ ಸುನೀಲ ಅಪ್ಟೇಕರ್ ,ಅಜೀತ ಸಿದ್ದಣ್ಣವರ, ಸಂಜು ದೇವರಮನಿ, ಎಮ್ ಗಂಗಾಧರ, ರಿಯಾಜ ಚೌಗಲಾ, ರಮೇಶ ಕಳ್ಳಿಮನಿ, ಮಹೆಶ ಸಾತಪುತೆ, ಶೇಖರ ಜಾನವೇಕರ ಇತರರು ಇದ್ದರು